Pakistan: ಪಾಕ್ ವಿಶ್ವವಿದ್ಯಾಲಯಗಳಲ್ಲಿ ಹೋಳಿ ಆಚರಣೆ ನಿಷೇಧ

ಇಸ್ಲಾಮಿಕ್ ವಿಚಾರಗಳನ್ನು ಹಾಗೂ ಆಚರಣೆಗಳನ್ನು ಉಳಿಸಿಕೊಳ್ಳಲು, ಪಾಕ್ ವಿಶ್ವವಿದ್ಯಾನಿಲಯಗಳಲ್ಲಿ ಹೋಳಿ ಮತ್ತು ಇತರ ಹಬ್ಬಗಳನ್ನು ನಿಷೇಧಿಸಿದೆ.

Pakistan: ಪಾಕ್ ವಿಶ್ವವಿದ್ಯಾಲಯಗಳಲ್ಲಿ ಹೋಳಿ ಆಚರಣೆ ನಿಷೇಧ
ಪಾಕ್ ವಿಶ್ವವಿದ್ಯಾಲಯಗಳಲ್ಲಿ ಹೋಳಿ ಆಚರಣೆ ನಿಷೇಧ
Edited By:

Updated on: Jun 21, 2023 | 3:35 PM

ಇಸ್ಲಾಮಾಬಾದ್: ಇಸ್ಲಾಮಿಕ್ ವಿಚಾರಗಳನ್ನು ಹಾಗೂ ಆಚರಣೆಗಳನ್ನು ಉಳಿಸಿಕೊಳ್ಳಲು, ಪಾಕಿಸ್ತಾನ್​​​ (Pakistan) ವಿಶ್ವವಿದ್ಯಾನಿಲಯಗಳಲ್ಲಿ ಹೋಳಿ ಮತ್ತು ಇತರ ಹಬ್ಬಗಳನ್ನು ನಿಷೇಧಿಸಿದೆ. ಭಾರತದ ವಿಭಜನೆಯ ನಂತರ ಸೃಷ್ಟಿಯಾದ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ನಿಯಮಗಳು ಮತ್ತು ನಿಬಂಧನೆಗಳಿಂದಾಗಿ ಇತರ ಧರ್ಮದ ಜನರು ಶಾಂತಿಯುತವಾಗಿ ಬದುಕುವುದು ಕಷ್ಟಕರವಾಗಿದೆ. ಅಲ್ಲಿ ಮುಸ್ಲಿಮರಿಗೆ ಹೋಲಿಸಿದರೆ ಹಿಂದೂಗಳು, ಬೌದ್ಧರು ಮತ್ತು ಕ್ರಿಶ್ಚಿಯನ್ನರ ಹಕ್ಕುಗಳು ಕಡಿಮೆಯಾಗುತ್ತಿವೆ. ಇದೀಗ ಅಲ್ಲಿನ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ. ಅಂದರೆ ಯಾವುದೇ ಶಾಲೆಯಲ್ಲಿ ಹೋಳಿ ಆಚರಣೆ ಮಾಡಲು ಬಿಡುವುದಿಲ್ಲ ಎಂದು ಹೇಳಲಾಗಿದೆ.

ಈ ವರ್ಷ ಹೋಳಿ ಹಬ್ಬದ ಸಂದರ್ಭದಲ್ಲಿ ಪಾಕಿಸ್ತಾನದ ಶಾಲೆಗಳಲ್ಲಿ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದ ಸುದ್ದಿ ಮುನ್ನಲೆಗೆ ಬಂದಿತ್ತು. ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗವು ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸಿದೆ ಎಂದು ಪಾಕಿಸ್ತಾನದ ಆಜ್ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ: Pakistan: ಪಾಕಿಸ್ತಾನದಿಂದ ಕಾಲ್ಕೀಳುತ್ತಿದೆ ಶೆಲ್; ಅಲ್ಲಾಹುವೇ ಕಾಪಾಡಬೇಕೆಂದ ನೆಟ್ಟಿಗರು

ಇಂತಹ ಚಟುವಟಿಕೆಗಳು ದೇಶದ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳಿಗೆ ಸಂಪೂರ್ಣವಾಗಿ ಹೊರತಾಗಿವೆ, ಅವು ವಿಭಿನ್ನ ಮತ್ತು ಇಸ್ಲಾಮಿಕ್ ಗುರುತಿಗೆ ವಿರುದ್ಧವಾಗಿವೆ ಎಂದು ಹೇಳಲಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us