ಗಾಜಾ ಮುತ್ತಿಗೆಗೆ ಇಸ್ರೇಲ್ ಆದೇಶ: ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಹಮಾಸ್ ಬೆದರಿಕೆ

|

Updated on: Oct 10, 2023 | 7:51 AM

ಇಸ್ರೇಲ್(Israel)​ನ ಸೇನೆಯು ಯಾವುದೇ ಪೂರ್ವ ಎಚ್ಚರಿಕೆಯಿಲ್ಲದೆ ಗಾಜಾ ಪಟ್ಟಿಯ ನಿವಾಸಿಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದರೆ ಇಸ್ರೇಲ್​ನ ಒತ್ತೆಯಾಳುಗಳನ್ನು ಕೊಲ್ಲುತ್ತೇವೆ ಎಂದು ಪ್ಯಾಲೆಸ್ತೀನ್(Palestine)​ನ ಭಯೋತ್ಪಾದಕ ಸಂಘಟನೆ ಹಮಾಸ್(Hamas) ಎಚ್ಚರಿಕೆ ನೀಡಿದೆ. ನಮ್ಮಲ್ಲಿ ಒಬ್ಬರನ್ನು ಹತ್ಯೆ ಮಾಡಿದರೂ ಒತ್ತೆಯಾಳಾಗಿರುವವರಲ್ಲಿ ಒಬ್ಬರ ಪ್ರಾಣ ಹೋಗುತ್ತದೆ, ನಮ್ಮ ಶತ್ರುಗಳಿಗೆ ನೈತಿಕತೆಯ ಭಾಷೆ ಅರ್ಥವಾಗುವುದಿಲ್ಲ, ಆದ್ದರಿಂದ ಅವರಿಗೆ ಅರ್ಥವಾಗುವ ಭಾಷೆಯಲ್ಲೇ ನಾವು ಉತ್ತರಿಸುತ್ತೇವೆ ಎಂದು ಹಮಾಸ್ ಹೇಳಿದೆ.

ಗಾಜಾ ಮುತ್ತಿಗೆಗೆ ಇಸ್ರೇಲ್ ಆದೇಶ: ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಹಮಾಸ್ ಬೆದರಿಕೆ
ಇಸ್ರೇಲ್
Image Credit source: The Times Of Israel
Follow us on

ಇಸ್ರೇಲ್(Israel)​ನ ಸೇನೆಯು ಯಾವುದೇ ಪೂರ್ವ ಎಚ್ಚರಿಕೆಯಿಲ್ಲದೆ ಗಾಜಾ ಪಟ್ಟಿಯ ನಿವಾಸಿಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದರೆ ಇಸ್ರೇಲ್​ನ ಒತ್ತೆಯಾಳುಗಳನ್ನು ಕೊಲ್ಲುತ್ತೇವೆ ಎಂದು ಪ್ಯಾಲೆಸ್ತೀನ್(Palestine)​ನ ಭಯೋತ್ಪಾದಕ ಸಂಘಟನೆ ಹಮಾಸ್(Hamas) ಎಚ್ಚರಿಕೆ ನೀಡಿದೆ. ನಮ್ಮಲ್ಲಿ ಒಬ್ಬರನ್ನು ಹತ್ಯೆ ಮಾಡಿದರೂ ಒತ್ತೆಯಾಳಾಗಿರುವವರಲ್ಲಿ ಒಬ್ಬರ ಪ್ರಾಣ ಹೋಗುತ್ತದೆ, ನಮ್ಮ ಶತ್ರುಗಳಿಗೆ ನೈತಿಕತೆಯ ಭಾಷೆ ಅರ್ಥವಾಗುವುದಿಲ್ಲ, ಆದ್ದರಿಂದ ಅವರಿಗೆ ಅರ್ಥವಾಗುವ ಭಾಷೆಯಲ್ಲೇ ನಾವು ಉತ್ತರಿಸುತ್ತೇವೆ ಎಂದು ಹಮಾಸ್ ಹೇಳಿದೆ.

ಕಳೆದ ಮೂರು ದಿನಗಳಿಂದ ಹಮಾಸ್ ಉಗ್ರರು ದಕ್ಷಿಣ ಇಸ್ರೇಲ್ ನಗರಗಳ ಮೇಲೆ ದಾಳಿ ನಡೆಸುತ್ತಲೇ ಇದ್ದಾರೆ, 5000 ರಾಕೆಟ್ ದಾಳಿ ನಡೆಸಿದ್ದು, ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಹಮಾಸ್ ಉಗ್ರರು 100ಕ್ಕೂ ಅಧಿಕ ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಹಮಾಸ್ ಭಯೋತ್ಪಾದಕ ಗುಂಪಿನ ಅಡಗುತಾಣಗಳನ್ನು ನಾಶಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ನಾವು ಈ ಯುದ್ಧವನ್ನು ಬಯಸಲಿಲ್ಲ. ಇದು ಅತ್ಯಂತ ಕ್ರೂರ ಮತ್ತು ಘೋರ ರೀತಿಯಲ್ಲಿ ನಮ್ಮ ಮೇಲೆ ಬಲವಂತವಾಗಿ ಹೇರಲ್ಪಟ್ಟಿತು. ಆದರೆ ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸದಿದ್ದರೂ, ಇಸ್ರೇಲ್ ಅದನ್ನು ಮುಗಿಸುತ್ತದೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಗಾಜಾದ ಸಂಪೂರ್ಣ ಮುತ್ತಿಗೆಗೆ ಇಸ್ರೇಲ್ ಆದೇಶ: ವಿದ್ಯುತ್, ಆಹಾರ, ನೀರು, ಇಂಧನ ಕಡಿತ

ನೇತನ್ಯಾಹು ಹಮಾಸ್ ಅನ್ನು ಉಗ್ರಗಾಮಿ ಇಸ್ಲಾಮಿಕ್ ಭಯೋತ್ಪಾದಕ ಗುಂಪು ಐಸಿಸ್‌ಗೆ ಹೋಲಿಸಿದ್ದಾರೆ. ಯುಎಸ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುಕೆ ಹಮಾಸ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದಲ್ಲಿ ಇಸ್ರೇಲ್ ಅನ್ನು ಬೆಂಬಲಿಸುವ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ