Top News: ಇಂಗ್ಲೆಂಡ್​ಗೆ ಎಲೆನ್ ಚಂಡಮಾರುತದ ಹೊಡೆತ, ರಸ್ತೆಗಳು ನೀರುಪಾಲು

| Updated By: ಸಾಧು ಶ್ರೀನಾಥ್​

Updated on: Aug 20, 2020 | 4:12 PM

ಇಂಗ್ಲೆಂಡ್ ಸಮುದ್ರ ತೀರಕ್ಕೆ ಎಲೆನ್ ಚಂಡಮಾರುತ ಅಪ್ಪಳಿಸಿದೆ. ಭಾರಿ ಬಿರುಗಾಳಿ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಬೃಹತ್ ಗಾತ್ರದ ಅಲೆಗಳು ಎದ್ದಿವೆ. ಸಮುದ್ರದಲ್ಲಿ 15 ಅಡಿ ಎತ್ತರದ ಅಲೆಗಳು ಎದ್ದಿದ್ದು, ತಗ್ಗುಪ್ರದೇಶಗಳಿಗೆ ನೀರುನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹಲವೆಡೆ ಪ್ರಮುಖ ರಸ್ತೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ಟ್ರಂಪ್ ‘ಅಲೆ’ಗೆ ಚಲ್ಲಾಪಿಲ್ಲಿ! ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಪುನಾರಯ್ಕೆಗಾಗಿ ಹರಸಾಹಸಪಡ್ತಿದ್ದಾರೆ. ಪೋರ್ಟ್​ಲ್ಯಾಂಡ್​ನ ವಿಲ್ಲಾಮೇಟ್ ನದಿಯಲ್ಲಿ ಡೊನಾಲ್ಡ್ ಟ್ರಂಪ್ ನಿನ್ನೆ ಬೋಟ್ […]

Top News: ಇಂಗ್ಲೆಂಡ್​ಗೆ ಎಲೆನ್ ಚಂಡಮಾರುತದ ಹೊಡೆತ, ರಸ್ತೆಗಳು ನೀರುಪಾಲು
Follow us on

ಇಂಗ್ಲೆಂಡ್ ಸಮುದ್ರ ತೀರಕ್ಕೆ ಎಲೆನ್ ಚಂಡಮಾರುತ ಅಪ್ಪಳಿಸಿದೆ. ಭಾರಿ ಬಿರುಗಾಳಿ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಬೃಹತ್ ಗಾತ್ರದ ಅಲೆಗಳು ಎದ್ದಿವೆ. ಸಮುದ್ರದಲ್ಲಿ 15 ಅಡಿ ಎತ್ತರದ ಅಲೆಗಳು ಎದ್ದಿದ್ದು, ತಗ್ಗುಪ್ರದೇಶಗಳಿಗೆ ನೀರುನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹಲವೆಡೆ ಪ್ರಮುಖ ರಸ್ತೆಗಳು ನೀರಿನಲ್ಲಿ ಮುಳುಗಿ ಹೋಗಿವೆ.

ಟ್ರಂಪ್ ‘ಅಲೆ’ಗೆ ಚಲ್ಲಾಪಿಲ್ಲಿ!
ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಪುನಾರಯ್ಕೆಗಾಗಿ ಹರಸಾಹಸಪಡ್ತಿದ್ದಾರೆ. ಪೋರ್ಟ್​ಲ್ಯಾಂಡ್​ನ ವಿಲ್ಲಾಮೇಟ್ ನದಿಯಲ್ಲಿ ಡೊನಾಲ್ಡ್ ಟ್ರಂಪ್ ನಿನ್ನೆ ಬೋಟ್ ಱಲಿ ನಡೆಸಿದ್ರು. ಆದ್ರೆ ಟ್ರಂಪ್ ಬೋಟ್ ಱಲಿ ವೇಳೆ ಎಡವಟ್ಟಾಗಿದೆ. ಹತ್ತಾರು ಬೋಟ್​ಗಳು ಒಮ್ಮೆಲೆ ಸಂಚರಿಸಿದ ಪರಿಣಾಮ ನದಿಯಲ್ಲಿದ್ದ ಇತರೆ ಬೋಟ್​ಗಳು ಮಗುಚಿ ಬಿದ್ದಿವೆ.

ಕಮಲಾ ಹ್ಯಾರಿಸ್ ಪ್ರಚಾರ
ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣಾ ಕಾವು ಜೋರಾಗಿದೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷ ಸ್ಥಾನಕ್ಕೆ ಫೈಟ್ ಮಾಡ್ತಿದ್ದಾರೆ. ಡೆಮಾಕ್ರೆಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರೋ ಕಮಲಾ ಹ್ಯಾರಿಸ್ ಪ್ರಚಾರಕ್ಕೆ ಭವ್ಯ ವೇದಿಕೆ ಸಿದ್ಧಪಡಿಸಲಾಗಿದೆ. ವೇದಿಕೆ ಮೇಲಿರೋ ಪ್ರತಿಯೊಂದು ವಸ್ತುಗಳನ್ನೂ ಸ್ಯಾನಿಟೈಸ್ ಮಾಡಲಾಗಿದೆ. ಡಿ-20 ಅನ್ನೋ ಥೀಮ್ ಇಟ್ಟುಕೊಂಡು ಕಮಲಾ ಹ್ಯಾರಿಸ್ ಪ್ರಚಾರ ನಡೆಸ್ತಿದ್ದಾರೆ.

ಲಾಕ್​ಡೌನ್ ಮುಗೀತು, ಜಸ್ಟ್ ರಿಲ್ಯಾಕ್ಸ್
ಫ್ರಾನ್ಸ್​ನಲ್ಲಿ ಲಾಕ್​ಡೌನ್ ನಿಯಮ ಸಡಿಲಿಕೆ ಹಿನ್ನೆಲೆಯಲ್ಲಿ ನೂರಾರು ಜನರು ಪ್ರವಾಸಿ ತಾಣಗಳಿಗೆ ದೌಡಾಯಿಸಿದ್ದಾರೆ. ಬೀಚ್, ಪಾರ್ಕ್, ಶಾಪಿಂಗ್ ಮಾಲ್​ಗಳು ಹಲವು ತಿಂಗಳುಗಳಿಂದ ಬಂದ್ ಆಗಿತ್ತು. ಇದೀಗ ಫ್ರಾನ್ಸ್ ಸರ್ಕಾರ ಲಾಕ್​ಡೌನ್ ನಿಯಮ ಸಡಿಲಗೊಳಿಸಿದ ಹಿನ್ನೆಲೆ ಪ್ರವಾಸ ಪ್ರಿಯರು, ಶಾಪಿಂಗ್ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಆದ್ರೆ ಕೆಲವ್ರು ಮಾಸ್ಕ್ ಧರಿಸಿದ್ರೆ, ಮತ್ತೆ ಕೆಲವ್ರು ಮಾಸ್ಕ್ ಧರಿಸದೆ ಎಂಜಾಯ್ ಮಾಡ್ತಿದ್ದರು.

ಸೇನಾ ದಂಗೆ, ಅಧ್ಯಕ್ಷ ರಾಜೀನಾಮೆ
ಪಶ್ಚಿಮ ಆಫ್ರಿಕಾದ ಮಾಲಿ ದೇಶದಲ್ಲಿ ಸೇನಾ ದಂಗೆ ಆಗಿದೆ. ಅಧ್ಯಕ್ಷ ಇಬ್ರಾಹಿಂ ಬೋಬಾಕರ್ ಕೈಟಾ ವಿರುದ್ಧ ಸಿಡಿದೆದ್ದ ಸೇನೆ, ಆವ್ರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಸೇನೆ, ಶೀಘ್ರದಲ್ಲೇ ಚುನಬಾವಣೆ ನಡೆಸೋದಾಗಿ ಜನತೆಗೆ ಭರವಸೆ ನೀಡಿದೆ. ಹಗರಣ, ಆರ್ಥಿಕತೆ ನಿಭಾಯಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಜನರು ಆಕ್ರೋಶಗೊಂಡಿದ್ದರು.

ಪರೀಕ್ಷಾ ಕೇಂದ್ರವಾಯ್ತು ಸ್ಟೇಡಿಯಂ!
ಕೊರೊನಾ ಭೀತಿ ನಡುವೆಯೂ ಮೆಕ್ಸಕೋದಲ್ಲಿ ವಿದ್ಯಾರ್ಥಿಗಳು ಪ್ರವೇಶಪರೀಕ್ಷೆ ಎದುರಿಸಿದ್ರು. ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದ್ರು. ಮಾಸ್ಕ್ ಹಾಗೂ ಫೇಸ್ ಶೀಲ್ಡ್ ಧರಿಸಿಕೊಂಡ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದ್ರು. ಪ್ರವೇಶ ಪರೀಕ್ಷೆಗಾಗಿ ಬೃಹತ್ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಕನಸಲ್ಲೂ ಕಾಡ್ತಿದೆ ಕಾಡ್ಗಿಚ್ಚು!
ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡಿರೋ ಕಾಡ್ಗಿಚ್ಚು ಭೀಕರ ಸ್ವರೂಪ ಪಡೆದಿದೆ. ಜನವಸತಿ ಪ್ರದೇಶಗಳಿಗೂ ಭೀಕರ ಕಾಡ್ಗಿಚ್ಚು ವ್ಯಾಪಿಸಿದ್ದು, ಬೆಂಕಿ ನಿಯಂತ್ರಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸಪಡ್ತಿದ್ದಾರೆ. ಇನ್ನು ಕಾಡು ಪ್ರದೇಶವನ್ನು ಸಂಫೂರ್ಣ ಭಸ್ಮ ಮಾಡಿದ ಬೆಂಕಿ ಕೃಷಿ ಭೂಮಿಯನ್ನು ಸುಟ್ಟು ಬೂದಿ ಮಾಡ್ತಿದೆ. ಇದ್ರ ಜೊತೆಗೆ ಹಲವು ಮನೆಗಳು ಕಾಡ್ಗಿಚ್ಚಿಗೆ ಸುಟ್ಟು ಕರಕಲಾಗಿವೆ.

ಚೀನಾ ಸಮುದ್ರದಲ್ಲಿ ಸಬ್​ಮರೀನ್
ಒಂದೆಡೆ ಥಾಯ್​ಲ್ಯಾಂಡ್​ನ ಜಲಪ್ರದೇಶದಲ್ಲಿ ಅಮೆರಿಕಾ ತನ್ನ ಸಬ್​ಮರೀನ್ ತಂದು ನಿಲ್ಲಿಸ್ತಿದ್ದಂತೆ ಬೆದರಿದ ಚೀನಾ ಯುಲಿನ್ ನೌಕಾನೆಲೆಯಿಂದ ಹೈನಾನ್ ದ್ವೀಪಕ್ಕೆ ಸಬ್​ಮರೀನ್ ಮೂವ್ ಮಾಡಿದೆ. ಚೀನಾ ತನ್ನ ಸಬ್​ಮರೀನ್ ರವಾನೆ ಮಾಡಿರೋ ಸ್ಯಾಟಲೈಟ್ ಚಿತ್ರ ರಿಲೀಸ್ ಆಗಿದ್ದು, ಚೀನಾದ ಏಕೈಕ ಅಣ್ವಸ್ತ್ರ ಹೊಂದಿರೋ ಸಬ್​ಮರೀನ್ ಸಜ್ಜುಗೊಳಿಸಿರೋದು ಯುದ್ಧ ಭೀತಿ ಹೆಚ್ಚಳವಾಗಲು ಕಾರಣವಾಗಿದೆ.

ಶ್ವಾನಗಳ ಸರ್ಫಿಂಗ್ ಪ್ರಾಕ್ಟೀಸ್
ಅಮೆರಿಕಾದಲ್ಲಿ ನಡೆಯಲಿರೋ ಡಾಗ್ ಸರ್ಫಿಂಗ್ ರೇಸ್​ಗೆ ಸಿದ್ಧತೆ ನಡೆಸಲಾಗ್ತಿದೆ. ಬೀಚ್​ನಲ್ಲಿ ಶ್ವಾನಗಳಿಗೆ ಟ್ರೈನಿಂಗ್ ಕೊಡಲಾಗ್ತಿದ್ದು, ಸರ್ಫಿಂಗ್ ಬೋರ್ಡ್ ಏರಿ ಶ್ವಾನಗಳು ಸರ್ಫ್ ಮಾಡ್ತಿವೆ. ಶ್ವಾನಗಳ ಮಾಲೀಕರು ತಮ್ಮ ಶ್ವಾನಗಳನ್ನು ರೇಸ್​ಗೆ ಸಜ್ಜುಗೊಳಿಸ್ತಿದ್ದಾರೆ. ಪ್ರಾಕ್ಟೀಸ್ ವೇಳೆ ಮನುಷ್ಯರಂತೆಯೇ ಶ್ವಾನಗಳೂ ಸರ್ಫಿಂಗ್ ಬೋರ್ಡ್​ ಮೇಲೆ ನಿಂತು ಸರ್ಫ್ ಮಾಡ್ತಿವೆ.