Israel-Hamas Conflict: ಮತ್ತಿಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

|

Updated on: Oct 24, 2023 | 8:39 AM

ಇಸ್ರೇಲ್(Israel) ಮತ್ತು ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್(Hamas) ನಡುವೆ ನಡೆಯುತ್ತಿರುವ ಯುದ್ಧ ತೀವ್ರಗೊಂಡಿದೆ. ಗಾಜಾ ಪಟ್ಟಿಯ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಇದುವರೆಗೆ 5,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ. ಅದೇ ಸಮಯದಲ್ಲಿ, ಇಸ್ರೇಲಿ ಸರ್ಕಾರವು ಈ ಯುದ್ಧದ ಅಂತ್ಯದಲ್ಲಿ, ಗಾಜಾ ಪಟ್ಟಿಯಲ್ಲಿ ಹಮಾಸ್ ಆಳ್ವಿಕೆ ಇರುವುದಿಲ್ಲ ಎಂದು ಹೇಳಿದೆ.

Israel-Hamas Conflict: ಮತ್ತಿಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್
ಒತ್ತೆಯಾಳುಗಳ ಬಿಡುಗಡೆ
Follow us on

ಇಸ್ರೇಲ್(Israel) ಮತ್ತು ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್(Hamas) ನಡುವೆ ನಡೆಯುತ್ತಿರುವ ಯುದ್ಧ ತೀವ್ರಗೊಂಡಿದೆ. ಗಾಜಾ ಪಟ್ಟಿಯ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಇದುವರೆಗೆ 5,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ. ಅದೇ ಸಮಯದಲ್ಲಿ, ಇಸ್ರೇಲಿ ಸರ್ಕಾರವು ಈ ಯುದ್ಧದ ಅಂತ್ಯದಲ್ಲಿ, ಗಾಜಾ ಪಟ್ಟಿಯಲ್ಲಿ ಹಮಾಸ್ ಆಳ್ವಿಕೆ ಇರುವುದಿಲ್ಲ ಎಂದು ಹೇಳಿದೆ.

ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ಇಸ್ರೇಲ್‌ನಿಂದ ಗಾಜಾ ಪಟ್ಟಿಗೆ ಕರೆತಂದ ಇನ್ನೂ ಇಬ್ಬರು ಮಹಿಳಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ ಎಂದು ಹಮಾಸ್ ಸೋಮವಾರ ಹೇಳಿದೆ. ಕತಾರ್ ಮತ್ತು ಈಜಿಪ್ಟ್‌ನ ಮಧ್ಯಸ್ಥಿಕೆಯ ನಂತರ ಮಾನವೀಯ ಕಾರಣಗಳಿಗಾಗಿ ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಹಮಾಸ್ ಹೇಳಿಕೆಯಲ್ಲಿ ತಿಳಿಸಿದೆ. ಶನಿವಾರವಷ್ಟೇ ಅಮೆರಿಕದ ಇಬ್ಬರು ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿತ್ತು. ಬಂಡುಕೋರರು 200ಕ್ಕೂ ಅಧಿಕ ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.

ಮಹಿಳೆಯರನ್ನು ಗಾಜಾ ಮತ್ತು ಈಜಿಪ್ಟ್ ನಡುವಿನ ರಫಾ ಗಡಿಗೆ ಕರೆದೊಯ್ಯಲಾಯಿತು ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೋಮವಾರ ಯುದ್ಧ ಪೀಡಿತ ಗಾಜಾ ಪಟ್ಟಿಯಲ್ಲಿರುವ ನಾಗರಿಕರಿಗೆ ಮಾನವೀಯ ನೆರವಿಗಾಗಿ 20 ಮಿಲಿಯನ್ ಪೌಂಡ್ ಘೋಷಿಸಿದ್ದಾರೆ.

ಮತ್ತಷ್ಟು ಓದಿ: ಇಸ್ರೇಲ್​ ಗಾಜಾದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್​ನ ಹಿರಿಯ ನಾಯಕ ಸಾವು

ಇಸ್ರೇಲಿ ದಾಳಿಯಿಂದಾಗಿ ಪ್ಯಾಲೆಸ್ತೀನ್ ಎನ್‌ಕ್ಲೇವ್‌ನಲ್ಲಿರುವ ತಮ್ಮ ಇನ್‌ಕ್ಯುಬೇಟರ್‌ಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡರೆ ನವಜಾತ ತೀವ್ರ ನಿಗಾ ಘಟಕದಲ್ಲಿರುವ ಅನೇಕ ಶಿಶುಗಳು ನಿಮಿಷಗಳಲ್ಲಿ ಸಾಯುತ್ತವೆ ಎಂದು ಗಾಜಾದ ನವಜಾತ ತೀವ್ರ ನಿಗಾ ಘಟಕದ ವೈದ್ಯರು ಎಚ್ಚರಿಸಿದ್ದಾರೆ.

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್​ ಮೇಲೆ 5 ಸಾವಿರ ರಾಕೆಟ್​ಗಳಿಂದ ದಾಳಿ ನಡೆಸಿದರು, ಅದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾ ಮೇಲೆ ದಾಳಿ ನಡೆಸುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:38 am, Tue, 24 October 23