ಸಹೋದ್ಯೋಗಿಗಳಿಗೆ ಹೆದರಿಸಿ, ಅವಾಚ್ಯ ಪದಗಳಿಂದ ನಿಂದಿಸಿದ ಭಾರತೀಯ ಮೂಲದ ಸ್ಕಾಟ್ಲೆಂಡ್ ಯಾರ್ಡ್ ಪಿಸಿ ಕೆಲಸ ಕಳೆದುಕೊಂಡರು
ಮೇ ತಿಂಗಳು ವೂಲ್ವಿಚ್ ಕೋರ್ಟ್ನಲ್ಲಿ ನಡೆದಿದ್ದ ವಿಚಾರಣೆಯಲ್ಲಿ ತಮ್ಮ ಐವರು ಸಹೋದ್ಯೋಗಿಗಳು-ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನಿಗೆ ತಾನು ಕಿರುಕುಳ ನೀಡಿದ್ದನ್ನು ಸಿಂಗ್ ಅಂಗೀಕರಿಸಿದರು. ಅವರ ಶಿಕ್ಷೆಯ ಪ್ರಮಾಣವನ್ನು ಸೆಪ್ಟೆಂಬರ್ 8 ರಂದು ಪ್ರಕಟಿಸಲಾಗುವುದು.
ಲಂಡನ್: ತನ್ನ ಸಹೋದ್ಯೋಗಳೊಂದಿಗೆ ಅವಹೇಳನಕಾರಿ ರೀತಿಯಲ್ಲಿ ವರ್ತಿಸಿ ದುರ್ವರ್ತನೆ ಮೆರೆದ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಒಬ್ಬ ಪೊಲೀಸ್ ಅಧಿಕಾರಿಯನ್ನು ಲಂಡನ್ ನಗರದ ಸ್ಕಾಟ್ಲೆಂಡ್ ಯಾರ್ಡ್ ನಿಂದ ವಜಾಗೊಳಿಸಲಾಗಿದೆ. ಲಂಡನ್ ಮೆಟ್ರೊಪಾಲಿಟನ್ ಪೋಲಿಸ್ ಘಟಕದ ನಾರ್ಥ್ ಏರಿಯಾ ಬೇಸಿಕ್ ಕಮಾಂಡ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅಜಯ್ ಸಿಂಗ್ ಅವರನ್ನು ವಜಾ ಮಾಡಲಾಗಿದೆ. ಅವರ ವಿರುದ್ಧ ದಾಖಲಾಗಿದ್ದ ದುರ್ವರ್ತನೆ ದೂರಿನ ವಿಚಾರಣೆ ನಡೆದು ವೃತ್ತಿಪರ ವರ್ತನೆ ಮಾನದಂಡವನ್ನು ಅವರು ಉಲ್ಲಂಘಿಸಿರುವುದು ಸಾಬೀತಾಗಿ ಮಾನಹೀನ ವರ್ತನೆ ತೋರಿದ ಆಧಾರದಲ್ಲಿ ಸಿಂಗ್ ಅವರನ್ನು ಮಂಗಳವಾರದಂದು ಸೇವೆಯಿಂದ ವಜಾ ಮಾಡಲಾಗಿದೆ.
ಮೇ ತಿಂಗಳು ವೂಲ್ವಿಚ್ ಕೋರ್ಟ್ನಲ್ಲಿ ನಡೆದಿದ್ದ ವಿಚಾರಣೆಯಲ್ಲಿ ತಮ್ಮ ಐವರು ಸಹೋದ್ಯೋಗಿಗಳು-ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನಿಗೆ ತಾನು ಕಿರುಕುಳ ನೀಡಿದ್ದನ್ನು ಸಿಂಗ್ ಅಂಗೀಕರಿಸಿದರು. ಅವರ ಶಿಕ್ಷೆಯ ಪ್ರಮಾಣವನ್ನು ಸೆಪ್ಟೆಂಬರ್ 8 ರಂದು ಪ್ರಕಟಿಸಲಾಗುವುದು.
‘ಪೊಲೀಸ್ ಕಾನ್ಸ್ಟೇಬಲ್ (ಪಿಸಿ) ಸಿಂಗ್ ಅವರ ಕೃತ್ಯಗಳು ಹೇವರಿಕೆ ಹುಟ್ಟಿಸುವಂಥವು, ಅದರಲ್ಲೂ ಅವರು ತಮ್ಮ ಸಹೋದ್ಯೋಗಿಗಳ ವಿರುದ್ಧ ಅಂಥ ವರ್ತನೆ ಪ್ರದರ್ಶಿದ್ದಾರೆ. ಇಂಥ ದ್ವೇಷಕಾರಿ ಅಪರಾಧವನ್ನು ಅವರು ಯಾಕೆ ಎಸಗಿದರೆನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅವರ ವರ್ತನೆ ವಿಕ್ಟಿಮ್ಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿದೆ,’ ಎಂದು ಟ್ರೀನಾ ಫ್ಲೆಮಿಂಗ್ ಹೆಸರಿನ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ‘ಲಂಡನ್ ಮೆಟ್ರೋಪಾಲಿಟನ್ ವ್ಯವಸ್ಥೆಯಲ್ಲಿ ಈ ಬಗೆಯ ನಡುವಳಿಕೆಗೆ ಆಸ್ಪದವಿಲ್ಲ. ಅವರನ್ನು ಸೇವೆಯಿಂದ ಬರ್ಖಾಸ್ತುಗೊಳಿಸುವ ನ್ಯಾಯಾಲಯದ ತೀರ್ಪು ಅತ್ಯಂತ ಸೂಕ್ತವಾಗಿದೆ,’ ಎಂದು ಆಕೆ ಹೇಳಿದರು.
ಅಕ್ಟೋಬರ್ 2020ರಲ್ಲಿ ಕರ್ತವ್ಯ ಮೇಲಿರದ ಸಿಂಗ್ ತನ್ನ ಸಹೋದ್ಯೋಗಿಗಳಿಗೆ ಅನೇಕ ದ್ವೇಷಪೂರಿತ ಮತ್ತು ಬೆದರಿಕೆಯ ಕರೆಗಳನ್ನು ಮಾಡಿದ್ದರು.
ಆ ಎಲ್ಲ ಕರೆಗಳನ್ನು ಅವರು ಚಾಲ್ತಿಯಲ್ಲಿರದ ನಂಬರ್ನಿಂದ ಮಾಡಿದ್ದರು. ಅವರಿಗೆ ಕರೆಗಳನ್ನು ಮಾಡಿ ಹೆದರಿಸಿದ್ದರಲ್ಲದೆ, ಅವರನ್ನು ಅವಮಾನಿಸಿ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದ್ದರು.
ಆ ಸಹೊದ್ಯೋಗಿಗಳಲ್ಲಿ ಒಬ್ಬರು ಕಳೆದ ವರ್ಷ ಅಕ್ಟೋಬರ್ 19 ರಂದು ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತಂದ ಬಳಿಕ ಅಧಿಕಾರಿಗಳು ತನಿಖೆ ನಡೆಸಿದರು. ಅವರನ್ನು ತೆಗಳಲು, ಹೆದರಿಸಲು ಬಳಸಿದ ಫೋನ್ ಸಿಂಗ್ ಅವರಿಗೆ ಸೇರಿದ್ದು ಎನ್ನುವುದು ತನಿಖೆಯಲ್ಲಿ ದೃಢಪಟ್ಟಿತು. ಅವರನ್ನು ಅದೇ ದಿನ ಬಂಧಿಸಲಾಯಿತಾದರೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಆದರೆ, ನವೆಂಬರ್ 16, 2020 ರಂದು ಸಿಂಗ್ ಅವರನ್ನು ಉಳಿದ ಸಹೋದ್ಯೋಗಿಗಳಿಗೆ ನೀಡಿದ ಕಿರಿಕುಳದ ಆರೋಪಗಳಲ್ಲಿ ಪುನಃ ಬಂಧಿಸಲಾಯಿತು.
ಸಿಂಗ್ ಅವರಿಗೆ ಈ ವರ್ಷದ ಮಾರ್ಚ್‌ನಲ್ಲಿ ಅಂಚೆ ಮೂಲಕ ಮೂಲಕ ಚಾರ್ಜ್ಶೀಟ್ ಸಲ್ಲಿಸಿರುವ ವಿಷಯ ತಿಳಿಸಲಾಯಿತು ಮತ್ತು ಅಕ್ಟೋಬರ್ 2020 ರಿಂದ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿತ್ತು.
ಸಾಕ್ಷ್ಯಗಳನ್ನು ಆಲಿಸಿದ ನಂತರ ಅಸಮರ್ಪಕ ವರ್ತನೆ ವಿಚಾರಣೆ ಅಧ್ಯಕ್ಷೆ ಸಹಾಯಕ ಆಯುಕ್ತೆ ಹೆಲೆನ್ ಬಾಲ್ ಅವರು, ಸಿಂಗ್ ಅವಹೇಳನಕಾರಿ ನಡವಳಿಕೆಗೆ ಸಂಬಂಧಿಸಿದಂತೆ ವೃತ್ತಿಪರ ನಡವಳಿಕೆಯ ಮಾನದಂಡಗಳನ್ನು ಉಲ್ಲಂಘಿಸಿರುವುದನ್ನು ಕಂಡುಕೊಂಡು ಅವರನ್ನು ಯಾವುದೇ ನೋಟೀಸ್ ಇಲ್ಲದೆ ಸೇವೆಯಿಂದ ಅಮಾನತುಗೊಳಿಸಿದರು.