ಯುಕೆಯ ಅಪರೂಪದ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿಕೊಂಡು ಸಾಯುವ ಮೊದಲು ಐವರನ್ನು ಕೊಂದಿದ್ದಾನೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 13, 2021 | 10:21 PM

ಪೊಲೀಸರು ಶೂಟರ್​​ನನ್ನು  22 ವರ್ಷದ ಕ್ರೇನ್ ಆಪರೇಟರ್ ಜೇಕ್ ಡೇವಿಸನ್ ಎಂದು ಗುರುತಿಸಿದ್ದಾರೆ. ಐವರನ್ನು ಗುಂಡು ಹಾರಿಸಿ ಕೊಂದ ನಂತರ ಅವನು ತನ್ನ ಮೇಲೆ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಯುಕೆಯ ಅಪರೂಪದ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿಕೊಂಡು ಸಾಯುವ ಮೊದಲು ಐವರನ್ನು ಕೊಂದಿದ್ದಾನೆ!
ಜೇಕ್ ಜನರ ಮೇಲೆ ಗುಂಡು ಹಾರಿಸಿದ ಸ್ಥಳ
Follow us on

ಪ್ಲೈಮೌತ್: ಯುನೈಟೆಡ್ ಕಿಂಗ್​ಡಮ್​ನಲ್ಲಿ ಅಮೇರಿಕದಂತೆ ಸಾಮೂಹಿಕ ಹತ್ಯೆಯಂಥ ಪ್ರಕರಣಗಳು ನಡೆಯುವುದ ಬಹಳ ಆಪರೂಪ. ಆದರೆ ಶುಕ್ರವಾರದಂದು ಕೌಟುಂಬಿಕ ಹಿಂಸೆಯಿಂದ ವಿಚಲಿತನಾಗಿದ್ದಂತೆ ಶಂಕಿಸಲಾಗಿರುವ ವ್ಯಕ್ತಿಯೊಬ್ಬ ಪಂಪ್-ಌಕ್ಷನ್ ಶಾಟ್​ಗನ್ ಒಂದರಿಂದ ಇಂಗ್ರೆಂಡ್ನ ದಕ್ಷಿಣ ಭಾಗದ ನಗರ ಪ್ಲೈಮೌತ್ನಲ್ಲಿ 6 ನಿಮಿಷಗಳ ಕಾಲ ಅವ್ಯಾಹತವಾಗಿ ಗುಂಡು ಹಾರಿಸಿದ್ದರಿಂದ ಮೂರು ವರ್ಷದ ಬಾಲಕಿಯೂ ಸೇರದಂತೆ 5 ಜನ ಬಲಿಯಾಗಿದ್ದಾರೆ. ಸಾಮಾನ್ಯವಾಗಿ ಬ್ರಿಟಿಷರು ಗನ್​ಗಳನ್ನು ಖರೀದಿಸುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ, ಶುಕ್ರವಾರದ ಶೂಟಿಂಗ್ ಕಳೆದ ದಶಕದಲ್ಲೇ ಅತಿ ಕೆಟ್ಟ ಪ್ರಕರಣ ಎಂದು ಹೇಳಲಾಗುತ್ತಿದೆ.

ಪೊಲೀಸರು ಶೂಟರ್​​ನನ್ನು  22 ವರ್ಷದ ಕ್ರೇನ್ ಆಪರೇಟರ್ ಜೇಕ್ ಡೇವಿಸನ್ ಎಂದು ಗುರುತಿಸಿದ್ದಾರೆ. ಐವರನ್ನು ಗುಂಡು ಹಾರಿಸಿ ಕೊಂದ ನಂತರ ಅವನು ತನ್ನ ಮೇಲೆ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ದೆವೊನ್ ಮತ್ತು ಕಾರ್ನ್ವಾಲ್ ಚೀಫ್ ಕಾನ್ಸ್ಟೇಬಲ್ ಶೌನ್ ಸಾಯರ್ ಅವರು, ಹತ್ಯೆಗಳನ್ನು ನಡೆಸಲು ಜೇಕ್ಗೆ ಯಾವುದೇ ಪ್ರಚೋದನೆ, ಉದ್ದೇಶವಿರಲಿಲ್ಲ. ಭಯೋತ್ಪಾದಕರು ಅಥವಾ ಬಲ-ಪಂಥೀಯ ಸಂಘಟನೆಗಳು ಇದರ ಹಿಂದಿರಬಹುದೆನ್ನುವುದಕ್ಕೆ ಸುಳಿವು, ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದಾರೆ. ಅವನ ಕಂಪ್ಯೂಟರ್ನ ತಪಾಸಣೆ ನಡೆಯುತ್ತಿದೆ ಎಂದು ಸಾಯರ್ ಹೇಳಿದರು. ‘ಇದೊಂದು ಕೌಟುಂಬಿಕ ಕಲಹದ ಪ್ರಕರಣವೆಂದು ನಮಗೆ ಭಾಸವಾಗುತ್ತಿದೆ. ಕಲಹ ಮನೆಯಿಂದ ಬೀದಿಗೆ ಬಂದು ಪ್ಲೈಮೌತ್​ನ ಹಲವಾರು ಜನ ಗುಂಡಿಗೆ ಬಲಿಯಾದ ನಂಬಲಸದಳ ದಾರುಣ ಘಟನೆಯಲ್ಲಿ ಪರ್ಯಾವಸನಗೊಂಡಿದೆ,’ ಎಂದು ಸಾಯರ್ ಮಾಧ್ಯಮದವರಿಗೆ ಹೇಳಿದ್ದಾರೆ.

ಶೂಟಿಂಗ್ ಗುರುವಾರ ಸಾಯಂಕಾಲ 6 ಗಂಟೆಗೆ ನಡೆದಿದೆ. ಜೇಕ್ ಮೊದಲು ತನಗೆ ಪರಿಚಯವಿದ್ದ 51-ವರ್ಷದ ಮಹಿಳೆಯನ್ನು ಆಕೆಯ ಮನೆಯಲ್ಲೇ ಕೊಂದು ಬೀದಿಗೆ ಬಂದು ರಸ್ತೆ ಮೇಲೆ ಹೋಗುತ್ತಿದ್ದ ಒಂದು ಚಿಕ್ಕ ಹೆಣ್ಣು ಮಗು ಮತ್ತು ಆಕೆಯ 43 ವರ್ಷ ವಯಸ್ಸಿನ ಸಂಬಂಧಿಕನ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ.
ಅದಾದ ಮೇಲೆ ಜೇಕ್ ಇಬ್ಬರು ದಾರಿಹೋಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಅದೃಷ್ಟವಶಾತ್ ಅವರಿಬ್ಬರು ಜೀವಕ್ಕೆ ಅಪಾಯವಾಗಿಲ್ಲವಾದರೂ ಗಂಭೀರ ಸ್ವರೂಪದ ಗಾಯಗಳಾಗಿವೆ. ನಂತರ ಅವನು ಪಾರ್ಕೊಂದರೊಳಗೆ ನುಗ್ಗಿ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷನನ್ನು ಕೊಂದಿದ್ದಾನೆ.

ವಿಷಯ ತಿಳಿದ ಶಸ್ತ್ರಾಸ್ತ್ರ ಅಧಿಕಾರಿಗಳು ಅವನನ್ನು ವಶಕ್ಕೆ ಪಡೆಯುವ ಮೊದಲೇ ಜೇಕ್ ತನ್ನ ಮೇಲೆ ಗುಂಡು ಹಾರಿಸಿಕೊಂಡು ಸತ್ತಿದ್ದಾನೆ. ಕೆಲವೇ ನಿಮಿಷಗಳ ಅವಧಿಯಲ್ಲಿ ಜೇಕ್ ಸೇರಿದಂತೆ 6 ಜನ ಸತ್ತಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಜೇಕ್ ಪಂಪ್-ಌಕ್ಷನ್ ಶಾಟ್ಗನ್ನಿಂದ ಗುಂಡು ಹಾರಿಸಿದ್ದಾನೆ ಎಂದು ಸಾಯರ್ ಹೇಳಿದ್ದು ಅವನಲ್ಲಿ ಪಿಸ್ಟಲ್ ಹೊಂದುವ ಲೈಸನ್ಸ್ ಇತ್ತಂತೆ. ಆದರೆ ಅವನು ಮಾನಸಿಕ ರೋಗಿಯಾಗಿದ್ದನೇ ಎನ್ನುವ ಬಗ್ಗೆ ಅವರು ಸುಳಿವು ನೀಡಿಲ್ಲ.

ಇಂಟರ್ನೆಟ್ ನಲ್ಲಿ ತಾನು ಮಾಡಿರುವ ಪೋಸ್ಟ್​ಗಳಲ್ಲಿ ಜೇಕ್, ಹದಿಹರೆಯದಲ್ಲಿ ತಾನು ಕೌಮಾರ್ಯತನ ಕಳೆದುಕೊಳ್ಳಲಿಲ್ಲ ಎಂದು ಹೇಳಿದ್ದು ತನ್ನನ್ನು ಬ್ರಹ್ಮಚಾರಿ ಎಂದು ಬಣ್ಣಿಸಿಕೊಂಡಿದ್ದಾನೆ. ಬದುಕು ತನಗೆ ಬಹಳ ಸಂಕಷ್ಟಗಳನ್ನು ನೀಡಿದೆ ಎಂದು ಅವನು ದೂರಿಕೊಂಡಿದ್ದಾನೆ.

ಕಳೆದ ಹಲವಾರು ವರ್ಷಗಳಲ್ಲಿ ಬ್ರಿಟನ್ ಉಗ್ರರ ದಾಳಿಯಂಥ ಪ್ರಕರಣಗಳನ್ನು ತನ್ನ ನೆಲದಲ್ಲಿ ಕಂಡಿದೆ. ಆದರೆ ಜೂನ್ 2010 ರಲ್ಲಿ ಉತ್ತರ ಇಂಗ್ಲೆಂಡ್ನ ಕುಂಬ್ರಿಯಾ ಎಂಬಲ್ಲಿ ಟ್ಯಾಕ್ಸಿ ಡ್ರೈವರ್​ನೊಬ್ಬ ಪಿಸ್ಟಲ್​ನಿಂದ ಗುಂಡು ಹಾರಿಸಿ 12 ಜನರನ್ನು ಕೊಂದು ನಂತರ ತನ್ನ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ನಂತರ ನಡೆದಿರುವ ಅತ್ಯಂತ ಭೀಕರ ಸಾಮೂಹಿಕ ಹತ್ಯೆಯ ಪ್ರಕರಣ ಇದಾಗಿದೆ.

ಆದರೆ ಇವರೆಡಕ್ಕಿಂತ ಘೋರ ಘಟನೆ ಸ್ಕಾಟ್ಲೆಂಡ್ನ ಡನ್ಬ್ಲೇನ್ ನಲ್ಲಿ 1996 ರಲ್ಲಿ ನಡೆದಿತ್ತು. ಒಬ್ಬ ಪಿಸ್ತೂಲುಧಾರಿ 16 ವಿದ್ಯಾರ್ಥಿಗಳು ಮತ್ತೊಬ್ಬ ಟೀಚರ್ ರನ್ನು ಕೊಂದು ಅದೇ ಪಿಸ್ತೂಲಿನಿಂದ ತನ್ನ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಇದನ್ನೂ ಓದಿ: ನರಕವಾಗಿದೆ ಅಫ್ಘಾನಿಸ್ತಾನ; ಆಟವಾಡುವ ಮಕ್ಕಳೂ ಇಲ್ಲಿ ತಾಲಿಬಾನ್ ಉಗ್ರರ ಲೈಂಗಿಕ ಕ್ರಿಯೆಗೆ ಮೀಸಲು!