ನನ್ನ ಮತ್ತು ಮಿಚೆಲ್​ ಒಬಾಮಾ ಸ್ನೇಹದ ಕುರಿತು ಸಾರ್ವಜನಿಕರ ಅಭಿಪ್ರಾಯ ಕೇಳಿ ಆಶ್ಚರ್ಯವಾಗಿದೆ: ಜಾರ್ಜ್​ ಬುಷ್​

| Updated By: ganapathi bhat

Updated on: Apr 20, 2021 | 7:17 PM

ಎರಡು ಬೇರೆ ಬೇರೆ ಪಕ್ಷಗಳ ಈ ಗೆಳೆತನವು ಇದೀಗ ಅಮೆರಿಕ ಜನರ ಮಾತಿಗೆ ಕಾರಣವಾಗಿದೆ. ಈ ಕುರಿತಂತೆ ಆಶ್ಚರ್ಯಗೊಂಡ ಜಾರ್ಜ್​ ಡಬ್ಲ್ಯು ಬುಷ್​ ಸಿಬಿಎಸ್​ ನ್ಯೂಸ್​ನಲ್ಲಿ ಮಿಚೆನ್​ ಒಬಾಮಾ ಸ್ನೇಹದ ಕುರಿತಾಗಿ ಮಾತನಾಡಿದ್ದಾರೆ.

ನನ್ನ ಮತ್ತು ಮಿಚೆಲ್​ ಒಬಾಮಾ ಸ್ನೇಹದ ಕುರಿತು ಸಾರ್ವಜನಿಕರ ಅಭಿಪ್ರಾಯ ಕೇಳಿ ಆಶ್ಚರ್ಯವಾಗಿದೆ: ಜಾರ್ಜ್​ ಬುಷ್​
ಮಿಚೆಲ್​ ಒಬಾಮಾ ಮತ್ತು ಜಾರ್ಜ್​ ಡಬ್ಲ್ಯು ಬುಷ್​
Follow us on

ಅಮೆರಿಕಾದ ಜನರು ಮಿಚೆಲ್ ಒಬಾಮ ಮತ್ತು ನಾನು ಸ್ನೇಹಿತರಾಗಿರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದನ್ನು ಕೇಳಿದ ನನಗೆ ಹೆಚ್ಚು ಆಶ್ಚರ್ಯವಾಗಿದೆ ಎಂದು ಮಾಜಿ ಅಧ್ಯಕ್ಷ ಜಾರ್ಜ್​ ಡಬ್ಲ್ಯು ಬುಷ್​ ಹೇಳಿದ್ದಾರೆ. 2016ರಲ್ಲಿ ಸ್ಮಿತ್​ಸೋನಿಯನ್​ ನ್ಯಾಷನಲ್ ಆಫ್​ ಆಫ್ರಿಕನ್​ ಅಮೇರಿಕನ್​ ಹಿಸ್ಟರಿ ಆ್ಯಂಡ್​ ಕಲ್ಚರ್​ ಸಂಸ್ಥೆ ಮಿಚೆಲ್​​ ಒಬಾಮಾ ಮತ್ತು ಜಾರ್ಜ್​ ಡಬ್ಲ್ಯು ಬುಷ್​ ತಬ್ಬಿಕೊಂಡಿರುವ ದೃಶ್ಯ ಹಂಚಿಕೊಂಡಿತ್ತು. ಆ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು.

ಎರಡು ಬೇರೆ ಬೇರೆ ಪಕ್ಷಗಳ ಈ ಗೆಳೆತನವು ಇದೀಗ ಅಮೆರಿಕ ಜನರ ಮಾತಿಗೆ ಕಾರಣವಾಗಿದೆ. ಈ ಕುರಿತಂತೆ ಆಶ್ಚರ್ಯಗೊಂಡ ಜಾರ್ಜ್​ ಡಬ್ಲ್ಯು ಬುಷ್​ ಸಿಬಿಎಸ್​ ಸುದ್ದಿ ನ್ಯೂಸ್​ನಲ್ಲಿ ಮಿಚೆಲ್​ ಒಬಾಮಾ ಸ್ನೇಹದ ಕುರಿತಾಗಿ ಮಾತನಾಡಿದ್ದಾರೆ. ಅಮೆರಿಕ ಜನರ ಪ್ರತಿಕ್ರಿಯೆ ಬಗ್ಗೆ ಆಶ್ಚರ್ಯಗೊಂಡಿರುವುದನ್ನೂ ಬುಷ್ ಹಂಚಿಕೊಂಡಿದ್ದಾರೆ.

ನಾವು ಕಾರಿನಲ್ಲಿ ಬಂದಿಳಿದಾಗ, ಜೆನ್ನಾ ಅವರು, ನೀವು ಇದೀಗ ಟ್ರೆಂಡ್​ ಆಗಿದ್ದೀರಿ. ನೀವು ಮತ್ತು ಮಿಚೆಲ್ ಒಬಾಮ ಗೆಳೆತನ ಕಂಡು ಅಮೆರಿಕದ ಜನರು ಆಶ್ಚರ್ಯ ಚಕಿತರಾಗಿದ್ದಾರೆ ಎಂಬ ಮಾತನ್ನು ಹೇಳಿದರು. ಅದನ್ನು ಕೇಳಿ ನನಗೂ ಆಶ್ಚರ್ಯವಾಯಿತು ಎಂದು ಸಿಬಿಎಸ್​ ಸುದ್ದಿ ಸಂದರ್ಶನದಲ್ಲಿ ಬುಷ್​ ಹೇಳಿದ್ದಾರೆ.

ನಮ್ಮ ನಮ್ಮ ಪಾಲಿಸಿಗಳು ಬೇರೆ. ಆದರೆ ಮಾನವೀಯತೆ ಒಂದೇ. ಪ್ರೀತಿಯಲ್ಲಿ ಯಾವುದೇ ಬೇಧವಿಲ್ಲ. ಇದು ಎಲ್ಲರಿಗೂ ಸಮಾನವಾದದ್ದು ಎಂದು ಹೇಳಿದ್ದಾರೆ. ಮತ್ತೊಂದು ಕಾರ್ಯಕ್ರಮದಲ್ಲಿ ಕೂಡಾ ಒಬಾಮಾ ಮತ್ತು ಬುಷ್​ರವರ ಫೋಟೋಗಳು ಮತ್ತು ಕೆಲವು ಹಾಸ್ಯ ಪ್ರಸಂಗಗಳು ಸುದ್ದಿಯಾಗಿದ್ದವು. ನಾನು ಮಾಡುವ ತಮಾಷೆಗಳನ್ನು, ನನ್ನ ತಮಾಷೆ ಗುಣವನ್ನು ಮಿಚೆಲ್ ಒಬಾಮಾ ಹೆಚ್ಚು ಇಷ್ಟ ಪಡುತ್ತಾರೆ. ನನ್ನ ಹಾಸ್ಯ ಪ್ರಜ್ಞೆಯನ್ನು ಇಷ್ಟ ಪಡುವ ಯಾರಾದರೂ ನನಗೆ ಇಷ್ಟವಾಗುತ್ತಾರೆ ಎಂದು ಬುಷ್ ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಕುರಿತ ಒಬಾಮಾರ ಕಾಮೆಂಟ್​ಗೆ ಶಿವ ಸೇನಾ ತೀವ್ರ ಆಕ್ಷೇಪಣೆ | Obama has no right to make comments on Indian politicians: Shiv Sena