ಗೂಗಲ್​ ಉದ್ಯೋಗಿಗಳಿಗೆ ಪತ್ರ​ ಬರೆದ ಸುಂದರ್​ ಪಿಚೈ; ಆ ಇ-ಮೇಲ್​ನಲ್ಲೇನಿದೆ?

ಸ್ಥಳೀಯ ಆಡಳಿತ ಸಂಸ್ಥೆಗಳು ಅವಕಾಶ ನೀಡಿದರೆ ನಾವು ನಮ್ಮ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಸಿಕೊಳ್ಳುತ್ತೇವೆ. ವಾಲೆಂಟರಿ ವರ್ಕ್​ ಫ್ರಮ್ ​ಹೋಂ ಆಯ್ಕೆ ಸೆ.1ರವರೆಗೆ ಮುಂದುವರಿಯಲಿದೆ ಎಂದು ಬರೆದಿದ್ದಾರೆ. ಡಿ.14ರಂದು ರವಾನಿಸಿರುವ ಪತ್ರದಲ್ಲಿ ಅವರು ಸೆಪ್ಟೆಂಬರ್ 2021ರವರೆಗೆ ವರ್ಕ್​ ಫ್ರಮ್ ಹೋಂ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಸ್ಥಳೀಯ ಆಡಳಿತ ಸಂಸ್ಥೆಗಳು ಅವಕಾಶ ನೀಡಿದರೆ ನಾವು ನಮ್ಮ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಸಿಕೊಳ್ಳುತ್ತೇವೆ. ವಾಲೆಂಟರಿ ವರ್ಕ್​ ಫ್ರಮ್ ​ಹೋಂ ಆಯ್ಕೆ ಸೆ.1ರವರೆಗೆ ಮುಂದುವರಿಯಲಿದೆ ಎಂದು ಬರೆದಿದ್ದಾರೆ.

ಗೂಗಲ್​ ಉದ್ಯೋಗಿಗಳಿಗೆ ಪತ್ರ​ ಬರೆದ ಸುಂದರ್​ ಪಿಚೈ; ಆ ಇ-ಮೇಲ್​ನಲ್ಲೇನಿದೆ?
ಸುಂದರ್ ಪಿಚೈ (ಸಂಗ್ರಹ ಚಿತ್ರ)
Edited By:

Updated on: Oct 16, 2026 | 10:44 PM

ಬೆಂಗಳೂರು: ಗೂಗಲ್​ ಮುಖ್ಯಸ್ಥ ಸುಂದರ್ ಪಿಚೈ ಈಗ ತಮ್ಮ ಉದ್ಯೋಗಿಗಳಿಗೆ ಪ್ರಮುಖ ಇಮೇಲ್​ ಸಂದೇಶವೊಂದನ್ನು ರವಾನಿಸಿದ್ದಾರೆ. ಈ ಮೇಲ್​ನಲ್ಲಿ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಮುಂದುವರಿಸುವ ಬಗ್ಗೆ ತಿಳಿಸಿದ್ದಾರೆ.

ಡಿ.14ರಂದು ರವಾನಿಸಿರುವ ಪತ್ರದಲ್ಲಿ ಅವರು ಸೆಪ್ಟೆಂಬರ್ 2021ರವರೆಗೆ ವರ್ಕ್​ ಫ್ರಮ್ ಹೋಂ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಸ್ಥಳೀಯ ಆಡಳಿತ ಸಂಸ್ಥೆಗಳು ಅವಕಾಶ ನೀಡಿದರೆ ನಾವು ನಮ್ಮ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಸಿಕೊಳ್ಳುತ್ತೇವೆ. ವಾಲೆಂಟರಿ ವರ್ಕ್​ ಫ್ರಮ್ ​ಹೋಂ ಆಯ್ಕೆ ಸೆ.1ರವರೆಗೆ ಮುಂದುವರಿಯಲಿದೆ ಎಂದು ಬರೆದಿದ್ದಾರೆ.

ಈಗಾಗಲೇ ಟ್ವಿಟರ್​, ಫೇಸ್​ಬುಕ್​ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಕಾಯಂ ಆಗಿ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡಿವೆ. ಆದರೆ, ಗೂಗಲ್​ನಲ್ಲಿ ಆ ರೀತಿ ಯೋಜನೆ ತರುವ ಯಾವುದೇ ಆಲೋಚನೆ ಇಲ್ಲ ಎಂದು ಪಿಚೈ ಸ್ಪಷ್ಟನೆ ನೀಡಿದ್ದಾರೆ.

ಕಚೇರಿಯಿಂದ ಕೆಲಸ ಮಾಡುವುದರಿಂದ ಸಾಕಷ್ಟು ಲಾಭಗಳಿವೆ. ಆದರೆ, ಕೊರೊನಾ ತಂದ ತೊಂದರೆಯಿಂದ ನಾವು ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯೆತ ಬಂದೊದಗಿದೆ. ಆದಷ್ಟು ಬೇಗ ನಾವು ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುವ ಆಲೋಚನೆಯಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರದಲ್ಲಿ ಬಹುತೇಕ ಐಟಿ ಕಂಪೆನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡಿವೆ. ಕೆಲ ಸಂಸ್ಥೆಗಳು ಇದನ್ನು ಈಗಾಗಲೇ 2021ರ ಅಂತ್ಯದವರೆಗೆ ವಿಸ್ತರಣೆ ಮಾಡಿವೆ. ಇನ್ನೂ ಕೆಲ ಸಂಸ್ಥೆಗಳು ಶಾಶ್ವತವಾಗಿ ವರ್ಕ್​ ಫ್ರಮ್​ ಹೋಂ ಆಯ್ಕೆ ನೀಡಿವೆ.

 

Published On - 8:02 pm, Wed, 16 December 20

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us