ಈಕ್ವೆಡಾರ್ನಲ್ಲಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಗುಂಡಿಕ್ಕಿ ಹತ್ಯೆ
Fernando Villavicencio Death: ಈಕ್ವೆಡಾರ್(Ecuador)ನಲ್ಲಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಷ್ಟ್ರಪತಿ ಅಭ್ಯರ್ಥಿ ಫರ್ನಾಂಡೊ ವಿಲ್ಲಾವಿಸೆನ್ಸಿಯೋ ಮೇಲೆ ಗುಂಡು ಹಾರಿಸಲಾಗಿದೆ. ಚುನಾವಣಾ ಪ್ರಚಾರ ಮುಗಿಸಿ ನಡೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ,
ಈಕ್ವೆಡಾರ್(Ecuador)ನಲ್ಲಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಷ್ಟ್ರಪತಿ ಅಭ್ಯರ್ಥಿ ಫರ್ನಾಂಡೊ ವಿಲ್ಲಾವಿಸೆನ್ಸಿಯೋ ಮೇಲೆ ಗುಂಡು ಹಾರಿಸಲಾಗಿದೆ. ಚುನಾವಣಾ ಪ್ರಚಾರ ಮುಗಿಸಿ ನಡೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ, ಕಾರಿನ ಬಳಿ ತೆರಳುತ್ತಿದ್ದಾಗ ದುಷ್ಕರ್ಮಿಯಿಂದ ಏಕಾಏಕಿ ಗುಂಡಿನ ದಾಳಿ ಎನ್ನುವ ವಿಚಾರ ತಿಳಿದುಬಂದಿದೆ.
ಈಕ್ವೆಡಾರ್ನ ಕ್ವಿಟೊ ನಗರದಲ್ಲಿ ಫರ್ನಾಂಡೊ ವಿಲ್ಲಾವಿಸೆನ್ಸಿಯೋ ಹತ್ಯೆ ನಡೆದಿದೆ, ಈಕ್ವೆಡಾರ್ ರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 20ರಂದು ಚುನಾವಣೆ ನಡೆಯಲಿದೆ. ಫರ್ನಾಂಡೊ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಧ್ವನಿ ಎತ್ತಿದ್ದರು.
2007 ರಿಂದ 2017 ರ ವರೆಗೆ ರಾಫೆಲ್ ಕೊರಿಯಾ ಅವರ ಅಧಿಕಾರಾವಧಿಯಲ್ಲಿ ಅವರು ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ದೂರುಗಳನ್ನು ನೀಡಿದ್ದರು. ಅವರು 2017 ರಿಂದ ಮೇ 2023 ರವರೆಗೆ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ, ದಾಳಿಕೋರರು ಫರ್ನಾಂಡೊ ವಿಲ್ಲಾವಿಸೆನ್ಸಿಯೊ ಅವರ ತಲೆಗೆ ಮೂರು ಗುಂಡುಗಳು ಬಿದ್ದಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:11 am, Thu, 10 August 23