AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ರಷ್ಯಾದ ತೈಲವನ್ನು ಖರೀದಿಸುವುದಿಲ್ಲ, ಮೋದಿ ಭರವಸೆ ಎಂದ ಡೊನಾಲ್ಡ್ ಟ್ರಂಪ್

ಪ್ರಧಾನಿ ಮೋದಿ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಇದು ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಕಾರಣವಾಗಿದ್ದು, ಟ್ರಂಪ್ ಇದನ್ನು 'ದೊಡ್ಡ ಹೆಜ್ಜೆ' ಎಂದಿದ್ದಾರೆ. ಭಾರತ ರಷ್ಯಾದಿಂದ ತೈಲ ನಿಲ್ಲಿಸಿದ್ರೆ ಉಕ್ರೇನ್ ಯುದ್ಧವನ್ನು ನಿಲ್ಲಿಸಲು ಸಹಾಯವಾಗುತ್ತದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಇದರ ಜತೆಗೆ ಧಾನಿ ಮೋದಿ 'ಮಹಾನ್ ವ್ಯಕ್ತಿ' ಹಾಗೂ ಭಾರತ ನಂಬಿಕಾರ್ಹವಾದ ರಾಷ್ಟ್ರ ಎಂದು ಹಾಡಿ ಹೊಗಳಿದ್ದಾರೆ.

ಭಾರತ ರಷ್ಯಾದ ತೈಲವನ್ನು ಖರೀದಿಸುವುದಿಲ್ಲ, ಮೋದಿ ಭರವಸೆ ಎಂದ ಡೊನಾಲ್ಡ್ ಟ್ರಂಪ್
ಮೋದಿ ಮತ್ತು ಟ್ರಂಪ್
ಅಕ್ಷಯ್​ ಪಲ್ಲಮಜಲು​​
|

Updated on:Oct 16, 2025 | 11:36 AM

Share

ವಾಷಿಂಗ್ಟನ್, ಅ.16: ಭಾರತ ಹಾಗೂ ಅಮೆರಿಕದ ಮುಸುಕಿನ ಗುದ್ದಾಟದ ನಡುವೆ, ಮಹತ್ವ ಹೇಳಿಕೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ (Donald Trump)ನೀಡಿದ್ದಾರೆ. ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಡೊನಾಲ್ಡ್ ಟ್ರಂಪ್‌ಗೆ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಬುಧವಾರದಂದು (ಅ.15) ವಾಷಿಂಗ್ಟನ್‌ನ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಇದನ್ನು ‘ದೊಡ್ಡ ಹೆಜ್ಜೆ’ ಎಂದು ಡೊನಾಲ್ಡ್​ ಟ್ರಂಪ್ ಕರೆದಿದ್ದಾರೆ.

ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುತ್ತದೆ ಎಂದು ಹೇಳಿದೆ. ಅದನ್ನು ತಕ್ಷಣದಿಂದ ಮಾಡಲು ಸಾಧ್ಯವಿಲ್ಲ. ಆದರೆ ಖಂಡಿತ ಈ ಕ್ರಮವನ್ನು ನಾವು ಅನುಸರಿಸುತ್ತೇವೆ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳವ ಭರವಸೆಯನ್ನು ಪ್ರಧಾನಿ ಮೋದಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ‘ಮಹಾನ್ ವ್ಯಕ್ತಿ’ ಹಾಗೂ ಭಾರತ ನಂಬಿಕಾರ್ಹವಾದ ರಾಷ್ಟ್ರ ಎಂದು ಹಾಡಿ ಹೊಗಳಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಕೆಲವು ದಿನಗಳಿಂದ ನಮ್ಮ ಮತ್ತು ಭಾರತದ ನಡುವೆ ಭಿನ್ನಾಭಿಪ್ರಾಯ ಇತ್ತು. ಆದರೆ ಇದೀಗ ಅದು ಪರಿಹಾರವಾಗಿದೆ. ಮೊದಲಿನಿಂದಲ್ಲೂ ಭಾರತ ನಮ್ಮ ಸ್ನೇಹಿತ, ಭಾರತ ನನಗೆ ದೊಡ್ಡ ಭರವಸೆಯೊಂದನ್ನು ನೀಡಿದೆ. ರಷ್ಯಾದಿಂದ ಯಾವುದೇ ತೈಲ ಖರೀದಿ ಇರುವುದಿಲ್ಲ ಹೇಳಿದೆ ಎಂದು ಟ್ರಂಪ್ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಪ್ರಧಾನಿಯ ಎದುರೇ ನಿಂತು ಮೋದಿ ನನ್ನ ಉತ್ತಮ ಸ್ನೇಹಿತ ಎಂದ ಟ್ರಂಪ್!

ಇನ್ನು ಈ ವೇಳೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೂ ಎಚ್ಚರಿಕೆ ನೀಡಿದ್ದಾರೆ. ‘ಹತ್ಯೆ’ಯನ್ನು ನಿಲ್ಲಿಸಬೇಕು. ಪುಟಿನ್ ಮತ್ತು ಉಕ್ರೇನಿಯನ್ ಪ್ರಧಾನಿ ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಸಾಕಷ್ಟು ‘ದ್ವೇಷ’ವಿದೆ. ಭಾರತ ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸಿದರೆ, ಅದು ಉಕ್ರೇನ್ ಯುದ್ಧವನ್ನು ನಿಲ್ಲಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರಿಂದ ಬಯಸುವುದೇನೆಂದರೆ ಉಕ್ರೇನಿಯನ್ನರನ್ನು ಕೊಲ್ಲುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

​​​​​​

Published On - 11:35 am, Thu, 16 October 25