AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್​ ಗಾಜಾದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್​ನ ಹಿರಿಯ ನಾಯಕ ಸಾವು

ಇಸ್ರೇಲ್​​ ಗಾಜಾದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್​ನ ಹಿರಿಯ ನಾಯಕ ಮುಹಮ್ಮದ್ ಕಟಮಾಶ್‌ ಸಾವನ್ನಪ್ಪಿದ್ದಾನೆ. ಮುಹಮ್ಮದ್ ಭಯೋತ್ಪಾದಕ ಗುಂಪಿನ ಸೆಂಟ್ರಲ್ ಕ್ಯಾಂಪ್ಸ್ ಬ್ರಿಗೇಡ್‌ನಲ್ಲಿ ಬೆಂಕಿ ಮತ್ತು ಫಿರಂಗಿ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದ್ದ, ಮತ್ತು ಗಾಜಾ ಪಟ್ಟಿಯ ಎಲ್ಲಾ ಸುತ್ತಿನ ಹೋರಾಟದಲ್ಲಿ ಇಸ್ರೇಲ್ ವಿರುದ್ಧ ಯೋಜನೆಗಳ ಕಾರ್ಯಗತಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಎನ್ನಲಾಗಿದೆ.

ಇಸ್ರೇಲ್​ ಗಾಜಾದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್​ನ ಹಿರಿಯ ನಾಯಕ ಸಾವು
ವೈಮಾನಿಕ ದಾಳಿImage Credit source: NDTV
ನಯನಾ ರಾಜೀವ್
|

Updated on: Oct 23, 2023 | 7:55 AM

Share

ಇಸ್ರೇಲ್​​ ಗಾಜಾದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್​ನ ಹಿರಿಯ ನಾಯಕ ಮುಹಮ್ಮದ್ ಕಟಮಾಶ್‌ ಸಾವನ್ನಪ್ಪಿದ್ದಾನೆ. ಮುಹಮ್ಮದ್ ಭಯೋತ್ಪಾದಕ ಗುಂಪಿನ ಸೆಂಟ್ರಲ್ ಕ್ಯಾಂಪ್ಸ್ ಬ್ರಿಗೇಡ್‌ನಲ್ಲಿ ಬೆಂಕಿ ಮತ್ತು ಫಿರಂಗಿ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದ್ದ, ಮತ್ತು ಗಾಜಾ ಪಟ್ಟಿಯ ಎಲ್ಲಾ ಸುತ್ತಿನ ಹೋರಾಟದಲ್ಲಿ ಇಸ್ರೇಲ್ ವಿರುದ್ಧ ಯೋಜನೆಗಳ ಕಾರ್ಯಗತಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಎನ್ನಲಾಗಿದೆ.

ಇಸ್ರೇಲ್ ಶಸ್ತ್ರಾಸ್ತ್ರಗಳ ಉತ್ಪಾದನಾ ತಾಣ ಮತ್ತು ಮಿಲಿಟರಿ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿತು. ಪ್ಯಾಲೆಸ್ತೀನಿಯನ್ನರಿಗೆ ಉತ್ತರ ಗಾಜಾದಿಂದ ದಕ್ಷಿಣಕ್ಕೆ ತೆರಳುವಂತೆ ಇಸ್ರೇಲ್​ ಹೇಳಿದೆ. ಒಂದೊಮ್ಮೆ ಹೋಗದಿದ್ದರೆ ಅಂಥವರನ್ನು ನಾವು ಉಗ್ರರೆಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಗಾಜಾದ ಉತ್ತರ ಭಾಗದಲ್ಲಿರುವುದು ನಿಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡಲಿದೆ, ನಿಮಗೆ ಈಗಾಗಲೇ ದಕ್ಷಿಣಕ್ಕೆ ತೆರಳುವಂತೆ ನಾವು ಕೇಳಿಕೊಂಡಿದ್ದಾಗಿದೆ. ಇನ್ನೂ ನೀವು ಈ ಜಾಗವನ್ನು ಬಿಟ್ಟು ಹೋಗಿಲ್ಲ ಎಂದಾದರೆ ನಿಮ್ಮನ್ನು ಉಗ್ರರೆಂದು ಪರಿಗಣಿಸಲಾಗುತ್ತದೆ ಎಂದು ಇಸ್ರೇಲ್ ಹೇಳಿದೆ.

ಮತ್ತಷ್ಟು ಓದಿ: ಬೇಗ ಗಾಜಾ ಬಿಟ್ಟು ಹೋಗಿ ಇಲ್ಲವಾದರೆ ನಿಮ್ಮನ್ನು ಉಗ್ರರೆಂದು ಪರಿಗಣಿಸಬೇಕಾಗುತ್ತೆ: ಇಸ್ರೇಲ್ ಎಚ್ಚರಿಕೆ

ಇಸ್ರೇಲ್​ ಇಂದು ಬೆಳಗ್ಗೆ ಗಾಜಾದ ಮಸೀದಿಯೊಂದರ ಮೇಲೆ ವೈಮಾನಿಕ ದಾಳಿ ನಡೆಸಿದೆ. ಗಾಜಾದ ವೆಸ್ಟ್​ ಬ್ಯಾಂಕ್​ನ ಜೆನಿನ್ ನಗರದಲ್ಲಿರುವ ಅಲ್​-ಅನ್ಸಾರ್ ಮಸೀದಿ ಸಂಕೀರ್ಣದಲ್ಲಿರುವ ಭಯೋತ್ಪಾದಕ ಸಂಘಟನೆ ಹಮಾಸ್ ಹಾಗೂ ಇಸ್ಲಾಮಿಕ್ ಜಿಹಾದ್ ಕಮಾಂಡ್ ಸೆಂಟರ್ ಮೇಲೆ ಇಸ್ರೇಲಿ ಸೇನೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವೈದ್ಯರನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ.

ಆದರೆ, ಇದು ಇನ್ನೂ ದೃಢಪಟ್ಟಿಲ್ಲ. ಇದಕ್ಕೂ ಮುನ್ನ ನೂರ್ ಶಮ್ಸ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಮಕ್ಕಳು ಸೇರಿದಂತೆ 13 ಪ್ಯಾಲೆಸ್ತೀನ್ ಪ್ರಜೆಗಳು ಸಾವನ್ನಪ್ಪಿದ್ದರು. ಗಾಜಾ ನಗರದ ಜನರು ತಮ್ಮ ಸುರಕ್ಷತೆಗಾಗಿ ದಕ್ಷಿಣ ಗಾಜಾದ ಕಡೆಗೆ ವಲಸೆ ಹೋಗುವಂತೆ ಇಸ್ರೇಲ್ ಕೇಳಿಕೊಂಡಿತ್ತು. ಹಮಾಸ್ ಗುಂಪು ಇಬ್ಬರು ಅಮೆರಿಕದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ