Florida Mass Shooting: ಅಮೆರಿಕದ ಫ್ಲೋರಿಡಾದಲ್ಲಿ ಗುಂಡಿನ ದಾಳಿ, 10 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

|

Updated on: Jan 31, 2023 | 8:33 AM

ಅಮೆರಿಕದ ಫ್ಲೋರಿಡಾದಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Florida Mass Shooting: ಅಮೆರಿಕದ ಫ್ಲೋರಿಡಾದಲ್ಲಿ ಗುಂಡಿನ ದಾಳಿ, 10 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
ಪ್ಲೋರಿಡಾ ಶೂಟೌಟ್
Follow us on

ಅಮೆರಿಕದ ಫ್ಲೋರಿಡಾದಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಅಮೆರಿಕದಲ್ಲಿ ದಿನಕಳೆದಂತೆ ಶೂಟೌಟ್ ಪ್ರಕರಣಗಳು ಹೆಚ್ಚುತ್ತಿವೆ, ಈ ದುಷ್ಕರ್ಮಿಗಳು ಚಲಿಸುತ್ತಿರುವ ವಾಹನದಿಂದ ಮನಬಂದಂತೆ ಗುಂಡು ಹಾರಿಸಿದ್ದಾರೆ.

ಸ್ವಲ್ಪ ಸಮಯದ ನಂತರ ಅಲ್ಲಿಂದ ದುಷ್ಕರ್ಮಿಗಳು ತೆರಳಿದ್ದಾರೆ, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಗಾಯಗೊಂಡವರೆಲ್ಲರೂ 20 ರಿಂದ 35 ವರ್ಷ ವಯಸ್ಸಿನ ವಯಸ್ಕ ಪುರುಷರು, ಘಟನಾ ಸ್ಥಳದಲ್ಲಿ ಮಾದಕ ವಸ್ತುಗಳು ಪತ್ತೆಯಾಗಿವೆ.
ಮಧ್ಯಾಹ್ನ 3:43 ಕ್ಕೆ ಅಯೋವಾ ಅವೆನ್ಯೂ ನಾರ್ತ್ ಮತ್ತು ಪ್ಲಮ್ ಸ್ಟ್ರೀಟ್ ಬಳಿಯ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿದೆ.

ಅಮೆರಿಕದಲ್ಲಿ (USA) ಇತ್ತೀಚೆಗೆ ನಡೆದ 3 ಪ್ರತ್ಯೇಕ ಗುಂಡಿನ ದಾಳಿ ಪ್ರಕರಣಗಳಲ್ಲಿ ಇಬ್ಬರು ವಿದ್ಯಾರ್ಥಿಗಳೂ ಸೇರಿ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾ (North California) ಮತ್ತು ಐಯೋವಾದಲ್ಲಿ (Iowa) ಕೇವಲ 48 ಗಂಟೆಗಳ ಅಂತರದಲ್ಲಿ ಎರಡು ಗುಂಡಿನದಾಳಿ ಪ್ರಕರಣಗಳು ವರದಿಯಾಗಿವೆ. ಇದಕ್ಕೂ ಮೊದಲು ಲಾಸ್​ಏಂಜಲೀಸ್​ನಲ್ಲಿ ನಡೆಯುತ್ತಿದ್ದ ಚೀನೀ ಹೊಸವರ್ಷಾಚರಣೆಯ ಮೇಲೆ ನಡೆದಿದ್ದ ಗುಂಡಿನ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದರು.

ಮತ್ತಷ್ಟು ಓದಿ: ಅಮೆರಿಕದಲ್ಲಿ ದುರಂತಗಳ ಮೇಲೆ ದುರಂತ: ಒಂದೇ ದಿನ 3 ಪ್ರತ್ಯೇಕ ಗುಂಡಿನ ದಾಳಿಯಲ್ಲಿ 9 ಮಂದಿ ಸಾವು

ಉತ್ತರ ಕ್ಯಾಲಿಫೋರ್ನಿಯಾದ ಹಾಫ್ ಮೂನ್ ಬೇ ಎಂಬಲ್ಲಿ ಎರಡು ಪ್ರತ್ಯೇಕ ಗುಂಡಿನ ದಾಳಿ ಪ್ರಕರಣಗಳು ವರದಿಯಾಗಿವೆ. ಘಟನೆಯಲ್ಲಿ 7 ಮಂದಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ನಿಖರ ಅಂಕಿಸಂಖ್ಯೆಯ ಬಗ್ಗೆ ಪೊಲೀಸರು ಈವರೆಗೆ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಸ್ಯಾನ್ ಮಾಟಿಯೊ ಕೌಂಟಿ ಪೊಲೀಸರು ಟ್ವೀಟ್ ಮಾಡಿದ್ದು, ‘ಶಂಕಿತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಸಮುದಾಯಕ್ಕೆ ಯಾವುದೇ ಆತಂಕ ಇಲ್ಲ’ ಎಂದು ಹೇಳಿದ್ದಾರೆ. ಮೌಂಟೇನ್ ಮಶ್ರೂಮ್ ಫಾರ್ಮ್ ಎಂಬಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಇದೇ ಸ್ಥಳಕ್ಕೆ ಸಮೀಪವಿರುವ ರೈಸ್ ಟಕಿಂಗ್-ಸಾಯಿಲ್ ಫಾರ್ಮ್ ಎಂಬಲ್ಲಿ ನಡೆದ ಮತ್ತೊಂದು ಗುಂಡು ಹಾರಾಟ ಪ್ರಕರಣದಲ್ಲಿ ಮೂವರು ಮೃತಪಟ್ಟರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ನಂತರ ಮತ್ತೊಮ್ಮೆ ಮಾಹಿತಿಯನ್ನು ಅಪ್​ಡೇಟ್ ಮಾಡಿದ್ದ ಮಾಧ್ಯಮಗಳು ಎರಡೂ ಪ್ರಕರಣಗಳಲ್ಲಿ ಸತ್ತವರ ಸಂಖ್ಯೆ 7ಕ್ಕೇರಿದೆ ಎಂದು ಹೇಳಿದ್ದವು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ