ಪ್ಯಾರಿಸ್: ಫ್ರೆಂಚ್ ಆಲ್ಪ್ಸ್‌ನ (French Alps) ಸುಂದರವಾದ ಪಟ್ಟಣವಾದ ಅನ್ನೆಸಿಯಲ್ಲಿ ಚಾಕು ದಾಳಿಯಲ್ಲಿ (Knife Attack) ಎಂಟು ಮಕ್ಕಳು ಮತ್ತು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕನಿಷ್ಠ ಮೂವರು ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಬೆಳಿಗ್ಗೆ 9.45 ರ ಸುಮಾರಿಗೆ, ಪಟ್ಟಣದ ಪ್ರಸಿದ್ಧ ಕೆರೆಯ ಸಮೀಪವಿರುವ ಮಕ್ಕಳ ಆಟದ ಮೈದಾನಕ್ಕೆ ಚಾಕು ಹಿಡಿದ ವ್ಯಕ್ತಿಯೊಬ್ಬರು ಪ್ರವೇಶಿಸಿದ್ದು, ಅಲ್ಲಿ ಆಟವಾಡುತ್ತಿದ್ದ ಸುಮಾರು ಮೂರು ವರ್ಷ ವಯಸ್ಸಿನ ಮಕ್ಕಳ ಗುಂಪಿನ ಮೇಲೆ ದಾಳಿ ಮಾಡಿದರು ಎಂದು ಭದ್ರತಾ ಮೂಲ ಮತ್ತು ಸ್ಥಳೀಯ ಅಧಿಕಾರಿ ಎಎಫ್ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಜನರು ಓಡುತ್ತಿದ್ದರು, ಅಳುತ್ತಿದ್ದರು, ಭಯಭೀತರಾಗಿದ್ದರು. ಇದು ಭಯಾನಕವಾಗಿದೆ ಎಂದು ನೆಲ್ಲಿ ಎಂಬ ಹೆಸರಿನ ಪ್ರತ್ಯಕ್ಷದರ್ಶಿ ಫ್ರಾನ್ಸ್ ಇನ್ಫೋ ರೇಡಿಯೊಗೆ ಹೇಳಿದ್ದಾರೆ. ನಾನು ಗಾಬರಿಗೊಂಡಿದ್ದೇನೆ. ಮಕ್ಕಳ ಮೇಲೆ ದಾಳಿ ಮಾಡುವುದು ಖಂಡನೀಯ. ನಿವಾಸಿಗಳು ಮತ್ತು ಪ್ರವಾಸಿಗರು ಇಷ್ಟಪಡುವ ಶಾಂತಿಯುತವಾದ ಸ್ಥಳದಲ್ಲಿ ಇಂದು ಬೆಳಿಗ್ಗೆ ಏನಾಯಿತು ಎಂಬುದು ಯೋಚಿಸಲಾಗದು. ನಾವು ತತ್ತರಿಸಿದ್ದೇವೆ ಎಂದು ಸಂಸದ ವರ್ಜಿನ್ ಡುಬಿ-ಮುಲ್ಲರ್ ಹೇಳಿದ್ದಾರೆ.
Plusieurs personnes dont des enfants ont été blessés par un individu armé d’un couteau dans un square à Annecy. L’individu a été interpellé grâce à l’intervention très rapide des forces de l’ordre.
— Gérald DARMANIN (@GDarmanin) June 8, 2023
ಪೊಲೀಸರು, ಭಯೋತ್ಪಾದನಾ ವಿರೋಧಿ ತನಿಖಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿತ್ತಿದ್ದಾರೆ. ಭದ್ರತಾ ಪಡೆಗಳ ಕ್ಷಿಪ್ರ ಪ್ರತಿಕ್ರಿಯೆಗೆ ಧನ್ಯವಾದಗಳು. ಶಂಕಿತನನ್ನು ಬಂಧಿಸಲಾಗಿದೆ ಎಂದು ಫ್ರೆಂಚ್ ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕೆನಡಾದಲ್ಲಿ ಖಲಿಸ್ತಾನಿ ಬೆಂಬಲಿಗರಿಂದ ಇಂದಿರಾ ಗಾಂಧಿ ಹತ್ಯೆಗೆ ಸಂಬಂಧಿಸಿದ ಸ್ತಬ್ಧಚಿತ್ರಗಳ ಮೆರವಣಿಗೆ
ಅನ್ನೆಸಿಯ ಚೌಕದಲ್ಲಿ ವ್ಯಕ್ತಿಯೊಬ್ಬರು ಚಾಕುವಿನಿಂದ ಮಕ್ಕಳೂ ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
32 ವರ್ಷ ವಯಸ್ಸಿನ ದಾಳಿಕೋರ, ಸಿರಿಯನ್ ಗುರುತಿನ ಪತ್ರಗಳನ್ನು ಹೊಂದಿದ್ದು, ನಿರಾಶ್ರಿತ ಎಂದು ಫ್ರಾನ್ಸ್ ಇನ್ಫೋ ವರದಿ ಮಾಡಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Thu, 8 June 23