ಜೂನ್ ತಿಂಗಳಲ್ಲಿ ಪಾಪ್ ಸ್ಟಾರ್ ಜಸ್ಟಿನ್ ಬೀಬರ್ (Justin Bieber) ತಮಗೆ ರಾಮ್ಸೆ ಹಂಟ್ ಸಿಂಡ್ರೋಮ್ ರೋಗ (Ramsay Hunt syndrome diagnosis) ಇರುವುದಾಗಿ ತಮ್ಮ ಅಭಿಮಾನಿಗಳಿಗೆ ಹೇಳಿದ್ದರು. ಇದೊಂದು ಅಪರೂಪದ ವೈದ್ಯಕೀಯ ಸ್ಥಿತಿ ಆಗಿದ್ದು ಇದರಿಂದಾಗಿ ಗಾಯಕನ ಮುಖದ ಒಂದು ಭಾಗಕ್ಕೆ ಪಾರ್ಶ್ವವಾಯು ತಗಲಿದೆ. ವಿಡಿಯೊದಲ್ಲಿ, ಅವರು ತಮ್ಮ ಮುಖದ ಒಂದು ಬದಿಯನ್ನು ಹೇಗೆ ಸರಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ತೋರಿಸಿದ್ದು, ಕೆಲವು ಸಂಗೀತ ಕಚೇರಿಗಳನ್ನು ರದ್ದುಗೊಳಿಸಲು ಇದೇ ಕಾರಣವೆಂದು ಹೇಳಿದ್ದರು.ಆದರೆ ಬೀಬರ್ ಇದಕ್ಕೆ ಕೋವಿಡ್ -19 ಲಸಿಕೆ (Covid-19 vaccine) ಕಾರಣ ಎಂದು ಹೇಳಿರುವ ಪೋಸ್ಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಅನೇಕರು ವ್ಯಾಂಕೋವರ್ ಟೈಮ್ಸ್‌ನ ವರದಿಯನ್ನು ಹಂಚಿಕೊಂಡಿದ್ದಾರೆ, ಕೋವಿಡ್ -19 ಲಸಿಕೆ ಮುಖದಲ್ಲಿ ಶಾಶ್ವತ ಪಾರ್ಶ್ವವಾಯುವಿಗೆ ಕಾರಣವಾಯಿತು ಎಂದು ಬೀಬರ್ ಹೇಳಿಕೊಂಡಿದ್ದಾರೆ ಎಂದು ಇದು ವರದಿ ಮಾಡಿದೆ. ಲಸಿಕೆ ನನ್ನ ಜೀವನವನ್ನು ಹಾಳುಮಾಡಿದೆ. ನಾನು ಈ ಅಪರಾಧಿಗಳನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿ ಮೊಕದ್ದಮೆ ಹೂಡಲಿದ್ದೇನೆ. ಫಿಜರ್‌ನ ಸಿಇಒ ಅವರ ಕ್ಲೋಸೆಟ್‌ನಲ್ಲಿ ಬಹಳಷ್ಟು ಅಸ್ಥಿಪಂಜರಗಳಿವೆ. ಈಗ ಇದು ಮರುಪಾವತಿಯ ಸಮಯವಾಗಿದೆ ಎಂದು ಜಸ್ಟಿನ್ ಬೀಬರ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಈ ಬಗ್ಗೆ ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಮಾಡಿದ್ದು ಇದು ಸುಳ್ಳು ಎಂದು ಹೇಳಿದೆ.ತನ್ನ ಮುಖದ ಪಾರ್ಶ್ವವಾಯುಗೆ ಕೋವಿಡ್ -19 ಲಸಿಕೆಗೆ ಕಾರಣವೆಂದು ಬೀಬರ್ ಹೇಳಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಜನರು ಶೇರ್ ಮಾಡುತ್ತಿರುವ ಸುದ್ದಿಯು ವಿಡಂಬನಾತ್ಮಕ ಸುದ್ದಿ.
Justin Bieber now admits that he regrets taking the Covid-19 vaccine, saying that it left him with permanent paralysis in his face. Bieber reportedly plans on suing Pfizer for causing his paralysis, despite the fact the company is shielded from liability.https://t.co/PZLIV6QZwc
— Richard ??? (@ToonFly73) June 16, 2022
ಫ್ಯಾಕ್ಟ್ ಚೆಕ್
ಈ ಬಗ್ಗೆ ಜನರು ವ್ಯಾಂಕೋವರ್ ಟೈಮ್ಸ್ ಲೇಖನವನ್ನು ತಮ್ಮ ಮೂಲವಾಗಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ಲೇಖನದ ಕೆಳಭಾಗದಲ್ಲಿ, ಈ ವರದಿಯು ವಿಡಂಬನಾತ್ಮಕವಾಗಿದೆ. ಆರೋಗ್ಯ ಅಧಿಕಾರಿಗಳು ಕೋವಿಡ್ -19 ಲಸಿಕೆಗಳನ್ನು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಪರಿಗಣಿಸುತ್ತಾರೆ. ವ್ಯಾಂಕೋವರ್ ಟೈಮ್ಸ್‌ನ ” About Us ” ವಿಭಾಗದಲ್ಲಿ “ವ್ಯಾಂಕೋವರ್ ಟೈಮ್ಸ್ ವೆಸ್ಟ್ ಕೋಸ್ಟ್‌ನಲ್ಲಿ ವಿಡಂಬನೆಗೆ ಅತ್ಯಂತ ವಿಶ್ವಾಸಾರ್ಹ ಮೂಲವಾಗಿದೆ. ಸಂಪ್ರದಾಯವಾದಿಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಕುರಿತು ನಾವು ವಿಡಂಬನಾತ್ಮಕ ಸುದ್ದಿಗಳನ್ನು ಬರೆಯುತ್ತೇವೆ ಎಂದಿದೆ. ಹಾಗಾಗಿ ಜಸ್ಟೀನ್ ಬೀಬರ್ ಬಗ್ಗೆ ಜನರು ಶೇರ್ ಮಾಡುತ್ತಿರುವ ಸುದ್ದಿ ವಿಡಂಬನಾತ್ಮಕವೇ ಹೊರತು ನಿಜವಾದ ಸುದ್ದಿ ಅಲ್ಲ.