ನಿಮ್ಮ ಸಂಪರ್ಕದಲ್ಲಿದ್ದ ವ್ಯಕ್ತಿ ಸೋಂಕಿತರಾಗಿದ್ದಾರೆ, ಎಚ್ಚರಿಕೆ.. ಎಂದು ಸಂದೇಶ ಕಳಿಸುತ್ತದೆ ಈ ಆ್ಯಪ್​

| Updated By: ಸಾಧು ಶ್ರೀನಾಥ್​

Updated on: Dec 07, 2020 | 3:02 PM

ಆ್ಯಪ್​ ಇನ್​ಸ್ಟಾಲ್ ಮಾಡಿಕೊಂಡ ಗ್ರಾಹಕರು ಪರಸ್ಪರ ಹತ್ತಿರ ಬಂದರೆ ಆ್ಯಪ್​ ತಾನಾಗಿಯೇ ಡೇಟಾ ಸಂಗ್ರಹಿಸುತ್ತದೆ. ಒಮ್ಮೆ ಡೇಟಾ ಸಂಗ್ರಹವಾದ ನಂತರ ಆ ಇಬ್ಬರಲ್ಲಿ ಯಾವುದೇ ವ್ಯಕ್ತಿ ನಿರ್ದಿಷ್ಟ ದಿನದೊಳಗೆ ಸೋಂಕಿತನಾದರೂ ಇನ್ನೊಂದು ವ್ಯಕ್ತಿಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ.

ನಿಮ್ಮ ಸಂಪರ್ಕದಲ್ಲಿದ್ದ ವ್ಯಕ್ತಿ ಸೋಂಕಿತರಾಗಿದ್ದಾರೆ, ಎಚ್ಚರಿಕೆ.. ಎಂದು ಸಂದೇಶ ಕಳಿಸುತ್ತದೆ ಈ ಆ್ಯಪ್​
ಪ್ರಾತಿನಿಧಿಕ ಚಿತ್ರ
Follow us on

ಕೊವಿಡ್​ ಸೋಂಕಿತರ ಮೇಲೆ ನಿಗಾ ವಹಿಸೋಕೆ ತಾಂತ್ರಿಕವಾಗಿ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಭಾರತದಲ್ಲಿ ಆರಂಭಿಕ ಹಂತದಲ್ಲೇ ಆರೋಗ್ಯ ಸೇತು ಎಂಬ ಆ್ಯಪ್​ ಬಿಡುಗಡೆ ಮಾಡಲಾಗಿತ್ತು. ಆದರೆ ಅಮೆರಿಕಾದಲ್ಲಿ ಆರೋಗ್ಯ ಸೇತುವಿಗಿಂತಲೂ ಸುರಕ್ಷಿತ ಮತ್ತು ಸುಧಾರಿತ ತಂತ್ರಜ್ಞಾನವೊಂದು ಸಿದ್ಧವಾಗಿದೆ.

ಗೂಗಲ್ ಮತ್ತು ಆ್ಯಪಲ್ ಕಂಪೆನಿಯ ಸಹಭಾಗಿತ್ವದಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಮೊಬೈಲ್ ಬ್ಲೂಟೂತ್ ಮುಖಾಂತರ ಡೇಟಾ ಸಂಗ್ರಹಿಸುವ ಕ್ರಮ ಇದಾಗಿದ್ದು ಸಂಗ್ರಹವಾಗುವ ವಿವರಗಳು ಯಾವುದೇ ರೀತಿಯಲ್ಲೂ ಸೋರಿಕೆಯಾಗದು ಎಂದು ಕಂಪೆನಿಗಳು ಭರವಸೆ ನೀಡಿವೆ.

ಅಮೆರಿಕಾದ ಜನರಿಗೆ ಆ್ಯಪ್ ಲಭ್ಯ
ಅಮೆರಿಕಾದ ಕೆಲ ಪ್ರಾಂತ್ಯಗಳ ಜನರಿಗೆ ಈ ಆ್ಯಪ್​ ಬಳಸಲು ಸ್ಥಳೀಯ ಆಡಳಿತದಿಂದ ಅನುಮತಿ ಸಿಕ್ಕಿದೆ. ಆ್ಯಪ್​ ಇನ್​ಸ್ಟಾಲ್ ಮಾಡಿಕೊಂಡ ಗ್ರಾಹಕರು ಪರಸ್ಪರ ಹತ್ತಿರ ಬಂದರೆ ಆ್ಯಪ್​ ತಾನಾಗಿಯೇ ಡೇಟಾ ಸಂಗ್ರಹಿಸುತ್ತದೆ. ಒಮ್ಮೆ ಡೇಟಾ ಸಂಗ್ರಹವಾದ ನಂತರ ಆ ಇಬ್ಬರಲ್ಲಿ ಯಾವುದೇ ವ್ಯಕ್ತಿ ನಿರ್ದಿಷ್ಟ ದಿನದೊಳಗೆ ಸೋಂಕಿತನಾದರೂ ಇನ್ನೊಂದು ವ್ಯಕ್ತಿಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ.

ಆದರೆ, ಈ ಸಂದರ್ಭದಲ್ಲಿ ಸೋಂಕಿತನ ಹೆಸರು ಮತ್ತು ವಿವರ ಗೌಪ್ಯವಾಗಿಯೇ ಇರುತ್ತದೆ. ಬದಲಾಗಿ ನೀವು ಸೋಂಕಿತರ ಸಂಪರ್ಕಕ್ಕೆ ಬಂದಿದ್ದೀರಿ ಎಂಬ ಸಂದೇಶವಷ್ಟೇ ರವಾನೆಯಾಗುತ್ತದೆ. ಆ್ಯಪಲ್ ಮತ್ತು ಗೂಗಲ್​ ಸ್ಟೋರ್​ಗಳಲ್ಲಿ ಈ ಆ್ಯಪ್​ ಲಭ್ಯವಿದೆ.

ಅಮೆರಿಕಾದ ಕೆಲವು ಪ್ರಾಂತ್ಯಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಕಡೆಗಳಲ್ಲಿ ಅ್ಯಪ್​ ಬಳಕೆಗೆ ಲಭ್ಯವಿದೆ. ಒಂದು ವೇಳೆ ಬಳಕೆದಾರರು ಸೋಂಕಿತರ ಸಂಪರ್ಕಕ್ಕೆ ಬಂದ ನಂತರ ಆ್ಯಪ್ ಬಳಕೆಗೆ ಅನುಮತಿ ಇಲ್ಲದ ಪ್ರದೇಶಕ್ಕೆ ಹೋದರೂ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ ಎಂದು ತಿಳಿದುಬಂದಿದೆ.

ಜನಪ್ರಿಯ ಆ್ಯಪ್​​ಗಳಲ್ಲಿಯೂ ವೈರಸ್ ಪತ್ತೆ​; ಇವು ನಿಮ್ಮ ಮೊಬೈಲ್​ನಲ್ಲೂ ಇವೆಯಾ ಒಮ್ಮೆ ಚೆಕ್​ ಮಾಡಿಕೊಳ್ಳಿ!

Published On - 2:59 pm, Mon, 7 December 20