
ನವದೆಹಲಿ, ಅಕ್ಟೋಬರ್ 15: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಮಾಸ್ ಗುಂಪನ್ನು ನಿಶ್ಯಸ್ತ್ರಗೊಳಿಸಲು ಪ್ರತಿಜ್ಞೆ ಮಾಡಿದ್ದರೂ ಸಹ, ಹಮಾಸ್ (Hamas) ಪ್ಯಾಲೇಸ್ಟಿನಿಯನ್ ಪ್ರದೇಶದ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳಲು ತೀವ್ರವಾಗಿ ಪ್ರಯತ್ನಿಸುತ್ತಿದೆ. ಗಾಜಾದ ಟ್ರಂಪ್ ಅವರ ‘ನಿಶ್ಶಸ್ತ್ರೀಕರಣ’ ಎಚ್ಚರಿಕೆಯ ನಡುವೆಯೇ ಹಮಾಸ್ ಸಾರ್ವಜನಿಕವಾಗಿ 8 ಗಾಜಾ ನಿವಾಸಿಗಳನ್ನು ಕ್ರೂರವಾಗಿ ಹತ್ಯೆ ಮಾಡಿತು. 8 ಜನರ ಕೈಗಳನ್ನು ಹಿಂದಕ್ಕೆ ಕಟ್ಟಿಹಾಕಿ, ಅವರ ಕಣ್ಣಿಗೆ ಬಟ್ಟೆ ಕಟ್ಟಿ ನಡುರಸ್ತೆಯಲ್ಲೇ ಕೊಲ್ಲಲಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಂಪನ್ನು ನಿಶ್ಯಸ್ತ್ರಗೊಳಿಸಲು ಪ್ರತಿಜ್ಞೆ ಮಾಡಿದ್ದರೂ ಸಹ, ಹಮಾಸ್ ಪ್ಯಾಲೇಸ್ಟಿನಿಯನ್ ಪ್ರದೇಶದ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳಲು ತೀವ್ರವಾಗಿ ಪ್ರಯತ್ನಿಸುತ್ತಿರುವುದರಿಂದ ಗಾಜಾದಲ್ಲಿ ಸಾಮೂಹಿಕವಾಗಿ ಸಾರ್ವಜನಿಕ ಮರಣದಂಡನೆಗಳನ್ನು ನಡೆಸುತ್ತಿದೆ. ಅಮೆರಿಕದ ಮಧ್ಯಸ್ಥಿಕೆಯ ಇಸ್ರೇಲ್ ಜೊತೆಗಿನ ಕದನ ವಿರಾಮದ ನಂತರ ಗಾಜಾ ಪಟ್ಟಿಯ ನಿಯಂತ್ರಣವನ್ನು ಉಳಿಸಿಕೊಳ್ಳಲು ಗುಂಪು ಇತರ ಸಶಸ್ತ್ರ ಪ್ಯಾಲೇಸ್ಟಿನಿಯನ್ ಕುಲಗಳೊಂದಿಗೆ ಘರ್ಷಣೆ ನಡೆಸುತ್ತಿದ್ದಂತೆ ಹಮಾಸ್‌ನ ಪ್ರತೀಕಾರದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ಗಾಜಾ ಕದನ ವಿರಾಮ; 2 ವರ್ಷಗಳ ಬಳಿಕ ಹಮಾಸ್‌ನಿಂದ ಎಲ್ಲಾ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ
ಹಮಾಸ್ ಉಗ್ರರು ಬಂದೂಕುಗಳನ್ನು ಕೈಯಲ್ಲಿ ಹಿಡಿದುಕೊಂಡು ನಡುರಸ್ತೆಯಲ್ಲಿ ಸಾರ್ವಜನಿಕರಿಗೆ ಸಾಮೂಹಿಕ ಮರಣದಂಡನೆ ನೀಡುತ್ತಿದ್ದಾರೆ. ಆ ಮೃತದೇಹಗಳ ಸುತ್ತಲಿನ ಜನರು ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ವಿಡಿಯೋ ಸಂಚಲನ ಮೂಡಿಸಿದೆ. ಈ ವಿಡಿಯೋ ಗಾಜಾದಲ್ಲಿ ಹಮಾಸ್ ನಿಯಂತ್ರಣವನ್ನು ಮತ್ತೆ ದೃಢಪಡಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ