ಗಾಜಾದ ಆಸ್ಪತ್ರೆಯಲ್ಲಿ ಸಾಮೂಹಿಕ ಸಮಾಧಿ, 200ಕ್ಕೂ ಅಧಿಕ ಶವಗಳು ಪತ್ತೆ

|

Updated on: Apr 22, 2024 | 8:02 AM

ಗಾಜಾದಿಂದ ಇಸ್ರೇಲ್​ ಮಿಲಿಟರಿಯನ್ನು ಹಿಂಪಡೆದ ಬಳಿಕ ಆಸ್ಪತ್ರೆಯೊಂದರಲ್ಲಿ ಸಾಮೂಹಿಕ ಸಮಾಧಿ ಇರುವ ಕುರುಹು ಪತ್ತೆಯಾಗಿತ್ತು. ಅಲ್ಲಿ 200ಕ್ಕೂ ಅಧಿಕ ಮಂದಿ ಶವ ಸಿಕ್ಕಿದೆ.

ಗಾಜಾದ ಆಸ್ಪತ್ರೆಯಲ್ಲಿ ಸಾಮೂಹಿಕ ಸಮಾಧಿ, 200ಕ್ಕೂ ಅಧಿಕ ಶವಗಳು ಪತ್ತೆ
ಗಾಜಾ ಆಸ್ಪತ್ರೆ
Follow us on

ಗಾಜಾ(Gaza)ದ ಆಸ್ಪತ್ರೆ(Hospital)ಯೊಂದರಲ್ಲಿ 200ಕ್ಕೂ ಅಧಿಕ ಶವಗಳು ಪತ್ತೆಯಾಗಿವೆ. ಪ್ಯಾಲೆಸ್ತೀನ್ ನಾಗರಿಕ ರಕ್ಷಣಾ ಸಿಬ್ಬಂದಿ ಗಾಜಾದ ಖಾನ್ ಯೂನಿಸ್​ನಲ್ಲಿರುವ ನಾಸರ್ ಮೆಡಿಕಲ್ ಕಾಂಪ್ಲೆಕ್ಸ್​ನಲ್ಲಿ ಸಾಮೂಹಿಕ ಸಮಾಧಿ ಇರುವುದನ್ನು ಪತ್ತೆಹಚ್ಚಿದ್ದಾರೆ. ಇಸ್ರೇಲ್(Israel) ​ ಆರು ತಿಂಗಳಿಗಿಂತ ಹೆಚ್ಚು ಕಾಲ ಗಾಜಾದ ಮೇಲೆ ನಿರಂತರ ದಾಳಿ ನಡೆಸಿತ್ತು. ಏಪ್ರಿಲ್​ 7ರಂದು ಇಸ್ರೇಲಿ ಮಿಲಿಟರಿ ತನ್ನ ಸೇನೆಯನ್ನು ಹಿಂಪಡೆದಿದೆ.

ಬಳಿಕ ಎಲ್ಲೆಡೆ ರಕ್ಷಣಾ ಸಿಬ್ಬಂದಿಗಳು ಜನರನ್ನು ಹುಡುಕುವ ಪ್ರಯತ್ನವನ್ನು ಮುಂದುವರೆಸಿದ್ದಾರೆ, ಆಗ 180ಕ್ಕೂ ಅಧಿಕ ಶವಗಳು ಪತ್ತೆಯಾಗಿವೆ. ಇವುಗಳಲ್ಲಿ ಮಕ್ಕಳು, ಯುವಕರು , ಮಹಿಳೆಯರು ಕೂಡ ಸೇರಿದ್ದಾರೆ.ಇಸ್ರೇಲ್​ ಗಾಜಾ ಮೇಲೆ ನಡೆಸಿದ ದಾಳಿಯಲ್ಲಿ 34,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ. ಗಾಜಾದ ಎರಡು ದೊಡ್ಡ ನಗರಗಳನ್ನು ಧ್ವಂಸಗೊಳಿಸಿತ್ತು.

ಕಳೆದ ವರ್ಷ ಗಾಜಾದ ಅತಿದೊಡ್ಡ ಆಸ್ಪತ್ರೆ ಮೇಲೆ ಇಸ್ರೇಲ್ ಪಡೆಗಳು ದಾಳಿ ಮಾಡಿದ ಬಳಿಕ ವಿಶ್ವಸಂಸ್ಥೆಯು ಕಳವಳ ವ್ಯಕ್ತಪಡಿಸಿ ರೋಗಿಗಳನ್ನು ಹಾಗೂ ನಾಗರಿಕರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿತ್ತು.

ಮತ್ತಷ್ಟು ಓದಿ:ಇಸ್ರೇಲ್ ಇರಾನ್ ಸಂಘರ್ಷ; ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರಿಕೆಯ ಹೆಜ್ಜೆಗಳಿಡುತ್ತಿರುವ ಎರಡು ದೇಶಗಳು

ಇಸ್ರೇಲಿ ಪಡೆಗಳು ಅಲ್​-ಶಿಫಾ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದವು. ಈ ಆಸ್ಪತ್ರೆಯ ಕೆಳಗೆ ಸುರಂಗಗಳಲ್ಲಿ ಹಮಾಸ್ ಕಮಾಂಡ್ ಸೆಂಟರ್ ಇತ್ತು. ಇದೀಗ ಇರಾನ್ ಹಾಗೂ ಇಸ್ರೇಲ್​ ನಡುವೆ ಯುದ್ಧ ನಡೆಯುತ್ತಿದೆ. ಮೊದಲು ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸಿತ್ತು. ಬಳಿಕ ಇಸ್ರೇಲ್ ಕೂಡ ಇರಾನ್ ಮೇಲೆ ದಾಳಿ ನಡೆಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:02 am, Mon, 22 April 24