Ismail Haniyeh Death: ಇರಾನ್​ನಲ್ಲಿ ಹಮಾಸ್​ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಹತ್ಯೆ

ಇರಾನ್​ನಲ್ಲಿ ಹಮಾಸ್​ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಹತ್ಯೆ

Ismail Haniyeh Death: ಇರಾನ್​ನಲ್ಲಿ ಹಮಾಸ್​ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಹತ್ಯೆ
ಇಸ್ಮಾಯಿಲ್
Follow us
ನಯನಾ ರಾಜೀವ್
|

Updated on:Jul 31, 2024 | 9:14 AM

ಇರಾನ್​ನಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್​ ಹನಿಯಾರನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹನಿಯಾ ಇದ್ದ ಟಹ್ರಾನ್ ನಿವಾಸವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ ಎನ್ನಲಾಗಿದೆ. ಇರಾನ್ ಸೇನೆ, ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಕೂಡ ಇದನ್ನು ದೃಢಪಡಿಸಿವೆ.

ಇಸ್ಮಾಯಿಲ್ ಹನಿಯಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಹಮಾಸ್, ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ. ಇಸ್ಮಾಯಿಲ್ ಹನಿಯಾ ಅವರ ಸಾವನ್ನು ದೃಢೀಕರಿಸುವ ಹೇಳಿಕೆಯನ್ನು ಹಮಾಸ್ ಸಹ ಬಿಡುಗಡೆ ಮಾಡಿದೆ ಮತ್ತು ಇಸ್ರೇಲ್ ಹತ್ಯೆಯ ಆರೋಪವನ್ನೂ ಮಾಡಿದೆ. ಆದರೆ, ಈ ಬಗ್ಗೆ ಇಸ್ರೇಲ್ ಯಾವುದೇ ಹೇಳಿಕೆ ನೀಡಿಲ್ಲ.

ಮಂಗಳವಾರ ಮುಂಜಾನೆ, ಇಸ್ಮಾಯಿಲ್ ಹನಿಯಾ ಅವರು ಇರಾನ್‌ನ ನೂತನ ಅಧ್ಯಕ್ಷರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇತ್ತೀಚೆಗಷ್ಟೇ ಇಸ್ರೇಲಿ ಭದ್ರತಾ ಪಡೆಗಳಿಂದ ಹನಿಯಾ ಅವರ ಮೂವರು ಮಕ್ಕಳು ಕೂಡ ಕೊಲ್ಲಲ್ಪಟ್ಟಿದ್ದರು. ಹನಿಯಾರ ಮೂವರು ಮಕ್ಕಳಾದ ಅಮೀರ್, ಹಜೆಮ್ ಹಾಗೂ ಮೊಹಮ್ಮದ್ ಗಾಜಾದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಹೊರಟಿದ್ದರು ಎಂದು ಇಸ್ರೇಲ್ ಸೇನೆ ಹೇಳಿತ್ತು.

ಮತ್ತಷ್ಟು ಓದಿ: ಗಾಜಾದಲ್ಲಿ ಹಮಾಸ್​ ಸೇನಾ ಕಮಾಂಡರ್​ನ ಗುರಿಯಾಗಿಸಿಕೊಂಡು ಇಸ್ರೇಲ್​ ದಾಳಿ, 90 ಮಂದಿ ಸಾವು

ಹಮಾಸ್ ಹಾಗೂ ಇಸ್ರೇಲ್​ ನಡುವಿನ ಯುದ್ಧವು 2023ರ ಅಕ್ಟೋಬರ್ 3ರಿಂದಲೂ ನಡೆಯುತ್ತಿದೆ. ಹಮಾಸ್ 250 ನಾಗರಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿತ್ತು. 150 ಒತ್ತೆಯಾಳುಗಳು ಇನ್ನೂ ಅವರ ವಶದಲ್ಲಿದ್ದಾರೆ. ಇಸ್ರೇಲಿ ದಾಳಿಯಲ್ಲಿ ಇದುವರೆಗೆ 39ಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:59 am, Wed, 31 July 24

ಕೊಹ್ಲಿಯ ಕೈ ಮುಟ್ಟಿ ಸ್ವರ್ಗ ಸಿಕ್ಕವನಂತೆ ಕುಣಿದಾಟಿದ ಬಾಲಕ
ಕೊಹ್ಲಿಯ ಕೈ ಮುಟ್ಟಿ ಸ್ವರ್ಗ ಸಿಕ್ಕವನಂತೆ ಕುಣಿದಾಟಿದ ಬಾಲಕ
ಬೆಂಗಳೂರು: ಮಾದಾವರ ಸುತ್ತಮುತ್ತ ಫುಲ್​ ಟ್ರಾಫಿಕ್​ಜಾಮ್, ವಾಹನ ಸವಾರರ ಪರದಾಟ
ಬೆಂಗಳೂರು: ಮಾದಾವರ ಸುತ್ತಮುತ್ತ ಫುಲ್​ ಟ್ರಾಫಿಕ್​ಜಾಮ್, ವಾಹನ ಸವಾರರ ಪರದಾಟ
ಕಟಕ್‌ನಲ್ಲಿ ಅರ್ಧಕ್ಕೆ ನಿಂತ ಪಂದ್ಯ; ಮೈದಾನ ತೊರೆದ ಎಲ್ಲಾ ಆಟಗಾರರು..!
ಕಟಕ್‌ನಲ್ಲಿ ಅರ್ಧಕ್ಕೆ ನಿಂತ ಪಂದ್ಯ; ಮೈದಾನ ತೊರೆದ ಎಲ್ಲಾ ಆಟಗಾರರು..!
Aero india: ಬೆಂಗಳೂರಿನಲ್ಲಿ ರಾಜನಾಥ್​ ಸಿಂಗ್​ ಸುದ್ದಿಗೋಷ್ಠಿಯ ನೇರಪ್ರಸಾರ
Aero india: ಬೆಂಗಳೂರಿನಲ್ಲಿ ರಾಜನಾಥ್​ ಸಿಂಗ್​ ಸುದ್ದಿಗೋಷ್ಠಿಯ ನೇರಪ್ರಸಾರ
ಬೆಂಗಳೂರು: ಖ್ಯಾತ ಗಾಯಕನ ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ
ಬೆಂಗಳೂರು: ಖ್ಯಾತ ಗಾಯಕನ ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ
ಮಜಾ ಟಾಕೀಸ್​: ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ಮಜಾ ಟಾಕೀಸ್​: ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!
ರಾಜ್ಯಾಧ್ಯಕ್ಷ ರೇಸ್​ನಲ್ಲಿ ಸೋಮಣ್ಣ ಇದ್ದಾರಾ? ಸಿದ್ದೇಶ್ವರ್ ಏನಂದ್ರು ನೋಡಿ
ರಾಜ್ಯಾಧ್ಯಕ್ಷ ರೇಸ್​ನಲ್ಲಿ ಸೋಮಣ್ಣ ಇದ್ದಾರಾ? ಸಿದ್ದೇಶ್ವರ್ ಏನಂದ್ರು ನೋಡಿ
ಬಿಗ್ ಬಾಸ್​ನಿಂದ 50 ಲಕ್ಷ ಇನ್ನೂ ಬಂದಿಲ್ಲ: ವೇದಿಕೆಯಲ್ಲೇ ಹೇಳಿದ ಹನುಮಂತ
ಬಿಗ್ ಬಾಸ್​ನಿಂದ 50 ಲಕ್ಷ ಇನ್ನೂ ಬಂದಿಲ್ಲ: ವೇದಿಕೆಯಲ್ಲೇ ಹೇಳಿದ ಹನುಮಂತ
ಗುಡ್ಡದ ತುತ್ತ ತುದಿಯಲ್ಲಿ ಕಾಡ್ಗಿಚ್ಚು: ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಗುಡ್ಡದ ತುತ್ತ ತುದಿಯಲ್ಲಿ ಕಾಡ್ಗಿಚ್ಚು: ಡ್ರೋನ್​ನಲ್ಲಿ ಕಂಡಿದ್ದು ಹೀಗೆ