ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಇನ್ನೂ ಜನಪ್ರಿಯ, ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ!

ಟ್ರಂಪ್ ತಮ್ಮ 70 ನೇ ವಯಸ್ಸಿನಲ್ಲಿ ಅಮೇರಿಕದ ಅಧ್ಯಕ್ಷರಾಗಿ ಅತಿ ಹಿರಿ ವಯಸ್ಸಿನಲ್ಲಿ ಹುದ್ದೆಯನ್ನಂಲಕರಿಸಿದವರು ಎಂದೆನಿಸಿಕೊಂಡಿದ್ದರು. ಆದರೆ, ಅವರನ್ನು ಪದಚ್ಯುತಗೊಳಿಸಿದ ಜೋ ಬೈಡೆನ್ ತಮ್ಮ 78 ನೇ ವಯಸ್ಸಿನಲ್ಲಿ ಅಧ್ಯಕ್ಷರಾದರು.

ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಇನ್ನೂ ಜನಪ್ರಿಯ, ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ!
ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಜೆ ಟ್ರಂಪ್
Arun Belly

| Edited By: Skanda

Jun 15, 2021 | 8:50 AM

ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಪದಚ್ಯುತಗೊಂಡಿರಬಹುದು, ಆದರೆ ಅವರ ಜನಪ್ರಿಯತೆ ಪ್ರಾಯಶಃ ಇನ್ನೂ ಕಡಿಮೆಯಾದಂತಿಲ್ಲ. ಸೋಮವಾರದಂದು ಅವರು ತಮ್ಮ 75 ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಸಂದರ್ಭದಲ್ಲಿ ಸಾವಿರಾರು ಜನ ಅವರಿಗೆ ವಿಶ್​ ಮಾಡಿದ್ದಾರೆ. ಕೆಲವು ಭಕ್ತರಂತೂ ಅಮೆರಿಕಾದ ಕಂಡಿರುವ ಸರ್ವಶ್ರೇಷ್ಠ ಅಧ್ಯಕ್ಷನಿಗೆ ಬರ್ತ್​ಡೇ ವಿಶಸ್ ಎಂದು ಹೇಳುತ್ತಾ ಶುಭಾಶಯ ಕೋರಿದ್ದಾರೆ. ಜೂನ್ 14, 1946ರಲ್ಲಿ ಡೊನಾಲ್ಟ್ ಜೆ ಟ್ರಂಪ್ ಅವರು ನ್ಯೂ ಯಾರ್ಕ್ ಸಿಟಿಯಲ್ಲಿ ಜನಿಸಿದರು. ಕಾಕತಾಳೀಯವೆಂದರೆ, ಟ್ರಂಪ್ ಜನ್ಮದಿನ ತ್ತುತ್ತ ಅಮೆರಿಕದ ಫ್ಲ್ಯಾಗ್ ಡೇ ಒಂದೇ ದಿನ ಜರುಗುತ್ತವೆ. ಇದೇ ದಿನದಂದಯ ಯುಎಸ್, ನಕ್ಷತ್ರ ಮತ್ತು ಪಟ್ಟಿಗಳ ಧ್ವಜವನ್ನು ಅಧಿಕೃತ ರಾಷ್ಟ್ರೀಯ ಧ್ವಜವೆಂದು ಅಂಗೀಕರಿಸಿತ್ತು. ಆ ದೇಶದಲ್ಲಿ ಜೂನ್ 14 ರಾಷ್ಟ್ರೀಯ ರಜಾ ದಿನವಲ್ಲದಿದ್ದರೂ ಅನೇಕ ಅಮೇರಿಕನ್ನರು ತಮ್ಮ ಮನೆಗಳ ಮುಂದೆ ಧ್ವಜಗಳನ್ನು ಪ್ರದರ್ಶಿಸುತ್ತಾ ಅದನ್ನು ಆಚರಿಸುತ್ತಾರೆ.

ಟ್ರಂಪ್ ತಮ್ಮ 70 ನೇ ವಯಸ್ಸಿನಲ್ಲಿ ಅಮೇರಿಕದ ಅಧ್ಯಕ್ಷರಾಗಿ ಅತಿ ಹಿರಿ ವಯಸ್ಸಿನಲ್ಲಿ ಹುದ್ದೆಯನ್ನಂಲಕರಿಸಿದವರು ಎಂದೆನಿಸಿಕೊಂಡಿದ್ದರು. ಆದರೆ, ಅವರನ್ನು ಪದಚ್ಯುತಗೊಳಿಸಿದ ಜೋ ಬೈಡೆನ್ ತಮ್ಮ 78 ನೇ ವಯಸ್ಸಿನಲ್ಲಿ ಅಧ್ಯಕ್ಷರಾದರು.

ಟ್ರಂಪ್ ಅವರನ್ನು ಟ್ವಿಟ್ಟರ್ ಶಾಶ್ವತವಾಗಿ ಸಸ್ಪೆಂಡ್​ ಮಾಡಿದ್ದರೂ ಅವರ ಅಭಿಮಾನಿಗಳು ಇದೇ ಪ್ಲಾಟ್​ಫಾರ್ಮ್​ ಮೂಲಕ ಅವರಿಗೆ ಶುಭ ಕೋರಿದ್ದಾರೆ. ಸೋಮವಾರದಂದು ಹ್ಯಾಪಿ ಬರ್ತ್​ಡೇ ಮಿ ಪ್ರೆಸಿಡೆಂಟ್​ ಟ್ವಿಟ್ಚರ್​ನಲ್ಲಿ ಟ್ರೆಂಡಿಂಗ್ ಆಗುತ್ತಿತ್ತು. ಸುಮಾರು 3,500 ಜನ ಅವರಿಗೆ ಶುಭ ಹಾರೈಸಿದ್ದಾರೆ. ಜುನೈಟಾ ಬ್ರಾಡ್ರಿಕ್​ ಎನ್ನುವವರು, ‘ ನಿಮಗೆ ಶುಭ ಕೋರಲು ನಾನು ಮಧ್ಯರಾತ್ರಿಯವರೆಗೆ ಎಚ್ಚರವಾಗಿದ್ದೆ…ಇತಿಹಾಸದ ಅತ್ಯುತ್ತಮ ಪ್ರೆಸಿಡೆಂಟ್​ಗೆ ಹುಟ್ಟುಹಬ್ಬದ ಶುಭಾಷಯಗಳು, ಅಮೆರಿಕ ನಿಮ್ಮನ್ನು ಪ್ರೀತಿಸುತ್ತದೆ ಮತ್ತು ಮಿಸ್​ ಮಾಡಿಕೊಳ್ಳುತ್ತಿದೆ,’ ಎಂದು ಟ್ವೀಟ್ ಮಾಡಿದ್ದಾರೆ.

ಌಕ್ಟ್​ ಫಾರ್ ಅಮೆರಿಕ ಎನ್ನುವ ಟ್ವಿಟ್ಟರ್ ಹ್ಯಾಂಡಲ್​ನವರು, ‘ದಿ ಬೆಸ್ಟ್ ಪ್ರೆಸಿಡೆಂಟ್ ಡೊನಾಲ್ಟ್ ಜೆ ಟ್ರಂಪ್ ಅವರಿಗೆ ಹ್ಯಾಪಿ ಬರ್ತ್ ಡೇ,’ ಎಂದಿದ್ದಾರೆ.

ಌಕ್ಟ್​ ಫಾರ್ ಅಮೆರಿಕ ಸಂಸ್ಥಾಪಕಿ ಬ್ರಿಗೆಟ್ ಗೇಬ್ರಿಯಲ್ ಎನ್ನುವವರು, ‘ಅಮೇರಿಕನ್ ಇತಿಹಾಸದ ಶ್ರೇಷ್ಠ ಪ್ರೆಸಿಡೆಂಟ್​ಗಳಲ್ಲಿ ಒಬ್ಬರಾಗಿರುವ ಡೊನಾಲ್ಟ್ ಜೆ ಟ್ರಂಪ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅಮೇರಿಕದ ಅತಿ ದೊಡ್ಡ ರಾಷ್ಟ್ರಪ್ರೇಮಿ ಮತ್ತು ಯೋಧ ಫ್ಲ್ಯಾಗ್ ಡೇ ನಂದು ಹುಟ್ಟಿರುವುದು ಎಷ್ಟು ಅರ್ಥಪೂರ್ಣ!’ ಎಂದಿದ್ದಾರೆ.

ಫ್ಲ್ಯಾಗ್ ಆಫ್ ಯುಎಸ್​ಎ ಫೌಂಡರ್, ನಿಕ್ ಆಡಮ್ಸ್ ತಮ್ಮ ಟ್ವೀಟ್​ನಲ್ಲಿ, ‘ಸರ್ವಕಾಲಿಕ ಶ್ರೇಷ್ಠ ಅಧ್ಯಕ್ಷರಾಗಿರುವ ಡೊನಾಲ್ಟ್ ಜೆ ಟ್ರಂಪ್ ಅವರಿಗೆ ಹ್ಯಾಪಿ ಬರ್ತ್ ಡೇ,’ ಎಂದಿದ್ದಾರೆ.

ರಿಪಬ್ಲಿಕನ್ ಪಕ್ಷದ ರಾಜಕೀಯ ಕಾಮೆಂಟೇಟರ್ ಪ್ಯಾರಿಸ್ ಡೆನ್ನಾರ್ಡ್​, ‘ಯುನೈಟೆಡ್​ ಸ್ಟೇಟ್ಸ್​ನ 45 ನೇ ಅಧ್ಯಕ್ಷ ಡೊನಾಲ್ಟ್ ಜೆ ಟ್ರಂಪ್ ಅವರಿಗೆ 75ನೇ ಹ್ಯಾಪಿ ಬರ್ತ್ ಡೇ ಹೇಳಲು ನನ್ನೊಂದಿಗೆ ಜಾಯಿನ್ ಆಗಿ,’ ಎಂದು ಟ್ವೀಟ್ ಮಾಡಿದ್ದಾರೆ.

ವಿಮೆನ್ ಫಾರ್ ಟ್ರಂಪ್ ಸಹ-ಸಂಸ್ಥಾಪಕಿಯಾಗಿರುವ ಎಮಿ ಕ್ರೆಮರ್ ರವಿವಾರದಂದು, ‘ಇಂದು ಟ್ರಂಪ್​ ವೈನರಿಗೆ ಭೇಟಿ ನೀಡಿದ ಎಲ್ಲ ದೇಶಭಕ್ತರಿಂದ ಅಧ್ಯಕ್ಷ ಡೊನಾಲ್ಟ್ ಜೆ ಟ್ರಂಪ್ ಅವರಿಗೆ ಹ್ಯಾಪಿ ಬರ್ತ್ ಡೇ,’ ಎಂದು ಟ್ವೀಟ್​ ಮಾಡಿದ್ದಾರೆ.

ಆದರೆ ಇತರ ಕೆಲ ಟ್ವಿಟ್ಟರ್​ ಬಳಕೆದಾರರು, ಟ್ರಂಪ್ ಈಗ ಟ್ವಿಟ್ಟರ್ ಖಾತೆ ಹೊಂದಿಲ್ಲ ಮತ್ತು ಅವರ ಹುಟ್ಟುಹಬ್ಬಕ್ಕೆ ಮಾಡಿರುವ ಟ್ವೀಟ್​ಗಳನ್ನು ಅವರು ನೋಡಲಾರರು ಎಂದು ಜ್ಞಾಪಿಸಿದ್ದಾರೆ. ರಾಡ್ರಿಗೊ ಎನ್ನುವವರು, ‘ಅವರು ಪ್ರೆಸಿಡೆಂಟ್​ ಅಲ್ಲದಿರುವಾಗ ಹೇಗೆ ನೀವೆಲ್ಲ ಮಿ. ಪ್ರೆಸಿಡೆಂಟ್​ ಎಂದು ಸಂಬೋಧಿಸುತ್ತೀರಿ?’ ಅಂತ ಟ್ವೀಟ್​ ಮಾಡಿದ್ದಾರೆ.

ಕ್ಯಾಪಿಟಲ್ ಗಲಭೆಗಳ ನಂತರ, ಟ್ರಂಪ್ ಅವರ ಟ್ವೀಟ್​ಗಳು ಹಿಂಸೆಗೆ ಪ್ರಚೋದನೆ ನೀಡುವ ಅಪಾಯವಿದೆ ಎಂದು ಟ್ವಿಟ್ಟರ್​ ಸಂಸ್ಥೆಯು ಅವರನ್ನು ಜನವರಿಯಲ್ಲಿ ಸಸ್ಪೆಂಡ್​ ಮಾಡಿತ್ತು.

ಆ ಸಂದರ್ಭದಲ್ಲಿ ಟ್ವಿಟ್ಟರ್, ‘ಜನ ಪ್ರತಿನಿಧಿಗಳು ಮತ್ತು ವಿಶ್ವ ನಾಯಕರು ನಮ್ಮ ಸಂಸ್ಥೆಯ ನಿಯಮಗಳಿಗೆ ಮಿಗಿಲಾದವರಲ್ಲ. ಹಾಗಾಗಿ ನಮ್ಮ ವೇದಿಕೆಯನ್ನು ಅವರು ಹಿಂಸೆ ಪ್ರಚೋದಿಸಲಾಗಲೀ ಬೇರೆ ದುರುದ್ದೇಶಗಳಿಗಾಗಲೀ ಬಳಸುವಂತಿಲ್ಲ,’ ಎಂದು ಹೇಳಿತ್ತು.

ಇದನ್ನೂ ಓದಿ: Donald Trump: ಫೇಸ್​ಬುಕ್ ಖಾತೆಗೆ ನಿರ್ಬಂಧ: 75 ಮಿಲಿಯನ್ ಮತದಾರರಿಗೆ ಅವಮಾನ ಎಂದ ಡೊನಾಲ್ಡ್ ಟ್ರಂಪ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada