ಪಾಕ್ ಸರ್ಕಾರದ ವಿರುದ್ಧ ಇಮ್ರಾನ್ ಖಾನ್ ನೇತೃತ್ವದ ‘ಹಖೀಕಿ ಆಜಾದಿ’ ಬೃಹತ್ ಯಾತ್ರೆಗೆ ಕ್ಷಣಗಣನೆ
ಇಸ್ಲಾಮಾಬಾದ್‌ಗೆ ಪಿಟಿಐನ ಬೃಹತ್ ಮಾರ್ಚ್ ಅನ್ನು ತಕ್ಷಣವೇ ನಿಲ್ಲಿಸಲು ಆದೇಶಿಸಿ ಎಂದು ಸರ್ಕಾರ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಮತ್ತು ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ (Imran Khan)ಅವರು ಹೊಸ ಚುನಾವಣೆಗೆ ಒತ್ತಾಯಿಸಿ ಲಾಹೋರ್‌ನಿಂದ ಇಸ್ಲಾಮಾಬಾದ್‌ಗೆ ಇಂದು ಬೃಹತ್ ಮಾರ್ಚ್ ಆರಂಭಿಸಲಿದ್ದಾರೆ. ಮೆರವಣಿಗೆಗೆ ಮುನ್ನ ಇಮ್ರಾನ್ ಖಾನ್ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ. ಮಾರ್ಚ್ ಸಾಗುವ ಮಾರ್ಗದಲ್ಲಿ ಮತ್ತು ಪಾಕಿಸ್ತಾನದ ರಾಜಧಾನಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.’ಹಖೀಕಿ ಆಜಾದಿ’ (Haqeeqi Azadi ನೈಜ ಸ್ವಾತಂತ್ರ್ಯ) ಮಾರ್ಚ್ ಕೆಲವೇ ಕ್ಷಣಗಳಲ್ಲಿ ಲಾಹೋರ್‌ನಿಂದ ಪ್ರಾರಂಭವಾಗಲಿದೆ ಎಂದು ಸ್ಥಳೀಯ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ನಾಯಕರಾದ ಯಾಸ್ಮೀನ್ ರಶೀದ್, ಹಮ್ಮದ್ ಅಜರ್, ಇತರರು ಮೆರವಣಿಗೆಯನ್ನು ಪ್ರಾರಂಭಿಸಲು ಲಾಹೋರ್‌ನ ಲಿಬರ್ಟಿ ಸ್ಕ್ವೇರ್‌ಗೆ ತೆರಳಿದ್ದಾರೆ. ಮಾರ್ಚ್ ಶಾಂತಿಯುತವಾಗಿ ಮತ್ತು ಕಾನೂನಿನ ಮಿತಿಯಲ್ಲಿ ನಡೆಯಲಿದೆ ಎಂದು ಪಿಟಿಐ ನಾಯಕರು ಭರವಸೆ ನೀಡಿದ್ದಾರೆ. ಪಿಟಿಐ ಬೆಂಬಲಿಗರು ಲಾಹೋರ್‌ನ ಲಿಬರ್ಟಿ ಚೌಕ್‌ನಲ್ಲಿ ಸೇರುತ್ತಾರೆ, ಅಲ್ಲಿಂದ ಮೆರವಣಿಗೆ ಪ್ರಾರಂಭವಾಗಲಿದೆ. ‘ಹಖೀಕಿ ಆಜಾದಿ ಲಾಂಗ್ ಮಾರ್ಚ್’ ಸರ್ಕಾರವನ್ನು ಪದಚ್ಯುತಗೊಳಿಸಲು ಅಥವಾ ರಚಿಸಲು ಅಲ್ಲ, ಆದರೆ ತಮ್ಮ ಭ್ರಷ್ಟಾಚಾರದ ಪ್ರಕರಣಗಳನ್ನು ಮನ್ನಾ ಮಾಡಲು ಅಧಿಕಾರವನ್ನು ಕಬಳಿಸಿದ ಕಳ್ಳರಿಂದ ದೇಶವನ್ನು ಮುಕ್ತಗೊಳಿಸುವುದಕ್ಕಾಗಿ ಈ ಮಾರ್ಚ್ ಕೈಗೊಂಡಿದ್ದೇವೆ ಎಂದು ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಹೇಳಿದ್ದಾರೆ.
ಇಸ್ಲಾಮಾಬಾದ್‌ಗೆ ಪಿಟಿಐನ ಬೃಹತ್ ಮಾರ್ಚ್ ಅನ್ನು ತಕ್ಷಣವೇ ನಿಲ್ಲಿಸಲು ಆದೇಶಿಸಿ ಎಂದು ಸರ್ಕಾರ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
مختلف علاقوں سے #حقیقی_آزادی_لانگ_مارچ کے قافلے لبرٹی کے لیے روانہ- pic.twitter.com/aB2WlG8SR7
— PTI (@PTIofficial) October 28, 2022
ಇಲ್ಲಿವರೆಗೆ ಖಾನ್ ಮತ್ತು ಅವರ ಪಕ್ಷವು ಆಯೋಜಿಸಿದ ರಾಜಕೀಯ ರ್ಯಾಲಿಗಳು ಮತ್ತು ಮೆರವಣಿಗೆಗಳು ಹಿಂಸಾಚಾರದ ಇತಿಹಾಸವನ್ನು ಹೊಂದಿವೆ. ಈ ರ್ಯಾಲಿಗಳಲ್ಲಿ ಸಾಮಾನ್ಯವಾಗಿ ಪೊಲೀಸ್ ಲಾಠಿ ಪ್ರಹಾರಗಳು ನಡೆದಿವೆ. ಇಸ್ಲಾಮಾಬಾದ್ ನಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಿದ್ದು ಸುತ್ತಮುತ್ತ 13,086 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಿಂಧ್ ಪ್ರಾಂತ್ಯದ 8,000 ಅರೆಸೈನಿಕ ಸಿಬ್ಬಂದಿ ಮತ್ತು 1,022 ಪೊಲೀಸರು ಕೂಡಾ ಕರ್ತವ್ಯ ನಿರತರಾಗಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಹಲವಾರು ಪ್ರಮುಖ ರಸ್ತೆಗಳು ಮತ್ತು ಪ್ರಮುಖ ಸಾರ್ವಜನಿಕ ಸ್ಥಳಗಳನ್ನು ಶಿಪ್ಪಿಂಗ್ ಕಂಟೈನರ್‌ಗಳಿಂದ ಮುಚ್ಚಲಾಗಿದೆ.