ಉಕ್ರೇನಿನ (Ukraine) ಯೋಧನೊಬ್ಬ ಸಾವಿನ ದವಡೆಯಿಂದ ತಪ್ಪಿಸಿಕೊಂಡ ವಿಡಿಯೊವೊಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಯುದ್ಧ ಪೀಡಿತ ದೇಶದಲ್ಲಿ ಒಂದು ಬುಲೆಟ್ ತನ್ನತ್ತ ಧಾವಿಸುತ್ತಿದ್ದಾಗ ಆತನ ಪ್ರಾಣ ರಕ್ಷಣೆ ಮಾಡಿದ್ದು ಕೈಯಲ್ಲಿದ್ದ ಮೊಬೈಲ್ ಫೋನ್. ಈ ವೈರಲ್ ವಿಡಿಯೊ(Viral Video) ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ್ದಾಗಿದೆ. ರಷ್ಯಾದ(Russia) ಯೋಧನೊಬ್ಬ ಉಕ್ರೇನಿನ ಯೋಧನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ತಾಕಿದ್ದು ಮೊಬೈಲ್ ಫೋನಿಗೆ. 7.62 ಮಿಲಿಮೀಟರ್ ಬುಲೆಟ್ ಮೊಬೈಲ್ ಫೋನ್ ಗೆ ಹಾನಿಯುಂಟು ಮಾಡಿದ್ದು ಗುಂಡು ಫೋನ್ನಲ್ಲೇ ಇದೆ. ವೈರಲ್ ವಿಡಿಯೊದಲ್ಲಿ ಉಕ್ರೇನಿಯನ್ ಸೈನಿಕನು ಬುಲೆಟ್ ತಾಗಿ ಛಿದ್ರಗೊಂಡ ಫೋನ್ ಅನ್ನು ಪ್ರದರ್ಶಿಸಿ ಸ್ಮಾರ್ಟ್‌ಫೋನ್ ನನ್ನ ಜೀವವನ್ನು ಉಳಿಸಿದೆ” ಎಂದು ಹೇಳುತ್ತಾನೆ. ಈ ಕ್ಲಿಪ್ ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷದ್ದಾಗಿದ್ದು, ಎರಡು ತಿಂಗಳಿನಿಂದ ನಡೆಯುತ್ತಿರುವ ಯುದ್ಧ, ಕಡಿಮೆಯಾಗುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ. ವೈರಲ್ ವಿಡಿಯೊದಲ್ಲಿ, ಸೈನಿಕನು ತನ್ನ ಸೆಲ್ ಫೋನ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಾ ಸಹ ಹೋರಾಟಗಾರನೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು.
A smartphone saved #Ukrainian soldier’s life pic.twitter.com/FstoqrTJov
— Giorgi Revishvili (@revishvilig) April 19, 2022
ಸೈನಿಕರೇ ವಿಡಿಯೊವನ್ನು ರೆಕಾರ್ಡ್ ಮಾಡಿದ್ದು ಮತ್ತೊಬ್ಬ ಯೋಧನಲ್ಲಿ ಮಾತನಾಡುವಾಗ ಗುಂಡಿನ ಸದ್ದು ಫೆಬ್ರವರಿ 24 ರಂದು ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರತ್ಯೇಕತಾವಾದಿ ಗಣರಾಜ್ಯಗಳು ಉಕ್ರೇನಿಯನ್ ಸೈನಿಕರಿಂದ ಹೆಚ್ಚುತ್ತಿರುವ ದಾಳಿಯ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯವನ್ನು ವಿನಂತಿಸಿದ ನಂತರ ರಷ್ಯಾ ಉಕ್ರೇನ್ ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ತಮ್ಮ “ವಿಶೇಷ ಕಾರ್ಯಾಚರಣೆ” ಪ್ರತ್ಯೇಕವಾಗಿ ಉಕ್ರೇನಿಯನ್ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದೆಯೇ ಹೊರತು ನಾಗರಿಕರನ್ನಲ್ಲ ಎಂದು ರಷ್ಯಾ ಸಮರ್ಥಿಸುತ್ತದೆ.
ಇದನ್ನೂ ಓದಿ: ಉಕ್ರೇನ್ ಸೇನೆಗೆ ಶರಣಾಗಲು ಮತ್ತೊಂದು ಅವಕಾಶ ಕೊಟ್ಟ ರಷ್ಯಾ: ನಿರ್ಣಾಯಕ ಹೋರಾಟಕ್ಕೆ ಭೂಮಿಕೆ ಸಿದ್ಧ