ಆಸ್ಪತ್ರೆಯಲ್ಲಿ ಕಳುವಾಗಿತ್ತು ಒಂದು ಮಗು, 19 ವರ್ಷದ ಬಳಿಕ ಅವಳಿ ಸಹೋದರಿಯರು ಭೇಟಿಯಾದಾಗ..

ಈ ಘಟನೆ ನೋಡಿದಾಗ ಬಾಲಿವುಡ್​ ಸಿನೆಮಾ ಸೀತಾ ಔರ್ ಗೀತಾ ನೆನಪಿಗೆ ಬರುವುದು ಪಕ್ಕಾ. ಇಬ್ಬರು ಅವಳಿ ಸಹೋದರಿಯರು 19ವರ್ಷಗಳ ಬಳಿಕ ಮುಖಾಮುಖಿಯಾಗಿರುವ ಘಟನೆ ಪೂರ್ವ ಯುರೋಪಿಯನ್ ರಾಷ್ಟ್ರವಾದ ಜಾರ್ಜಿಯಾದಲ್ಲಿ ನಡೆದಿದೆ. ಆಮಿ ಖ್ವಿಟಿಯಾ ಮತ್ತು ಅನೋ ಸರ್ತಾನಿಯಾ, ಹುಟ್ಟಿನಿಂದಲೇ ಬೇರ್ಪಟ್ಟ ಐಡೆಂಟಿಕಲ್ ಟ್ವಿನ್ಸ್​(ಒಂದೇ ರೀತಿಯ ಅವಳಿ) ಭೇಟಿಯಾಗಿದ್ದಾರೆ.

ಆಸ್ಪತ್ರೆಯಲ್ಲಿ ಕಳುವಾಗಿತ್ತು ಒಂದು ಮಗು, 19 ವರ್ಷದ ಬಳಿಕ ಅವಳಿ ಸಹೋದರಿಯರು ಭೇಟಿಯಾದಾಗ..
ಜಾರ್ಜಿಯಾ -ಅವಳಿ

Updated on: Jan 26, 2024 | 10:28 AM

ಈ ಘಟನೆ ನೋಡಿದಾಗ ಬಾಲಿವುಡ್​ ಸಿನೆಮಾ ‘ಸೀತಾ ಔರ್ ಗೀತಾ’ ನೆನಪಿಗೆ ಬರುವುದು ಪಕ್ಕಾ. ಇಬ್ಬರು ಅವಳಿ ಸಹೋದರಿಯರು 19ವರ್ಷಗಳ ಬಳಿಕ ಮುಖಾಮುಖಿಯಾಗಿರುವ ಘಟನೆ ಪೂರ್ವ ಯುರೋಪಿಯನ್ ರಾಷ್ಟ್ರವಾದ ಜಾರ್ಜಿಯಾದಲ್ಲಿ ನಡೆದಿದೆ. ಆಮಿ ಖ್ವಿಟಿಯಾ ಮತ್ತು ಅನೋ ಸರ್ತಾನಿಯಾ, ಹುಟ್ಟಿನಿಂದಲೇ ಬೇರ್ಪಟ್ಟ ಐಡೆಂಟಿಕಲ್ ಟ್ವಿನ್ಸ್​(ಒಂದೇ ರೀತಿಯ ಅವಳಿ) ಭೇಟಿಯಾಗಿದ್ದಾರೆ.

ಆಮಿ ಹಾಗೂ ಅನೋ ಅವರ ತಾಯಿ 2002ರಲ್ಲಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ಶಿಶುಗಳನ್ನು ಕದ್ದು ಮಾರಾಟ ಮಾಡುವ ದಂಧೆಯೂ ವಿಪರೀತವಾಗಿತ್ತು. ಮಗುವಿಗೆ ಜನ್ಮಕೊಟ್ಟ ಬಳಿಕ ತಾಯಿಗೆ ಹಲವಾರು ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಕೋಮಾಗೆ ಜಾರಿದ್ದರು. ಆ ಸಮಯದಲ್ಲಿ ಯಾರೋ ಮಗುವನ್ನು ಕದ್ದು ಪರಾರಿಯಾಗಿದ್ದರು.

ಕಳೆದ 19 ವರ್ಷಗಳಲ್ಲಿ ಇಬ್ಬರೂ ಒಂದೇ ನಗರದಲ್ಲಿದ್ದರೂ ಎಂದೂ ಮುಖಾಮುಖಿಯಾಗಿರಲಿಲ್ಲ. ವೈರಲ್ ಟಿಕ್‌ಟಾಕ್ ವೀಡಿಯೊ ಮತ್ತು ಟ್ಯಾಲೆಂಟ್ ಶೋ ಮೂಲಕ ಇಬ್ಬರೂ ಭೇಟಿಯಾಗಿದ್ದಾರೆ. ಬಿಬಿಸಿ ಈ ವರದಿ ಮಾಡಿದ್ದು, ಜಾರ್ಜಿಯಾವನ್ನು ಬಾಧಿಸುತ್ತಿರುವ ದೊಡ್ಡ ಸಮಸ್ಯೆಯ ಮೇಲೆ ಈ ವರದಿ ಬೆಳಕು ಚೆಲ್ಲುತ್ತದೆ, ದಶಕಗಳಿಂದ ಶಿಶುಗಳ ಕಳ್ಳತನ ನಡೆಯುತ್ತಿದ್ದು, ಇನ್ನೂ ಕೂಡ ಆ ಸಮಸ್ಯೆ ಬಗೆಹರಿಯದೇ ಉಳಿದಿದೆ.

ಮತ್ತಷ್ಟು ಓದಿ: ಯಾವ ಸೌಲಭ್ಯವೂ ಇಲ್ಲದ ಮನೆಯಲ್ಲಿ 9 ವರ್ಷದ ಮಗನನ್ನು 2 ವರ್ಷಗಳ ಕಾಲ ಒಂಟಿಯಾಗಿರಿಸಿದ್ದ ಮಹಿಳೆಗೆ ಜೈಲು ಶಿಕ್ಷೆ

ತನ್ನ ಅಚ್ಚುಮೆಚ್ಚಿನ ಟಿವಿ ಶೋ ‘ಜಾರ್ಜಿಯಾಸ್ ಗಾಟ್ ಟ್ಯಾಲೆಂಟ್’ ನಲ್ಲಿ ಭಾಗವಹಿಸಿದ್ದ ಆಮಿ, ತನ್ನೊಂದಿಗೆ ಹೋಲಿಕೆ ಇರುವ ಹುಡುಗಿಯೊಬ್ಬಳು ನೃತ್ಯ ಮಾಡುವುದನ್ನು ನೋಡಿದಳು. ಆ ಬಾಲಕಿ ತನ್ನ ಸಹೋದರಿ ಎಂದು ತಿಳಿದಿರಲಿಲ್ಲ.
ಅನೋ ಅವರು ನೀಲಿ ಕೂದಲಿನ ಬಾಲಕಿ ಇರುವ ಟಿಕ್‌ಟಾಕ್ ವೀಡಿಯೊವನ್ನು ನೋಡಿದ್ದಳು, ಆಕೆ ತನ್ನಂತೆಯೇ ಇದ್ದಾಳಲ್ಲಾ ಅಂದುಕೊಂಡಿದ್ದಳು.

ಅನೋ ಟಿಬಿಲಿಸಿಯಲ್ಲಿ ಬೆಳೆದರು, ಆದರೆ ಆಮಿ ಜುಗ್ಡಿಡಿಯಲ್ಲಿ ಬೆಳೆದರು, ಇಬ್ಬರೂ ಪರಸ್ಪರರ ಅಸ್ತಿತ್ವದ ಬಗ್ಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. 11 ನೇ ವಯಸ್ಸಿನಲ್ಲಿ ಅದೇ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೂ, ನೋಡುಗರು ಎದ್ದುಕಾಣುವ ಹೋಲಿಕೆಯನ್ನು ಗಮನಿಸಿದರೂ, ಸತ್ಯವು ಅಸ್ಪಷ್ಟವಾಗಿ ಉಳಿದಿತ್ತು. ಬಳಿಕ ತಂದೆಯ ಮೂಲಕ ವಿಚಾರ ತಿಳಿದು ಇಬ್ಬರೂ ಸಂಪರ್ಕಕ್ಕೆ ಬಂದರು.

ಬಿಬಿಸಿ ವರದಿಯ ಪ್ರಕಾರ, ಎರಡು ವರ್ಷಗಳ ಹಿಂದೆ ಜಾರ್ಜಿಯಾದ ರಾಜಧಾನಿ ಟಿಬಿಲಿಸಿಯ ರುಸ್ತಾವೇಲಿ ಸೇತುವೆಯ ಮೇಲೆ ಆಮಿ ಮತ್ತು ಅನೋ ಅವರು 19 ವರ್ಷಗಳ ಹಿಂದೆ ಬೇರ್ಪಟ್ಟ ನಂತರ ಮೊದಲ ಬಾರಿಗೆ ಭೇಟಿಯಾದರು. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 10:27 am, Fri, 26 January 24