‘ತಾಲಿಬಾನ್ ಬರುತ್ತಿದೆ, ಸಹಾಯ ಮಾಡಿ’ ಎಂದು ಕಣ್ಣೀರಿಟ್ಟು ಅಮೆರಿಕ ಸೇನೆಯಲ್ಲಿ ವಿನಂತಿಸಿದ ಅಫ್ಘಾನಿಸ್ತಾನದ ಮಹಿಳೆಯರು

| Updated By: ರಶ್ಮಿ ಕಲ್ಲಕಟ್ಟ

Updated on: Aug 18, 2021 | 8:02 PM

Kabul Airport: ರೆ. "ನನಗೆ ಸಹಾಯ ಮಾಡಿ, ದಯವಿಟ್ಟು ನನಗೆ ಸಹಾಯ ಮಾಡಿ. ತಾಲಿಬಾನ್‌ಗಳು ನನಗಾಗಿ ಬರುತ್ತಿದ್ದಾರೆ," ಹೆಂಗಸರು ತಮ್ಮ ಸ್ಥಳೀಯ ಭಾಷೆಯಲ್ಲಿ ಕೂಗುತ್ತಿರುವುದು ವಿಡಿಯೊದಲ್ಲಿದೆ.

ತಾಲಿಬಾನ್ ಬರುತ್ತಿದೆ, ಸಹಾಯ ಮಾಡಿ ಎಂದು ಕಣ್ಣೀರಿಟ್ಟು ಅಮೆರಿಕ ಸೇನೆಯಲ್ಲಿ ವಿನಂತಿಸಿದ ಅಫ್ಘಾನಿಸ್ತಾನದ ಮಹಿಳೆಯರು
ಅಳುತ್ತಿರುವ ಅಫ್ಘಾನಿಸ್ತಾನದ ಮಹಿಳೆಯರು
Follow us on

ಕಾಬೂಲ್: ಕಾಬೂಲ್‌ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನದ ಪ್ರಜೆಗಳಿಂದ ತುಂಬಿಹೋಗಿದೆ. ತಾಲಿಬಾನ್ ಆಡಳಿತವು ಮತ್ತೆ ಅಧಿಕಾರಕ್ಕೆ ಬಂದ ನಂತರ ತಮ್ಮ ದೇಶವನ್ನು ತೊರೆಯಲು ಜನರು ಓಡುತ್ತಿದ್ದಾರೆ. ಅಮೆರಿಕ ವಾಯುಪಡೆಯ ವಿಮಾನಕ್ಕೆ ಕಾಯುತ್ತಿರುವ ಜನರು ಒಂದೆಡೆಯಾದರೆ ವಿಮಾನವೇರಲು ನೂಕುನುಗ್ಗಲು ಮಾಡುವ ಜನರ ಗುಂಪುಗಳ ವಿಡಿಯೊವನ್ನು ನಾವು ನೋಡಿದ್ದೇವೆ.

ಇದೀಗ ಅಂತದ್ದೇ ವಿಡಿಯೊವೊಂದನ್ನು ಬ್ರಿಟನ್​​ನ ಡೈಲಿಮೇಲ್ ಪೋಸ್ಟ್ ಮಾಡಿದೆ, ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ವಿಮಾನಕ್ಕಾಗಿ ಕಾಯುತ್ತಿರುವ ಅಫ್ಘಾನಿಸ್ತಾನದ ಮಹಿಳೆಯರ ಗುಂಪು ಅಮೆರಿಕದ ಸೈನ್ಯದೊಂದಿಗೆ ಅಂಗಲಾಚುತ್ತಿದ್ದಾರೆ. “ನನಗೆ ಸಹಾಯ ಮಾಡಿ, ದಯವಿಟ್ಟು ನನಗೆ ಸಹಾಯ ಮಾಡಿ. ತಾಲಿಬಾನ್‌ಗಳು ನನಗಾಗಿ ಬರುತ್ತಿದ್ದಾರೆ,” ಹೆಂಗಸರು ತಮ್ಮ ಸ್ಥಳೀಯ ಭಾಷೆಯಲ್ಲಿ ಕೂಗುತ್ತಿರುವುದು ವಿಡಿಯೊದಲ್ಲಿದೆ.

ಡೈಲಿ ಮೇಲ್ ವರದಿಯ ಪ್ರಕಾರ ಬುಧವಾರ 50 ಸಾವಿರ ಜನರು ವಿಮಾನ ನಿಲ್ದಾಣದಲ್ಲಿ ತಮ್ಮ ತಾಯ್ನಾಡನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ಹೋಗಲು ಪ್ರಯತ್ನಿಸಿದ್ದಾರೆ. ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಹಲವಾರು ದೇಶಗಳ ಹೊರತಾಗಿಯೂ, “ತಲಾ ಸಾವಿರಾರು ಅಫ್ಘಾನ್ ನಿರಾಶ್ರಿತರನ್ನು ಕರೆದೊಯ್ಯುವ ಪ್ರತಿಜ್ಞೆ” ಮಾಡಿದ್ದರೂ, ಸ್ಥಳಾಂತರಿಸುವ ವಿಮಾನಗಳು ಕೇವಲ ಶೇ 50ಪ್ರಯಾಣಿಕರೊಂದಿಗೆ ಹೊರಡುತ್ತಿವೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣಕ್ಕೆ ಬರುವ ಹೆಚ್ಚಿನ ಜನರು ಪ್ರಯಾಣದ ದಾಖಲೆಗಳನ್ನು ಹೊಂದಿಲ್ಲ ಎಂದು ವರದಿ ಹೇಳಿದೆ.

ಅಫ್ಘಾನಿಸ್ತಾನದಲ್ಲಿ ಆಗಸ್ಟ್ 15 ರಂದು ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡಿತು, ಹೀಗಾಗಿ 2001 ರಿಂದ ಇದೇ ಮೊದಲ ಬಾರಿಗೆ ತಾಲಿಬಾನ್ ಇಲ್ಲಿ ಅಧಿಕಾರವನ್ನು ವಶಪಡಿಸಿಕೊಂಡಿತು. 9/11 ದಾಳಿಯ ನಂತರ ದೇಶಕ್ಕೆ ಆಗಮಿಸಿದ ಅಮೆರಿಕ ನೇತೃತ್ವದ ಸೈನ್ಯವು ಅದನ್ನು ಓಡಿಸಿತು. ಏಪ್ರಿಲ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ನಿರ್ದೇಶಿಸಿದಂತೆ ಅಮೆರಿಕದ ಸೇನೆ ಅಫ್ಘಾನಿಸ್ತಾನದಿಂದ ನಿರ್ಗಮಿಸಿದ ಬೆನ್ನಲ್ಲೇ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ.

ಇದನ್ನೂ ಓದಿ: ತಾಲಿಬಾನ್ ಬೆಂಬಲಿಸಿ ಹೇಳಿಕೆ ನೀಡಿದ ಎಸ್​ಪಿ ಸಂಸದನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಇದನ್ನೂ ಓದಿ: Taliban In Afghanistan: ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಇದ್ದರೆ ಇಡೀ ಜಗತ್ತಿಗೆ ಕೊರೊನಾ ಇದ್ದಂತೆ ಏಕೆ?

( Help me please Video shows Afghan women pleading with US troops to let them enter Kabul airport )