Global Day of Parents 2021: ಪಾಲಕರ ದಿನದ ಇತಿಹಾಸ, ಮಹತ್ವ ಮತ್ತು ಈ ವರ್ಷದ ವಿಶೇಷ ಸಂದೇಶ ತಿಳಿಯಿರಿ

|

Updated on: Jun 01, 2021 | 10:38 AM

Global Day of Parents: ಮಕ್ಕಳ ಪಾಲನೆ ಪೋಷಣೆ ಮಾಡುತ್ತಾ ಅವರ ಏಳಿಗೆಯನ್ನು ಬಯಸುವವರು ಪಾಲಕರು ಅಥವಾ ಪೋಷಕರು. ಮಕ್ಕಳ ರಕ್ಷಣೆಯ ಜತೆಗೆ ಅವರಿಗೆ ಕುಟುಂಬದ ಪ್ರೀತಿ, ವಾತ್ಸಲ್ಯ, ಮಮತೆಯ ಜತೆಗೆ ಉತ್ತಮ ವಾತಾವಣ ಇರಬೇಕು.

Global Day of Parents 2021: ಪಾಲಕರ ದಿನದ ಇತಿಹಾಸ, ಮಹತ್ವ ಮತ್ತು ಈ ವರ್ಷದ ವಿಶೇಷ ಸಂದೇಶ ತಿಳಿಯಿರಿ
Global Day Of Parents 2021
Follow us on

ಪೋಷಕರ ಜಾಗತಿಕ ದಿನವನ್ನು ಪ್ರತಿ ವರ್ಷ ಜೂನ್​ 1ರಂದು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಪೋಷಕರನ್ನು ಮೆಚ್ಚುವ ದಿನವಿದು. ಮಕ್ಕಳು ಮತ್ತು ಪೋಷಕರ ನಡುವಿನ ಅನನ್ಯ ಬಂಧವನ್ನು ಆಚರಿಸುವ ದಿನವಿದು. ಮಕ್ಕಳ ಸಂತೋಷವನ್ನು ಕಾಣುತ್ತಾ ಅವರ ರಕ್ಷಣೆಯಲ್ಲಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಪಾಲಕರಿಗೆ ಈ ದಿನದಂದು ಶುಭಾಶಯ ಹೇಳಲೇಬೇಕು.

ಮಕ್ಕಳ ಪಾಲನೆ ಪೋಷಣೆ ಮಾಡುತ್ತಾ ಅವರ ಏಳಿಗೆಯನ್ನು ಬಯಸುವವರು ಪಾಲಕರು ಅಥವಾ ಪೋಷಕರು. ಮಕ್ಕಳ ರಕ್ಷಣೆಯ ಜತೆಗೆ ಅವರಿಗೆ ಕುಟುಂಬದ ಪ್ರೀತಿ, ವಾತ್ಸಲ್ಯ, ಮಮತೆಯ ಜತೆಗೆ ಉತ್ತಮ ವಾತಾವಣ ಇರಬೇಕು. ಅದು ಕುಟುಂಬದರವ ಜತೆಗೆ ಕೂಡಿ ಬಾಳಿದರೆ ಮಾತ್ರ ಸಾಧ್ಯ.

ಇತಿಹಾಸ
1993ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೇ 15ನೇ ತಾರೀಕಿನಂದು ಅಂತರಾಷ್ಟ್ರೀಯ ಕುಟುಂಬ ದಿನವನ್ನು ಆಚರಿಸಬೇಕು ಎಂಬುದನ್ನು ನಿರ್ಧರಿಸಿತು. ಕುಟುಂಬಗಳಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಆದುದರಿಂದ ಪೋಷಕರನ್ನು ಪ್ರಶಂಸಿಸಲು ಪೋಷಕರ ಜಾಗತಿಕ ದಿನವನ್ನು ಆಚರಿಸಬೇಕೆಂದು 2012ರಲ್ಲಿ ನಿರ್ಧರಿಸಲಾಯಿತು. ಮಕ್ಕಳು ತಮ್ಮ ಕುಟುಂಬ ಪರಿಸರದಲ್ಲಿ ಪ್ರೀತಿ ಸಂತೋಷ ಮತ್ತು ತಿಳುವಳಿಕೆಯಿಂದ ಬಾಳಬೇಕು ಹಾಗೂ ಒಳ್ಳೆಯ ವಾತಾವಣದಲ್ಲಿ ಮಕ್ಕಳು ಬೆಳೆಯಬೇಕು ಪೋಷಕರ ಪಾತ್ರ ದೊಡ್ಡದು. ಮಕ್ಕಳ ಪೋಷಣೆ ಜತೆಗೆ ರಕ್ಷಣೆ ಮಾಡುವಲ್ಲಿ ಪ್ರಾಥಮಿಕ ಜವಾಬ್ದಾರಿ ಪಾಲಕರಿಗಿದೆ ಹಾಗಾಗಿ ಪೋಷಕರನ್ನು ಪ್ರಶಂಸಿಸಲು ಪಾಲಕರ ದಿನವನ್ನು ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು.

ಈ ವರ್ಷದ ವಿಶೇಷ ಸಂದೇಶ
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಜಾಗತಿಕವಾಗಿ ಪೋಷಕರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮನೆಯವರಿಗೆ ನೋವಾಗದಂತೆ ಹಾಗೂ ಮಕ್ಕಳ ಸುರಕ್ಷತೆಯನ್ನು ಬಯಸುವವರು ಪಾಲಕರು. ಪ್ರಸ್ತುತ ಸಂದರ್ಭದಲ್ಲಿ ಮನೆಯೇ ಮಕ್ಕಳ ಶಾಲೆಯಾಗಿದೆ. ಈ ಸಂದರ್ಭದಲ್ಲಿ ಅವರ ಜೀವನ ಮೌಲ್ಯವನ್ನು ಕಟ್ಟಿಕೊಡುವಲ್ಲಿ ಪೋಷಕರ ಪಾತ್ರ ದೊಡ್ಡದು. ಆದ್ದರಿಂದ ಈ ವರ್ಷ ‘ವಿಶ್ವದ ಎಲ್ಲ ಪಾಲಕ-ಪೋಷಕರಿಗೆ ಶ್ಲಾಘನೆ’ ಎಂಬುದು ಈ ವರ್ಷದ ವಿಶೇಷ ಸಂದೇಶವಾಗಿದೆ.

ಅವರ ಒತ್ತಡದ ಕೆಲಸದ ನಡುವೆಯೂ ತಮ್ಮ ಮಕ್ಕಳನ್ನು ಜವಾಬ್ದಾರಿಯಿಂದ ರಕ್ಷಿಸುತ್ತಿದ್ದಾರೆ. ಮಕ್ಕಳಿಗೆ ಆರ್ಥಿಕವಾಗಿ ಸಹಾಯ ಮಾಡುವುದಲ್ಲದೇ, ಮಾನಸಿಕ ಮತ್ತು ಮೂಲಭೂತ ಬೆಂಬಲವನ್ನು ನೀಡುತ್ತಿರುವ ಪೋಷಕರಿಗೆ ಇಂದಿನ ದಿನವನ್ನು ಸಮರ್ಪಿಸಲಾಗುತ್ತಿದೆ.

ಇದನ್ನೂ ಓದಿ: 

World Milk Day 2021 ವಿಶ್ವ ಹಾಲು ದಿನ.. ಈ ದಿನದ ಮಹತ್ವ ನಿಮಗೆ ಗೊತ್ತೆ?

ಕೊವಿಡ್ ಸಂಕಷ್ಟದಲ್ಲಿಯೂ ಲಾಭ ಗಳಿಸಿದ ಧಾರವಾಡದ ಕೆಎಂಎಫ್; ಬೇಡಿಕೆಗಿಂತಲೂ ಹೆಚ್ಚಿನ ಹಾಲು ಪೂರೈಕೆ