America Tornadoes: ಸುಂಟರಗಾಳಿ ಆರ್ಭಟಕ್ಕೆ ಅಮೆರಿಕ ಜನತೆ ತತ್ತರ: ಸಾವಿನ ಸಂಖ್ಯೆ 29ಕ್ಕೆ ಏರಿಕೆ
ಏಕಾಏಕಿ ಹವಾಮಾನ ಬದಲಾವಣೆಯಿಂದ ಶುಕ್ರವಾರ ಮುಂಜಾನೆಯಿಂದ ಶನಿವಾರದವರೆಗೆ ಅಮೆರಿಕದ ದಕ್ಷಿಣ, ಮಧ್ಯಪಶ್ಚಿಮ ಭಾಗಗಳಲ್ಲಿ ಚಂಡಮಾರುತ ಮತ್ತು ಭೀಕರ ಸುಂಟರಗಾಳಿ ಬೀಸಿದೆ. ಸುಂಟರಗಾಳಿಯಿಂದ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ವಾಷಿಂಗ್ಟನ್ ಡಿಸಿ: ಭೀಕರ ಸುಂಟರಗಾಳಿ ಆರ್ಭಟಕ್ಕೆ ಅಮೆರಿಕ (America) ಜನತೆ ತತ್ತರಿಸಿ ಹೋಗಿದ್ದಾರೆ. ಏಕಾಏಕಿ ಹವಾಮಾನ ಬದಲಾವಣೆಯಿಂದ ಶುಕ್ರವಾರ (ಮಾ.31) ಮುಂಜಾನೆಯಿಂದ ಶನಿವಾರ(ಏ.1)ದವರೆಗೆ ಅಮೆರಿಕದ ದಕ್ಷಿಣ, ಮಧ್ಯಪಶ್ಚಿಮ ಭಾಗಗಳಲ್ಲಿ ಚಂಡಮಾರುತ (Storm) ಮತ್ತು ಭೀಕರ ಸುಂಟರಗಾಳಿ (Tornadoes) ಬೀಸಿದೆ. ಸುಂಟರಗಾಳಿಯಿಂದ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಮತ್ತು ಅನೇಕರು ಗಾಯಗೊಂಡಿದ್ದಾರೆ. ಭೀಕರ ಸುಂಟರಗಾಳಿಗೆ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ಹಾನಿಯಾಗಿವೆ. ಮನೆಗಳ ಮೇಲೆ ಮರಗಳು ಬಿದ್ದು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸರ್ಕಾರ ಪರಿಹಾರ ಮತ್ತು ರಕ್ಷಣಾ ಕಾರ್ಯ ಆರಂಭಿಸಿದೆ. ಹಲವು ಮನೆಗಳ ಮೇಲೆ ಬಿದ್ದ ಮರಗಳನ್ನು ತೆಗೆಯಲಾಗುತ್ತಿದೆ.
ಅಮೆರಿಕದ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಶುಕ್ರವಾರ ಮತ್ತು ಶನಿವಾರ ದಕ್ಷಿಣ, ಮಧ್ಯಪಶ್ಚಿಮ ಭಾಗಗದ 60 ಕ್ಕೂ ಹೆಚ್ಚು ಕಡೆ ಸುಂಟರಾಗಳಿ ಬೀಸಿದೆ. ಶುಕ್ರವಾರ ಮಧ್ಯಾಹ್ನ ಅರ್ಕಾನ್ಸಾಸ್‌ನ ಲಿಟಲ್ ರಾಕ್ ಮತ್ತು ಇತರೆಡೆ ಸುಂಟರಗಾಳಿ ಬಂದಪ್ಪಳಿಸಿದ್ದು, ಮನೆಗಳನ್ನು ಹಾನಿಗೊಳಿಸಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದ ಫಯಾಜಾಬಾದ್ನಲ್ಲಿ 4.3 ತೀವ್ರತೆಯ ಭೂಕಂಪ
ಅಲ್ಲದೆ ಸುಂಟರಗಾಳಿಯಿಂದ ಕ್ರಾಸ್ ಕೌಂಟಿಯ ಲಿಟಲ್ ರಾಕ್ ನಗರದ ಈಶಾನ್ಯ ಭಾಗದಲ್ಲಿ ಬೀಸಿದ ಸುಂಟರಗಾಳಿಯಿಂದ ಪಟ್ಟಣ ನಲುಗಿ ಹೋಗಿದೆ. ವೈನ್ನೆಯಲ್ಲಿ ಪ್ರೌಢಶಾಲೆ ಸೇರಿದಂತೆ ವ್ಯಾಪಾರ ಮಳಿಗೆಗಳಿಗೆ ವ್ಯಾಪಕ ಹಾನಿ ಉಂಟು ಮಾಡಿದೆ. ಕೆಲವು ಮನೆಗಳು ಧರೆಗುರುಳಿವೆ ಎಂದು ವರದಿಯಾಗಿದೆ.
ಉತ್ತರ ಇಲಿನಾಯ್ಸ್‌ನ ಬೆಲ್ವಿಡೆರೆಯಲ್ಲಿನ ಥಿಯೇಟರ್‌ನಲ್ಲಿ ಮೇಲ್ಛಾವಣಿ ಕುಸಿದು ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ಥಿಯೇಟರ್‌ನಲ್ಲಿ ಒಟ್ಟು 260 ಜನರಿದ್ದು, ಈ ಪೈಕಿ 28 ಮಂದಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆ ಅರ್ಕಾನ್ಸಾಸ್, ಇಲಿನಾಯ್ಸ್, ಇಂಡಿಯಾನಾ ಮತ್ತು ಟೆನ್ನೆಸ್ಸೀ ಮಾತ್ರವಲ್ಲದೇ ವಿಸ್ಕಾನ್ಸಿನ್, ಅಯೋವಾ ಮತ್ತು ಮಿಸ್ಸಿಸ್ಸಿಪ್ಪಿಯಾದ್ಯಂತ ಸುಂಟರಗಾಳಿ ಭಾರಿ ನಷ್ಟ ಉಂಟುಮಾಡಿದೆ.
ಮತ್ತಷ್ಟು ಅಂತರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:07 am, Mon, 3 April 23