AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹಾಟ್​ ಏರ್​ ಬಲೂನ್​ನಲ್ಲಿ ಏಕಾಏಕಿ ಬೆಂಕಿ, ಆಗಸದಿಂದ ಜಿಗಿದು ಇಬ್ಬರು ಪ್ರಯಾಣಿಕರು ಸಾವು

ಮೆಕ್ಸಿಕೋ ಸಿಟಿ ಬಳಿಯ ಪ್ರಸಿದ್ಧ ಟಿಯೋಟಿಹುಕಾನ್ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಹಾಟ್​ ಏರ್​ ಬಲೂನ್​( Hot Air Balloon) ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಪ್ರಯಾಣಿಕರು ಬಲೂನ್​ನಿಂದ ಕೆಳಗೆ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.

Video: ಹಾಟ್​ ಏರ್​ ಬಲೂನ್​ನಲ್ಲಿ ಏಕಾಏಕಿ ಬೆಂಕಿ, ಆಗಸದಿಂದ ಜಿಗಿದು ಇಬ್ಬರು ಪ್ರಯಾಣಿಕರು ಸಾವು
ಹಾಟ್ ಏರ್ ಬಲೂನ್
ನಯನಾ ರಾಜೀವ್
|

Updated on: Apr 02, 2023 | 8:18 AM

Share

ಮೆಕ್ಸಿಕೋ ಸಿಟಿ ಬಳಿಯ ಪ್ರಸಿದ್ಧ ಟಿಯೋಟಿಹುಕಾನ್ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಹಾಟ್​ ಏರ್​ ಬಲೂನ್​( Hot Air Balloon) ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಪ್ರಯಾಣಿಕರು ಬಲೂನ್​ನಿಂದ ಕೆಳಗೆ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. 39 ವರ್ಷದ ಮಹಿಳೆ ಹಾಗೂ 50 ವರ್ಷದ ಪುರಷರೊಬ್ಬರು ಪ್ರಯಾಣಿಸುತ್ತಿದ್ದರು ಅವರ ಮುಖದಲ್ಲಿ ಸುಟ್ಟ ಗಾಯಗಳಾಗಿದ್ದು, ಬಲ ತೊಡೆ ಮುರಿದಿತ್ತು ಎಂದು ತಿಳಿದುಬಂದಿದೆ.

ಪ್ರತಿಯೊಬ್ಬರು ತಮ್ಮ ಪ್ರೀತಿ ಪಾತ್ರರೊಂದಿಗೆ ಹಾಟ್ ಏರ್ ಬಲೂನ್ ರೈಡ್ ಹೋಗಲು ಇಷ್ಟಪಡುತ್ತಾರೆ. ಭಾರತದಲ್ಲಿ ಇತ್ತೀಚೆಗೆ ಹಾಟ್ ಏರ್ ಬಲೂನ್ ರೈಡ್ ಟ್ರೆಂಡ್ ಆಗಿ ಹೋಗಿದೆ. ಇದೊಂದು ರೋಮಾಂಚಕವಾದ ಅನುಭೂತಿಯನ್ನು ನೀಡುವುದು ಮಾತ್ರವಲ್ಲ, ಬದಲಾಗಿ ಸ್ವರ್ಗದಾಯಕವಾದ ದೃಶ್ಯಗಳನ್ನು ಸೆರೆ ಹಿಡಿದುಕೊಳ್ಳಬಹುದಾಗಿರುತ್ತದೆ.

ಆಗ್ರಾ: ಹಾಟ್ ಏರ್ ಬಲೂನ್ ರೈಡ್ ಹೋಗಲು ತಾಜ್ ಮಹಲ್ಗಿಂತ ಉತ್ತಮ ಸ್ಥಳ ಮತ್ತೊಂದಿಲ್ಲ ಎಂದೇ ಹೇಳಬಹುದು. ಪ್ರೀತಿಯ ಸಾಂಕೇತಿಕ ಪ್ರಾತಿನಿಧ್ಯವಾಗಿರುವ ತಾಜ್ಮಹಲ್ ಮತ್ತು ಆಗ್ರಾದ ಎಲ್ಲಾ ಇತರ ಐತಿಹಾಸಿಕ ತಾಣಗಳ ವೀಕ್ಷಣೆಗೆ ನೀವು ಇಲ್ಲಿಗೆ ಭೇಟಿ ನೀಡಬಹುದು.

ಚಂದೋರ್, ದಕ್ಷಿಣ ಗೋವಾ: ಗೋವಾ ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಪ್ರಪಂಚದ ವಿವಿಧ ಮೂಲೆಗಳಿಂದ ಜನರು ಪ್ರವಾಸಕ್ಕೆ ಆಗಮಿಸುತ್ತಾರೆ.

ಹಂಪಿ, ಕರ್ನಾಟಕ: ಹಂಪಿ ಕರ್ನಾಟಕದ ಐತಿಹಾಸಿಕ ಪ್ರವಾಸಿ ತಾಣ. ಇಲ್ಲಿನ ಐತಿಹಾಸಿಕ ರಚನೆಗಳು, ಪುರಾತನ ದೇವಾಲಯಗಳು ಮತ್ತು ಗುಹಾ ತಾಣಗಳು ಆಕರ್ಷಣೀಯವಾಗಿದೆ.

ಲೋನವಳ, ಮಹಾರಾಷ್ಟ್ರ: ಹಾಟ್ ಏರ್ ಬಲೂನ್ ರೈಡ್ಗಾಗಿ ಭಾರತದ ಮತ್ತೊಂದು ಅತ್ಯುತ್ತಮ ಸ್ಥಳವೆಂದರೆ ಮಹಾರಾಷ್ಟ್ರದ ಲೋನವಳ. ಇಲ್ಲಿನ ಪರಿಸರವು ಹಚ್ಚ ಹರಿಸಿನಿಂದ ಕೂಡಿದೆ.

ಪುಷ್ಕರ್ ಮತ್ತು ಜೈಪುರ, ರಾಜಸ್ಥಾನ: ರಾಷ್ಟ್ರದ ಅತ್ಯಂತ ಕ್ರಿಯಾತ್ಮಕ ರಾಜ್ಯಗಳಲ್ಲಿ ರಾಜಸ್ಥಾನ ಕೂಡ ಒಂದು. ಮಹಾರಾಜರ ನಾಡಿನ ಗ್ರಾಮೀಣ ಸೊಗಡನ್ನು ಅನುಭವಿಸಲು ನೀವು ಇಲ್ಲಿ ಹಾಟ್ ಏರ್ ಬಲೂನ್ ರೈಡ್ ಮಾಡಬಹುದು.

ಆದರೆ ಹಾಟ್ ಬಲೂನ್ ರೈಡ್ ಮಾಡುವಾಗ ತುಂಬಾ ಎಚ್ಚರಿಕೆಯಿಂದಿರಬೇಕು, ಪ್ರಾಣಾಪಾಯದ ಸಾಧ್ಯತೆ ಕೂಡ ಇರುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ