AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RuPay payment ಸಿಂಗಾಪುರ, ಯುಎಇ ಗಳಲ್ಲಿ ರೂಪೆ ಪಾವತಿ ವ್ಯವಸ್ಥೆ ಅಂಗೀಕಾರವಾಗಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟ

Nirmala Sitharaman: ರೂಪೆ ಪಾವತಿ ಅಂಗೀಕಾರದ ಬಗ್ಗೆ ನಾವು ವಿವಿಧ ದೇಶಗಳೊಂದಿಗೆ ಮಾತನಾಡುತ್ತಿದ್ದೇವೆ. ಸಿಂಗಾಪುರ ಮತ್ತು ಕೊಲ್ಲಿ ರಾಷ್ಟ್ರಗಳು ತಮ್ಮ ದೇಶಗಳಲ್ಲಿ ರೂಪೆ ಪಾವತಿಯನ್ನು ಸ್ವೀಕಾರಾರ್ಹಗೊಳಿಸಲು ಈಗ ಮುಂದೆ ಬಂದಿವೆ ಎಂದು ವಾಷಿಂಗ್ಟನ್ ಸಂವಾದದಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

RuPay payment ಸಿಂಗಾಪುರ, ಯುಎಇ ಗಳಲ್ಲಿ ರೂಪೆ ಪಾವತಿ ವ್ಯವಸ್ಥೆ ಅಂಗೀಕಾರವಾಗಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
TV9 Web
| Updated By: ಸಾಧು ಶ್ರೀನಾಥ್​|

Updated on:Oct 12, 2022 | 12:12 PM

Share

ವಾಷಿಂಗ್ಟನ್: ಸಿಂಗಾಪುರ ಮತ್ತು ಯುಎಇ ತಮ್ಮ ದೇಶಗಳಲ್ಲಿ (Singapore and UAE) ರೂಪೆ ಪಾವತಿ ವ್ಯವಸ್ಥೆ ಅಂಗೀಕರಿಸಲು ಆಸಕ್ತಿ ತೋರಿಸಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಅಮೆರಿಕ ಸಮಯ) ಹೇಳಿದ್ದಾರೆ. ಇನ್ನೂ ಅನೇಕ ರಾಷ್ಟ್ರಗಳಲ್ಲಿ RuPay ಪಾವತಿ ಕಾರ್ಯವಿಧಾನವನ್ನು ಅಂಗೀಕರಿಸಲು ಭಾರತವು ವಿವಿಧ ದೇಶಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಸೀತಾರಾಮನ್ (Finance Minister Nirmala Sitharaman) ಇದೇ ವೇಳೆ ಹೇಳಿದರು.

“ರೂಪೆ ಪಾವತಿ ಅಂಗೀಕಾರದ ಬಗ್ಗೆ ನಾವು ವಿವಿಧ ದೇಶಗಳೊಂದಿಗೆ ಮಾತನಾಡುತ್ತಿದ್ದೇವೆ. ಸಿಂಗಾಪುರ ಮತ್ತು ಕೊಲ್ಲಿ ರಾಷ್ಟ್ರಗಳು ತಮ್ಮ ದೇಶಗಳಲ್ಲಿ ರೂಪೆ ಪಾವತಿಯನ್ನು ಸ್ವೀಕಾರಾರ್ಹಗೊಳಿಸಲು ಈಗ ಮುಂದೆ ಬಂದಿವೆ” ಎಂದು ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಟ್ ಥಿಂಕ್-ಟ್ಯಾಂಕ್‌ನಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞ ಈಶ್ವರ್ ಪ್ರಸಾದ್ ಅವರೊಂದಿಗೆ ಸಂವಾದದಲ್ಲಿ ಸೀತಾರಾಮನ್ ಹೇಳಿದರು.

“ಅಷ್ಟೇ ಅಲ್ಲ, UPI (ಯುನಿಫೈಡ್ ಪೇಮೆಂಟ್ಸ್ ಇಂಟರ್​​ಫೇಸ್ -Unified Payments Interface), BHIM ಅಪ್ಲಿಕೇಶನ್, ಮತ್ತು NCPI (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ the National Payments Corporation of India) ಇವೆಲ್ಲವೂ ಈಗ ಆಯಾ ದೇಶಗಳಲ್ಲಿ ಅಲ್ಲಿನ ವ್ಯವಸ್ಥೆಗಳೊಂದಿಗೆ ದೃಢವಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ”ಎಂದು ಅವರು ಹೇಳಿದರು.

ಏತನ್ಮಧ್ಯೆ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಾವು ತೆಗೆದುಕೊಂಡ ನೀತಿ ನಿರ್ಧಾರಗಳಿಂದ ಉಂಟಾಗುವ ಜಾಗತಿಕ ಹೆಚ್ಚುವರಿಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಸೀತಾರಾಮನ್ ಕೇಳಿಕೊಂಡರು.

ತಮ್ಮ ಜನರಿಗೋಸ್ಕರ ನೈತಿಕ ಮತ್ತು ಪ್ರಜಾಸತ್ತಾತ್ಮಕ ಕಟ್ಟುಪಾಡುಗಳನ್ನು ಪೂರೈಸುವ ರಾಷ್ಟ್ರಗಳ ಮೇಲೆ ನಿರ್ಬಂಧಗಳನ್ನು ಹೇರುತ್ತಿರುವ ಅಭಿವೃದ್ಧಿ ಹೊಂದಿದ ದೇಶಗಳ ಮೇಲೆ ಸಚಿವರು ಲಿಖಿತವಾಗಿ ತಮ್ಮ ಅಸಮಾಧಾನ ದಾಖಲಿಸಿದರು.

“ಸ್ಪಷ್ಟವಾಗಿ ಹೇಳಬೆಕೆಂದರೆ ಅಂತರರಾಷ್ಟ್ರೀಯ ಸಹಕಾರವು ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಿದೆ. ಸದ್ಯದಲ್ಲಿಯೇ, ಮುಂದುವರಿದ ರಾಷ್ಟ್ರಗಳು ತಮ್ಮ ರಾಜಕೀಯ ಮತ್ತು ಆರ್ಥಿಕ ನೀತಿ ನಿರ್ಧಾರಗಳ ಜಾಗತಿಕ ಹೆಚ್ಚುವರಿಗಳ ಜವಾಬ್ದಾರಿಯನ್ನು ಸ್ವತಃ ಹೊರಬೇಕು. ಕೇವಲ ತಮ್ಮ ತಮ್ಮ ಜನರಿಗಾಗಿ ಅವರ ನೈತಿಕ ಮತ್ತು ಪ್ರಜಾಸತ್ತಾತ್ಮಕ ಜವಾಬ್ದಾರಿಗಳನ್ನು ಪೂರೈಸುವ ರಾಷ್ಟ್ರಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಬದಲು ಸುರಕ್ಷತಾ ಜಾಲಗಳಿಗೆ ಜೋತುಬೀಳಬೇಕು ಎಂದು ಸಚಿವೆ ಸೀತಾರಾಮನ್ ಎಚ್ಚರಿಸಿದರು.

ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿದಿರುವಾಗ ಈ ಕಾಮೆಂಟ್‌ಗಳು ಬಂದಿವೆ. ತನ್ನ ಜುಲೈ 2022 ರ ವರದಿಯಲ್ಲಿ, ಭಾರತದ GDP ಬೆಳವಣಿಗೆಯನ್ನು IMF ಶೇಕಡಾ 7.4 ಕ್ಕೆ ನಿಗದಿಪಡಿಸಿದೆ. ಭಾರತದ GDP ಬೆಳವಣಿಗೆಯ ಬಗ್ಗೆ IMF ತನ್ನ ಇತ್ತೀಚಿನ ನಿರೀಕ್ಷೆಯನ್ನು 2022-23 ರ ಹಣಕಾಸು ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಯಿಂದ ನಿಗದಿಪಡಿಸಿದ 7 ಶೇಕಡಾ ಬೆಳವಣಿಗೆಗಿಂತ ಕಡಿಮೆಗೊಳಿಸಿದೆ. ಆದಾಗ್ಯೂ, ಆರ್ಥಿಕ ಹಿಂಜರಿತದ ಹೊರತಾಗಿಯೂ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿಯುತ್ತದೆ ಎಂದು ಅವರು ಆಶಿಸಿದರು.

ಭಾರತವು G-20 ರಾಷ್ಟ್ರಗಳ ಗುಂಪಿನ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಲು ಸಿದ್ಧವಾಗುತ್ತಿರುವಂತೆ ಸೀತಾರಾಮನ್ ಅವರು “ಈ ನಿರ್ಣಾಯಕ ವಿಷಯಗಳ ಕುರಿತು ಸಂವಾದ, ಚರ್ಚೆಗಳು ಮತ್ತು ನಿರ್ಧಾರಗಳನ್ನು ಸುಲಭಗೊಳಿಸಲು ಭಾರತವು ಏನು ಬೇಕಾದರೂ ಮಾಡಲು ಸಿದ್ಧವಾಗಿದೆ” ಎಂದು ಹೇಳಿದರು.

ತನ್ನ ಭಾಷಣದಲ್ಲಿ ಸಚಿವೆ ಸೀತಾರಾಮನ್ ಅವರು, ಡಿಜಿಟಲೀಕರಣ ಮತ್ತು ಹಣಕಾಸು ಸೇರ್ಪಡೆ, MSME ಅನ್ನು ಬಲಪಡಿಸುವುದು ಮತ್ತು ಸರ್ಕಾರದ ವೆಚ್ಚಗಳಲ್ಲಿ ಗುಣಮಟ್ಟ ಸುಧಾರಣೆ ಮತ್ತು ಅಗತ್ಯವಿರುವವರಿಗೆ ಸಾಮಾಜಿಕ ಭದ್ರತೆಯನ್ನು ಕಲ್ಪಿಸುವುದು ಸೇರಿದಂತೆ ಭಾರತದ ಬೆಳವಣಿಗೆಯನ್ನು ಆಧಾರವಾಗಿಸುವ ಹಲವಾರು ಅಂಶಗಳ ಬಗ್ಗೆ ಅವರು ಗಮನಸೆಳೆದರು.

ಭಾರತದ ಬೆಳವಣಿಗೆಯ ಕಥೆಯನ್ನು ವಿವರಿಸಿದ ಹಣಕಾಸು ಸಚಿವರು, “ಅಭಿವೃದ್ಧಿಶೀಲ ರಾಷ್ಟ್ರವಾಗಿ ಭಾರತವು ಜಾಗತಿಕ ಸಾಮಾನ್ಯರ ಬೆಳವಣಿಗೆಗೆ ಯಾವಾಗಲೂ ಮುಂಚೂಣಿಯಲ್ಲಿ ನಿಂತು ಸೇವೆ ಒದಗಿಸಿದೆ” ಎಂದು ಹೇಳಿದರು. “ಬಹುಪಕ್ಷೀಯ ಸಾದನೆಗಾಗಿ ಭಾರತದ ಬದ್ಧತೆಯ ಬಗ್ಗೆ ಒತ್ತಿ ಹೇಳಿದ ಅವರು 100 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಲಸಿಕೆಗಳನ್ನು ಪೂರೈಸಿರುವುದು, ಸಂಕಷ್ಟದಲ್ಲಿರುವವರಿಗೆ ವಿಪತ್ತು ಪರಿಹಾರವನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುವ ಉಪಕ್ರಮಗಳ ಬಗ್ಗೆ ಸ್ಪಷ್ಟವಾಗಿ ಹೇಳಿದರು.

ಸಚಿವೆ ಸೀತಾರಾಮನ್ ಅಮೆರಿಕಾಗೆ ಅಧಿಕೃತ ಭೇಟಿ ನೀಡಿದ್ದಾರೆ. ಅವರು ತಮ್ಮ ಭೇಟಿಯ ಸಮಯದಲ್ಲಿ, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. G20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳು ಈ ಸಭೆಗಳಲ್ಲಿ (FMCBG) ಭಾಗವಹಿಸಲಿದ್ದಾರೆ.

ಹಣಕಾಸು ಸಚಿವೆ ಸೀತಾರಾಮನ್ ಅವರು ಜಪಾನ್, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ಭೂತಾನ್, ನ್ಯೂಜಿಲೆಂಡ್, ಈಜಿಪ್ಟ್, ಜರ್ಮನಿ, ಮಾರಿಷಸ್, ಯುಎಇ, ಇರಾನ್ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ ಹಲವಾರು ದೇಶಗಳೊಂದಿಗೆ ದ್ವಿಪಕ್ಷೀಯ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಹಣಕಾಸು ಸಚಿವೆ ಸೀತಾರಾಮನ್ ಅವರು ಪರಸ್ಪರ ಹಿತಾಸಕ್ತಿಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಯುಎಸ್ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಮತ್ತು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡುತ್ತಾರೆ ಎಂದು ANI ವರದಿ ಮಾಡಿದೆ.

Published On - 12:07 pm, Wed, 12 October 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?