ಚೀನಾದ ಆಡಳಿತರೂಢ ಕಮ್ಯುನಿಸ್ಟ್ ಪಾರ್ಟಿಗೆ ಸೇರಲು ಆಸಕ್ತಿ ವ್ಯಕ್ತಪಡಿಸಿದ ಜಾಕಿ ಚಾನ್

Jackie Chan: ವಿಚಾರ ಸಂಕಿರಣದಲ್ಲಿ ಚೀನಾ ಫಿಲ್ಮ್ ಅಸೋಸಿಯೇಷನ್‌ನ ಉಪಾಧ್ಯಕ್ಷರೂ ಆಗಿರುವ ಚಾನ್ ಅವರು ಸಿಪಿಸಿಗೆ ಸೇರ್ಪಡೆಗೊಳ್ಳುವ ಆಸಕ್ತಿಯ ಬಗ್ಗೆ ಮಾತನಾಡಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ಸೋಮವಾರ ವರದಿ ಮಾಡಿದೆ.

ಚೀನಾದ ಆಡಳಿತರೂಢ ಕಮ್ಯುನಿಸ್ಟ್ ಪಾರ್ಟಿಗೆ ಸೇರಲು ಆಸಕ್ತಿ ವ್ಯಕ್ತಪಡಿಸಿದ ಜಾಕಿ ಚಾನ್
ಜಾಕಿ ಚಾನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 12, 2021 | 7:09 PM

ಬೀಜಿಂಗ್: ಹಿಂದಿನ ಬ್ರಿಟಿಷ್ ವಸಾಹತು ಪ್ರದೇಶದಲ್ಲಿನ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳ ಮೇಲೆ ಬೀಜಿಂಗ್ ನಡೆಸಿದ ದಬ್ಬಾಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಹಾಂಗ್ ಕಾಂಗ್ ಮೂಲದ ಹಾಲಿವುಡ್ ತಾರೆ ಜಾಕಿ ಚಾನ್ ಅವರು ತೀವ್ರ ಟೀಕೆಗೆ ಗುರಿಯಾಗಿದ್ದರು. ಇದೀಗ ಅವರು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಗೆ ಸೇರಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

67 ರ ಹರೆಯದ ಚಾನ್ ಅವರು ಗುರುವಾರ ಇಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಸಿಪಿಸಿಗೆ ಸೇರ್ಪಡೆಗೊಳ್ಳುವ ಇಚ್ಛೆ ವ್ಯಕ್ತಪಡಿಸಿದರು. ಈ ವಿಚಾರ ಸಂಕಿರಣದಲ್ಲಿ ಜುಲೈ 1 ರಂದು ನಡೆದ ಪಕ್ಷದ ಶತಮಾನೋತ್ಸವ ಸಮಾರಂಭದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಮಾಡಿದ ಪ್ರಧಾನ ಭಾಷಣಕ್ಕೆ ಸಂಬಂಧಿಸಿದಂತೆ ಚೀನಾದ ಚಲನಚಿತ್ರ ಕಲಾವಿದರು ಮಾತನಾಡಿದ್ದು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ವಿಚಾರ ಸಂಕಿರಣದಲ್ಲಿ ಚೀನಾ ಫಿಲ್ಮ್ ಅಸೋಸಿಯೇಷನ್‌ನ ಉಪಾಧ್ಯಕ್ಷರೂ ಆಗಿರುವ ಚಾನ್ ಅವರು ಸಿಪಿಸಿಗೆ ಸೇರ್ಪಡೆಗೊಳ್ಳುವ ಆಸಕ್ತಿಯ ಬಗ್ಗೆ ಮಾತನಾಡಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ಸೋಮವಾರ ವರದಿ ಮಾಡಿದೆ. ಸಿಪಿಸಿಯ ಹಿರಿಮೆಯನ್ನು ನಾನು ಬಲ್ಲೆ ಅದು ಹೇಳಿದ್ದನ್ನು ಮಾಡಿ ತೋರಿಸಿದೆ. 100 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ನೀಡಿದ ಭರವಸೆಯನ್ನು ಅದು ಕೆಲವೇ ದಶಕಗಳಲ್ಲಿ ಪೂರೈಸಿದೆ ಎಂದು ಚಾನ್ ಹೇಳಿದ್ದು “ನಾನು ಸಿಪಿಸಿ ಸದಸ್ಯನಾಗಲು ಬಯಸುತ್ತೇನೆ” ಎಂದಿದ್ದಾರೆ.

ಚಾನ್ ಹಲವಾರು ವರ್ಷಗಳಿಂದ ಸಿಪಿಸಿಯ ಬೆಂಬಲಿಗರಾಗಿದ್ದಾರೆ ಮತ್ತು ಚೀನಾದ ಜನರ ರಾಜಕೀಯ ಸಮಾಲೋಚನಾ ಸಮ್ಮೇಳನದ (ಸಿಪಿಪಿಸಿಸಿ) ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಿಪಿಪಿಸಿಸಿ ಪಕ್ಷವು ನಾಮನಿರ್ದೇಶನ ಮಾಡಿದ ವೃತ್ತಿಪರರ ಸಲಹಾ ಸಂಸ್ಥೆ. ಸಮರ ಕಲೆಗಳ ಐಕಾನ್ ಅವರು 2019 ರಲ್ಲಿ ಹಾಂಗ್ ಕಾಂಗ್ ನಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳನ್ನು ಟೀಕಿಸಿದಾಗ ತೀವ್ರ ಟೀಕೆಗೆ ಗುರಿಯಾದರು.

“ನಾನು ಅನೇಕ ದೇಶಗಳಿಗೆ ಭೇಟಿ ನೀಡಿದ್ದೇನೆ ಮತ್ತು ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ನಾನು ಹೇಳಬಲ್ಲೆ. ನಾನು ಹೋದಲ್ಲೆಲ್ಲಾ ಚೈನೀಸ್ ಆಗಿರುವುದರ ಬಗ್ಗೆ ನನಗೆ ಹೆಮ್ಮೆ ಇದೆ. ‘ಐದು-ನಕ್ಷತ್ರಗಳ ಕೆಂಪು ಧ್ವಜ’ವನ್ನು ಜಗತ್ತಿನ ಎಲ್ಲೆಡೆ ಗೌರವಿಸಲಾಗುತ್ತದೆ,” ಚಾನ್ ಚೀನಾದ ಅಧಿಕೃತ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಹಾಂಗ್ ಕಾಂಗ್ ಮತ್ತು ಚೀನಾ ನನ್ನ ಜನ್ಮಸ್ಥಳಗಳು ಮತ್ತು ನನ್ನ ಮನೆ. ಚೀನಾ ನನ್ನ ದೇಶ, ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ, ನಾನು ನನ್ನ ಮನೆಯನ್ನು ಪ್ರೀತಿಸುತ್ತೇನೆ. ಹಾಂಗ್ ಕಾಂಗ್ ಶೀಘ್ರದಲ್ಲೇ ಶಾಂತಿಗೆ ಮರಳಬಹುದೆಂದು ನಾನು ಭಾವಿಸುತ್ತೇನೆ” ಎಂದು ಅವರು 2019 ರಲ್ಲಿ ಹೇಳಿದ್ದರು.

ಹಿಂದಿನ ಬ್ರಿಟಿಷ್ ವಸಾಹತುಗಳ ಮೇಲೆ ಚೀನಾದ ನಿಯಂತ್ರಣವನ್ನು ವಿರೋಧಿಸಿ ಹಾಂಗ್ ಕಾಂಗ್‌ನಲ್ಲಿ ದೀರ್ಘಕಾಲದ ಬೃಹತ್ ಪ್ರತಿಭಟನೆಯೊಂದಿಗೆ ಹೋರಾಡಿದ ನಂತರ, ಬೀಜಿಂಗ್ ಕಳೆದ ವರ್ಷದ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಕಾನೂನನ್ನು ಅಂಗೀಕರಿಸುವ ಮೂಲಕ ಅದರ ಮೇಲೆ ಹಿಡಿತ ಸಾಧಿಸಿತು. ಅಮೆರಿಕ ,ಐರೋಪ್ಯ ಒಕ್ಕೂಟ ಮತ್ತು ಇತರ ದೇಶಗಳಿಂದ ಟೀಕಿಸಲ್ಪಟ್ಟ ಹೊಸ ಕಾನೂನಿನಡಿಯಲ್ಲಿ, ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಮತ್ತು ಅವರ ನಾಯಕರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು.

ಇದನ್ನೂ ಓದಿ:  ನಮ್ಮನ್ನು ಕೆಣಕಲು ಪ್ರಯತ್ನಿಸಿದರೆ ಅದರ ಪರಿಣಾಮ ರಕ್ತಪಾತ ಆಗಿರುತ್ತದೆ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

(Hollywood star Jackie Chan expressed interest to join China’s ruling Communist Party )

Published On - 7:01 pm, Mon, 12 July 21

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್