ಬುಧವಾರ ಬೆಳಗ್ಗೆ ಹೈಟಿ ಅಧ್ಯಕ್ಷ ಜೊವೆನೆಲ್​ ಮೋಯಿಸ್ ಹತ್ಯೆ; ದೇಶದಲ್ಲಿ ಮುಂದುವರೆದ ರಾಜಕೀಯ ವಿಪ್ಲವ

ಅಮೇರಿಕದ ದೇಶಗಳಲ್ಲಿ ಅತಿ ಬಡ ರಾಷ್ಟ್ರವಾಗಿರುವ ಹೈಟಿಯನ್ನು ಜೊವೆನೆಲ್​ ಮೋಯಿಸ್ ಅವರು ಶಾಸನಬದ್ಧವಾಗಿ ಆಳಿದರು. 2018ರಲ್ಲಿ ದೇಶದಲ್ಲಿ ಚುನಾವಣೆಗಳು ನಡೆಯಬೇಕಿದ್ದರೂ ಅಲ್ಲಿ ತಲೆದೋರಿರುವ ರಾಜಕೀಯ ವಿಪ್ಲವದ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲಾಗಿತ್ತು.

ಬುಧವಾರ ಬೆಳಗ್ಗೆ ಹೈಟಿ ಅಧ್ಯಕ್ಷ ಜೊವೆನೆಲ್​ ಮೋಯಿಸ್ ಹತ್ಯೆ; ದೇಶದಲ್ಲಿ ಮುಂದುವರೆದ ರಾಜಕೀಯ ವಿಪ್ಲವ
ಹತ್ಯೆಯಾದ ಹೈಟಿ ಅಧ್ಯಕ್ಷ ಜೊವೆನೆಲ್ ಮೋಯಿಸ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jul 07, 2021 | 10:44 PM

ಪೋರ್ಟ್-ಔ-ಪ್ರಿನ್ಸ್, ಹೈಟಿ: ಹೈಟಿ ಅಧ್ಯಕ್ಷ ಜೊವೆನೆಲ್​ ಮೋಯಿಸ್ ಅವರನ್ನು ಬುಧವಾರ ಬೆಳಗ್ಗೆ ಹತ್ಯೆ ಮಾಡಲಾಗಿದೆ ಮತ್ತು ಅವರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಅವರ ಪತ್ನಿ ಗಾಯಗೊಂಡಿದ್ದಾರೆ ಎಂದು ಆ ದೇಶದ ಹಂಗಾಮಿ ಪ್ರಧಾನ ಮಂತ್ರಿ ಕ್ಲಾಡ್ ಜೋಸೆಫ್ ಪ್ರಕಟಿಸಿದ್ದಾರೆ. ಈ ಹಲ್ಲೆ ಪ್ರಕರಣವು ರಾಜಕೀಯವಾಗಿ ಉದ್ವಿಗ್ನ ಮತ್ತು ದೊಂಬಿಗಳಿಂದ ಜರ್ಝರಿತಗೊಂಡಿರುವ ಕೆರೀಬೀಯನ್ ರಾಷ್ಟ್ರವನ್ನು ಮತ್ತಷ್ಟು ಅಸ್ಥಿರಗೊಳಿಸಲಿದೆ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ. ತಾವೀಗ ದೇಶದ ಉಸ್ತುವಾರಿ ವಹಿಸಿಕೊಂಡಿರುವುದಾಗಿ ಹೇಳಿರುವ ಜೋಸೆಫ್ ಅವರು, ಶಾಂತಿ ಕಾಪಾಡಲು ಜನರಿಗೆ ಮನವಿ ಮಾಡಿದ್ದಾರೆ. ಪೋಲಿಸ್ ಮತ್ತು ಸೇನೆ ದೇಶದ ನಾಗರಿಕರಿಗೆ ಸುರಕ್ಷತೆ ಒದಗಿಸಲಿದೆ ಎಂದು ಅವರು ಹೇಳಿದ್ದಾರೆ.

‘ಇಂಗ್ಲಿಷ್ ಮತ್ತಿ ಸ್ಪ್ಯಾನಿಷ್ ಭಾಷೆಗಳಲ್ಲಿ ಮಾತಾಡುತ್ತಿದ್ದ ವಿದೇಶೀ ಹಂತಕರು ಅಧ್ಯಕ್ಷರನ್ನು ಅವರ ಮನೆಯಲ್ಲಿ ಹತ್ಯೆಗೈದರು. ಬೆಳಗಿನ ಜಾವ ಸುಮಾರು 1:00 ಗಂಟೆಗೆ ಹತ್ಯೆ ನಡೆದಿದೆ, ಅವರ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ’ ಎಂದು ಜೋಸೆಫ್ ಹೇಳಿದ್ದಾರೆ.

ಅಮೇರಿಕದ ದೇಶಗಳಲ್ಲಿ ಅತಿ ಬಡ ರಾಷ್ಟ್ರವಾಗಿರುವ ಹೈಟಿಯನ್ನು ಜೊವೆನೆಲ್​ ಮೋಯಿಸ್ ಅವರು ಶಾಸನಬದ್ಧವಾಗಿ ಆಳಿದರು. 2018ರಲ್ಲಿ ದೇಶದಲ್ಲಿ ಚುನಾವಣೆಗಳು ನಡೆಯಬೇಕಿದ್ದರೂ ಅಲ್ಲಿ ತಲೆದೋರಿರುವ ರಾಜಕೀಯ ವಿಪ್ಲವದ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲಾಗಿತ್ತು. ತಮ್ಮ ಅಧಿಕಾರಾವಧಿ ಯಾವಾಗ ಮುಗಿಯುತ್ತದೆ ಎಂದು ಖುದ್ದು ಅಧ್ಯಕ್ಷರಿಗೆ ಗೊತ್ತಿರಲಿಲ್ಲ.

ರಾಜಕೀಯ ಬಿಕ್ಕಟ್ಟಿನ ಜೊತೆಗೆ ಹಣಕ್ಕಾಗಿ ಅಪಹರಣಗಳು ನಡೆಯವ ಪ್ರಕರಣಗಳು ಹೈಟಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಶಸ್ತ್ರಧಾರಿ ಗುಂಪುಗಳು ದೇಶದೆಲ್ಲೆಡೆ ಹಾಹಾಕಾರ ಉಂಟು ಮಾಡುತ್ತಿದ್ದಾರೆ.

ಕಡು ಬಡತನದ ಜೊತೆಗೆ ಹೈಟಿ ಪದೇಪದೆ ನೈಸರ್ಗಿಕ ವಿಕೋಪಗಳಿಗೂ ತುತ್ತಾಗುತ್ತಿದೆ. ಜೊವೆನೆಲ್​ ಮೋಯಿಸ್ ಅವರು ಜನರ ಭಾರೀ ವಿರೋಧ ಹಾಗೂ ಆಕ್ರೋಷದ ನಡುವೆ ದೇಶವನ್ನಾಳುತ್ತಿದ್ದರು. ಅಲ್ಲಿನ ಮೆಜಾರಿಟಿ ಜನ ಅವರು ಅಕ್ರಮವಾಗಿ ಅಧಿಕಾರಕ್ಕೇರಿದ್ದರು ಎಂದು ಭಾವಿಸಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಅವರಿ ಏಳು ಪ್ರಧಾನ ಮಂತ್ರಿಗಳನ್ನು ಬದಲಾಯಿಸಿದ್ದರು. ಕೇವಲ ಮೂರು ತಿಂಗಳ ಹಿಂದೆ ನಿಯುಕ್ತಿಗೊಳಿದ್ದ ಜೋಸೆಫ್ ಅವರನ್ನು ಸಹ ಇಷ್ಟರಲ್ಲೇ ಬದಲಾಯಿಸುವವರಿದ್ದರು.

ಅಧ್ಯಕ್ಷೀಯ, ಶಾಸಕಾಂಗ ಮತ್ತು ಸ್ಥಳೀಯ ಚುನಾವಣೆಗಳ ಜೊತೆಗೆ ಹೈಟಿಯಲ್ಲಿ ಸೆಪ್ಟಂಬರ್ ತಿಂಗಳು ಸಂವೈಧಾನಿಕ ಜನಮತ ನಡೆಯಬೇಕಿತ್ತು. ಜನಮತ ಸಂಗ್ರಹಣೆಯು ಕೊವಿಡ್-19 ಪಿಡುಗುನಿಂದಾಗಿ ಎರಡು ಭಾರಿ ಮುಂದೂಡಲ್ಪಟ್ಟಿದೆ.

ಜೊವೆನೆಲ್​ ಮೋಯಿಸ್ ಅವರಯ ಹತ್ಯೆಯನ್ನು ‘ಭಯಾನಕ’ ಎಂದು ಬಣ್ಣಿಸಿರುವ ಅಮೇರಿಕ ತನಿಖೆಗೆ ಸಂಬಂಧಿಸಿದಂತೆ ತಾನು ಯಾವುದೇ ನೆರವು ನೀಡಲು ಸಿದ್ಧವಿರುವದಾಗಿ ಹೇಳಿದೆ.

ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಅವರು, ‘ಹೈಟಿ ಜನರಿಗೆ ಮತ್ತು ಹೈಟಿ ಸರ್ಕಾರಕ್ಕೆ ಯಾವುದೇ ರೀತಿಯ ನೆರವು ಬೇಕಿದ್ದರೂ ನೀಡಲು ಅಮೇರಿಕ ಸಿದ್ಧವಿದೆ,’ ಎಂದು ಹೇಳಿಕೆಯಲ್ಲಿ ತಿಳಿಸಿ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಇಷ್ಟರಲ್ಲೇ ಘಟನೆಯ ಬಗ್ಗೆ ತಿಳಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: Coronavirus cases in India: ದೇಶದಲ್ಲಿ 43,733 ಹೊಸ ಕೊವಿಡ್ ಪ್ರಕರಣ ಪತ್ತೆ , 930 ಮಂದಿ ಸಾವು

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?