ಹಮಾಸ್ ಮತ್ತು ವ್ಲಾಡಿಮಿರ್ ಪುಟಿನ್ ಇಬ್ಬರೂ ನೆರೆಯ ಪ್ರಜಾಪ್ರಭುತ್ವಗಳನ್ನು ನಾಶಮಾಡಲು ಬಯಸುತ್ತಾರೆ: ಜೋ ಬೈಡನ್

US President Joe Biden: ಹಮಾಸ್ ಭಯೋತ್ಪಾದನೆ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದಬ್ಬಾಳಿಕೆಯು ವಿಭಿನ್ನ ಬೆದರಿಕೆಗಳನ್ನು ಪ್ರತಿನಿಧಿಸುತ್ತದೆ, ಆದರೆ ಅವರಿಬ್ಬರೂ ನೆರೆಯ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ನಾಶಮಾಡಲು ಬಯಸುತ್ತಾರೆ. ಅಂತರರಾಷ್ಟ್ರೀಯ ಆಕ್ರಮಣವು ಮುಂದುವರಿದರೆ, ಸಂಘರ್ಷ ಮತ್ತು ಅವ್ಯವಸ್ಥೆ ಪ್ರಪಂಚದ ಇತರ ಭಾಗಗಳಲ್ಲಿ ಹರಡಬಹುದು ಎಂದ ಜೋ ಬೈಡನ್.

ಹಮಾಸ್ ಮತ್ತು ವ್ಲಾಡಿಮಿರ್ ಪುಟಿನ್ ಇಬ್ಬರೂ ನೆರೆಯ ಪ್ರಜಾಪ್ರಭುತ್ವಗಳನ್ನು ನಾಶಮಾಡಲು ಬಯಸುತ್ತಾರೆ: ಜೋ ಬೈಡನ್
ಜೋ ಬೈಡನ್
Follow us
ರಶ್ಮಿ ಕಲ್ಲಕಟ್ಟ
|

Updated on:Oct 20, 2023 | 8:59 AM

ವಾಷಿಂಗ್ಟನ್ ಅಕ್ಟೋಬರ್ 20: ಶುಕ್ರವಾರ ಓವಲ್ ಆಫೀಸ್‌ನಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ (US President Joe Biden) ಹಮಾಸ್ (Hamas) ಮತ್ತು ರಷ್ಯಾ (Russia) ಎರಡೂ ಪ್ರಜಾಪ್ರಭುತ್ವಗಳನ್ನು “ನಿರ್ಮೂಲನೆ” ಮಾಡಲು ಹೊರಟಿವೆ ಎಂದು ಹೇಳಿದ್ದಾರೆ. ಹಮಾಸ್ ಭಯೋತ್ಪಾದನೆ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಅವರ ದಬ್ಬಾಳಿಕೆಯು ವಿಭಿನ್ನ ಬೆದರಿಕೆಗಳನ್ನು ಪ್ರತಿನಿಧಿಸುತ್ತದೆ, ಆದರೆ ಅವರಿಬ್ಬರೂ ನೆರೆಯ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ನಾಶಮಾಡಲು ಬಯಸುತ್ತಾರೆ. ಅಂತರರಾಷ್ಟ್ರೀಯ ಆಕ್ರಮಣವು ಮುಂದುವರಿದರೆ, ಸಂಘರ್ಷ ಮತ್ತು ಅವ್ಯವಸ್ಥೆ ಪ್ರಪಂಚದ ಇತರ ಭಾಗಗಳಲ್ಲಿ ಹರಡಬಹುದು ಎಂದು ಬೈಡನ್ ಹೇಳಿದ್ದಾರೆ.

ಉಕ್ರೇನ್ ಮತ್ತು ಇಸ್ರೇಲ್‌ಗೆ ಸಹಾಯ ಮಾಡಲು ಬೃಹತ್ ಧನಸಹಾಯವನ್ನು ಅನುಮೋದಿಸಲು ಶುಕ್ರವಾರ ಕಾಂಗ್ರೆಸ್ ಅನ್ನು ಕೇಳುವುದಾಗಿ ಯುಎಸ್ ಅಧ್ಯಕ್ಷರು ಹೇಳಿದ್ದು, ಜಾಗತಿಕ ನಾಯಕನಾಗಿ ಯುನೈಟೆಡ್ ಸ್ಟೇಟ್ಸ್‌ನ ಭವಿಷ್ಯಕ್ಕಾಗಿ ಇದು ಹೂಡಿಕೆಯಾಗಿದೆ ಎಂದಿದ್ದಾರೆ.

“ಇದು ಒಂದು ಸ್ಮಾರ್ಟ್ ಹೂಡಿಕೆಯಾಗಿದ್ದು ಅದು ತಲೆಮಾರುಗಳವರೆಗೆ ಅಮೆರಿಕದ ಜನರ ಭದ್ರತೆಗಾಗಿ ಇದರಿಂದ ಲಾಭವಾಗಲಿದೆ. ಅಮೆರಿಕನ್ ನಾಯಕತ್ವವು ಜಗತ್ತನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುತ್ತದೆ. ಅಮೆರಿಕನ್ ಮೈತ್ರಿಗಳು ನಮ್ಮನ್ನು, ಅಮೆರಿಕವನ್ನು ಸುರಕ್ಷಿತವಾಗಿರಿಸುತ್ತವೆ. ಅಮೆರಿಕದ ಮೌಲ್ಯಗಳು ನಮ್ಮನ್ನು ಇತರ ರಾಷ್ಟ್ರಗಳು ಕೆಲಸ ಮಾಡಲು ಬಯಸುವ ಪಾಲುದಾರರನ್ನಾಗಿ ಮಾಡುತ್ತವೆ ಎಂದು ಅಮೆರಿಕ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಟೆಲ್ ಅವಿವ್ ಮತ್ತು ಹಮಾಸ್ ನಡುವಿನ ಯುದ್ಧವು ವಿಶಾಲವಾದ ಪ್ರಾದೇಶಿಕ ಸಂಘರ್ಷಕ್ಕೆ ತಿರುಗದಂತೆ ಮತ್ತು ಪ್ಯಾಲೆಸ್ತೀನಿಯಾದವರಿಗೆ ಮಾನವೀಯ ನೆರವು ವ ಉತ್ತೇಜಿಸುವ ತುರ್ತು ಕಾರ್ಯಾಚರಣೆಯಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ ದಿನಗಳ ನಂತರ ಬೈಡೆನ್ ರಾಷ್ಟ್ರವನ್ನುದ್ದೇಶಿಸಿ ಈ ಭಾಷಣ ಮಾಡಿದ್ದಾರೆ.

ಇದನ್ನೂ ಓದಿ: ಚೀನಾ ಶೃಂಗಸಭೆಯಲ್ಲಿ ಪುಟಿನ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ಹೊರನಡೆದ ಯುರೋಪಿಯನ್ ಪ್ರತಿನಿಧಿಗಳು

ತಮ್ಮ ಭಾಷಣದಲ್ಲಿ, ಯುಎಸ್ ಅಧ್ಯಕ್ಷರು ಗಾಜಾದಿಂದ ಒತ್ತೆಯಾಳಾಗಿಸಿಕೊಂಡಿರುವ ಅಮೆರಿಕನ್ನರ ಸುರಕ್ಷತೆಯು ತಮ್ಮ ಆದ್ಯತೆಯಾಗಿದೆ ಎಂದು ಹೇಳಿದರು. “ಅಧ್ಯಕ್ಷನಾಗಿ, ಒತ್ತೆಯಾಳುಗಳಾಗಿರುವ ಅಮೆರಿಕನ್ನರ ಸುರಕ್ಷತೆಗಿಂತ ನನಗೆ ಹೆಚ್ಚಿನ ಆದ್ಯತೆ ಇಲ್ಲ. ಇಸ್ರೇಲ್ ನಲ್ಲಿ ನಾನು ಬಲವಾದ, ದೃಢನಿರ್ಧಾರ, ಚೇತರಿಸಿಕೊಳ್ಳುವ ಮತ್ತು ಕೋಪಗೊಂಡ, ಆಘಾತದಲ್ಲಿ ಮತ್ತು ಗಂಭೀರ ನೋವಿನಲ್ಲಿರುವ ಜನರನ್ನು ನೋಡಿದೆ ಎಂದು ಬೈಡನ್ ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:59 am, Fri, 20 October 23

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ