Kannada News World How did India take revenge for Pahalgam attack, minute to minute details of Operation Sindoor conducted in Pakistan
Operation Sindoor Live : ಪಹಲ್ಗಾಮ್ ದಾಳಿಗೆ ಭಾರತದ ಪ್ರತೀಕಾರ, ಇಲ್ಲಿಯವರೆಗೆ ಏನೇನಾಯ್ತು? ಇಲ್ಲಿದೆ ಮಾಹಿತಿ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್(Pahalgam)ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂಧೂರ್(Operation Sindoor) ಹೆಸರಿನಲ್ಲಿ ಪಾಕಿಸ್ತಾನದ 9 ಕಡೆಗಳಲ್ಲಿ ದಾಳಿ ನಡೆಸಿದೆ. ಪಾಕಿಸ್ತಾನದಲ್ಲಿ ಭಾರತದ ನಡೆಸಿದ ದಾಳಿಯ ಆರಂಭದಿಂದ ಇಲ್ಲಿಯವರೆಗೆ ಏನೇನಾಯ್ತು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ. ದೇಶದ ಮೂರು ಸೇನೆಗಳು ಜಂಟಿ ಕಾರ್ಯಾಚರಣೆಯಲ್ಲಿ 9 ಸ್ಥಳಗಳ ಮೇಲೆ ದಾಳಿ ಮಾಡಿದ್ದವು.
ಇಸ್ಲಾಮಾಬಾದ್ ಮೇ 07: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್(Pahalgam)ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂಧೂರ್(Operation Sindoor) ಹೆಸರಿನಲ್ಲಿ ಪಾಕಿಸ್ತಾನದ 9 ಕಡೆಗಳಲ್ಲಿ ದಾಳಿ ನಡೆಸಿದೆ. ಪಾಕಿಸ್ತಾನದಲ್ಲಿ ಭಾರತದ ನಡೆಸಿದ ದಾಳಿಯ ಆರಂಭದಿಂದ ಇಲ್ಲಿಯವರೆಗೆ ಏನೇನಾಯ್ತು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ. ದೇಶದ ಮೂರು ಸೇನೆಗಳು ಜಂಟಿ ಕಾರ್ಯಾಚರಣೆಯಲ್ಲಿ 9 ಸ್ಥಳಗಳ ಮೇಲೆ ದಾಳಿ ಮಾಡಿದ್ದವು. ಇದೀಗ ಭಾರತೀಯ ಸೇನೆಯು ಸುದ್ದಿಗೋಷ್ಠಿ ನಡೆಸಿ ಕೆಲವು ಮಾಹಿತಿ ನೀಡಿದೆ.
ಭಾರತದ ಈ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರಿಯಿಡೀ ಆಪರೇಷನ್ ಸಿಂಧೂರ್ ಮೇಲೆ ನಿಗಾ ಇಟ್ಟಿದ್ದರು.
ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ
ಕೇವಲ ಎಚ್ಚರಿಕೆ ನೀಡೋದ್ರಲ್ಲೇ ನಿರತವಾದ ಪಾಕ್, ದಾಳಿ ಮಾಡಿ ತೋರಿಸಿದ ಭಾರತ
ಪಾಕಿಸ್ತಾನದ ಈ 9 ಸ್ಥಳಗಳ ಮೇಲೆ ಭಾರತದಿಂದ ದಾಳಿ, ಮನೆ ಬಿಟ್ಟು ಓಡಿದ ಜನರು
ಆಪರೇಷನ್ ಸಿಂಧೂರ್: ಪ್ರಧಾನಿ ಮೋದಿ ನಿರಂತರ ಮೇಲ್ವಿಚಾರಣೆ
ಆಪರೇಷನ್ ಸಿಂಧೂರ್, ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಪ್ರತೀಕಾರದ ದಾಳಿ
ಆಪರೇಷನ್ ಸಿಂಧೂರ್ ಆರಂಭವಾದಾಗಿನಿಂದ ಏನೇನಾಯ್ತು?
ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿರುವ ಕುರಿತು ಮಾಹಿತಿ ಬೆಳಗಿನ ಜಾವ ಸುಮಾರು 1 ಗಂಟೆ ಸುಮಾರಿಗೆ ಹೊರಬಂದಿದೆ.
ಮಂಗಳವಾರ ಮಧ್ಯರಾತ್ರಿಯ ನಂತರ ಮುಜಫರಾಬಾದ್ ನಗರದ ಸುತ್ತಮುತ್ತಲಿನ ಪರ್ವತಗಳ ಬಳಿ ಹಲವಾರು ದೊಡ್ಡ ಸ್ಫೋಟಗಳು ಕೇಳಿಬಂದವು ಎಂದು ಹಲವಾರು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟದ ನಂತರ ನಗರದಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿತು.
ಇದಾದ ಸ್ವಲ್ಪ ಸಮಯದ ನಂತರ, ಪಾಕಿಸ್ತಾನ ಸೇನೆಯಿಂದ ಒಂದು ಹೇಳಿಕೆ ಬಂದಿತು. ಭಾರತದ ಕ್ರಮಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಅವರು ಹೇಳಿದರು.
ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಭಾರತ ದಾಳಿ ನಡೆಸಿದೆ ಎಂಬ ಅಧಿಕೃತ ಮಾಹಿತಿ ಬಂದಿದೆ. ಅದಕ್ಕೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಯಿತು. ಒಟ್ಟು 9 ಸ್ಥಳಗಳ ಮೇಲೆ ದಾಳಿ ನಡೆಸಲಾಯಿತು.
1.45 ಪಾಕಿಸ್ತಾನದ ಡಾನ್ ನ್ಯೂಸ್ ವರದಿಯ ಪ್ರಕಾರ, ಕೋಟ್ಲಿ, ಬಹವಾಲ್ಪುರ್ ಮತ್ತು ಮುಜಫರಾಬಾದ್‌ನಲ್ಲಿ ಭಾರತ ಕ್ಷಿಪಣಿ ದಾಳಿ ನಡೆಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಹೇಳಿದ್ದಾರೆ.
4.13 ದಾಳಿಗಳಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮೂರು ಪಡೆಗಳನ್ನು ಬಳಸಲಾಯಿತು. ಇದರಲ್ಲಿ ನಿಖರವಾದ ದಾಳಿ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಬಳಸಲಾಗಿತ್ತು.
4.32: ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಪಾಕಿಸ್ತಾನದ ಎನ್‌ಎಸ್‌ಎ ಮತ್ತು ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಸಿಮ್ ಮಲಿಕ್ ಅವರೊಂದಿಗೆ ಭಾರತದ ದಾಳಿಯ ಕುರಿತು ಮಾತನಾಡಿದರು.
4.35: ಭಾರತದ ದಾಳಿಯ ನಂತರ ಪಾಕಿಸ್ತಾನಕ್ಕೆ ಹೋಗುವ ಹಲವು ವಿಮಾನಗಳು ರದ್ದಾಗಿವೆ.
5.04 – ದಾಳಿಗೊಳಗಾದ ಒಂಬತ್ತು ಸ್ಥಳಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿವೆ ಮತ್ತು ಐದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿವೆ. ಪಾಕಿಸ್ತಾನದಲ್ಲಿರುವ ಸೇನಾ ನೆಲೆಗಳಲ್ಲಿ ಬಹವಾಲ್ಪುರ್, ಮುರಿಡ್ಕೆ ಮತ್ತು ಸಿಯಾಲ್ಕೋಟ್ ಸೇರಿವೆ.
5.27: ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರುಬಿಯೊ ಹೇಳಿದ್ದಾರೆ. ಇದು ಬೇಗ ಮುಗಿಯಲಿ ಎಂದು ಅಮೆರಿಕ ಆಶಿಸುತ್ತದೆ.
5.45: ಕತಾರ್ ಏರ್ವೇಸ್ ಪಾಕಿಸ್ತಾನಕ್ಕೆ ಹೋಗುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ.
6.00- ಪೂಂಚ್-ರಾಜೌರಿ ವಲಯದ ಭಿಂಬರ್ ಗಾಲಿ ಪ್ರದೇಶದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಫಿರಂಗಿಗಳಿಂದ ಗುಂಡು ಹಾರಿಸಿದೆ.
6.08- ಆಪರೇಷನ್ ಸಿಂಧೂರ್‌ನಲ್ಲಿ ಭಾಗಿಯಾಗಿದ್ದ ಎಲ್ಲಾ ಭಾರತೀಯ ಪೈಲಟ್‌ಗಳು ಮತ್ತು ಯುದ್ಧ ವಿಮಾನಗಳು ಸುರಕ್ಷಿತವಾಗಿ ನೆಲೆಗೆ ಮರಳಿದವು.
ಬಹವಾಲ್ಪುರವು ಜೈಶ್-ಎ-ಮೊಹಮ್ಮದ್‌ನ ಪ್ರಧಾನ ಕಚೇರಿಯಾಗಿರುವ ಅಂತಾರಾರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿದೆ.
ಮುರಿಡ್ಕೆ ಸಾಂಬಾ ಎದುರಿನ ಗಡಿಯ ಒಳಗೆ 30 ಕಿ.ಮೀ ದೂರದಲ್ಲಿರುವ ಲಷ್ಕರ್-ಎ-ತೊಯ್ಬಾ ನೆಲೆ. 26/11 ಮುಂಬೈ ದಾಳಿಯ ಭಯೋತ್ಪಾದಕರು ಇಲ್ಲಿಂದಲೇ ಬಂದಿದ್ದಾರೆ.
ಗುಲ್ಪುರ್, ಪೂಂಚ್-ರಾಜೌರಿಯಿಂದ ಎಲ್‌ಒಸಿ ಒಳಗೆ 35 ಕಿ.ಮೀ ದೂರದಲ್ಲಿದೆ. ಏಪ್ರಿಲ್ 20, 2023 ರಂದು ಪೂಂಚ್‌ನಲ್ಲಿ ನಡೆದ ದಾಳಿ ಮತ್ತು ಜೂನ್ 2024 ರಲ್ಲಿ ಪ್ರಯಾಣಿಕರ ಬಸ್ ಮೇಲಿನ ದಾಳಿಗೆ ಕಾರಣರಾದವರ ಬೇರುಗಳು ಇಲ್ಲಿವೆ.
ಪಿಒಜೆಕೆಯ ತಂಗ್ಧರ್ ಸೆಕ್ಟರ್ ಒಳಗೆ 30 ಕಿ.ಮೀ ದೂರದಲ್ಲಿರುವ ಲಷ್ಕರ್ ಕ್ಯಾಂಪ್ ಸವಾಯಿ.
ಬಿಲಾಲ್ ಕ್ಯಾಂಪ್ ಜೈಶ್-ಎ-ಮೊಹಮ್ಮದ್ ನ ಲಾಂಚ್ ಪ್ಯಾಡ್ ಆಗಿದೆ.
ರಾಜೌರಿಯ ಎದುರಿನ ಎಲ್‌ಒಸಿ ಒಳಗೆ 15 ಕಿ.ಮೀ ದೂರದಲ್ಲಿರುವ ಲಷ್ಕರ್ ಕೋಟ್ಲಿ ಶಿಬಿರ. ಲಷ್ಕರ್ ನ ಬಾಂಬ್ ದಾಳಿ ತರಬೇತಿ ಕೇಂದ್ರ, 50 ಭಯೋತ್ಪಾದಕರಿಗೆ ಅವಕಾಶವಿತ್ತು.
ಬರ್ನಾಲಾ ಕ್ಯಾಂಪ್ ರಾಜೌರಿಯ ಎದುರು ನಿಯಂತ್ರಣ ರೇಖೆಯೊಳಗೆ 10 ಕಿ.ಮೀ
ಸರ್ಜಲ್ ಕ್ಯಾಂಪ್ ಜೈಶ್ ಕ್ಯಾಂಪ್, ಸಾಂಬಾ-ಕಥುವಾ ಎದುರಿನ ಅಂತಾರಾಷ್ಟ್ರೀಯ ಗಡಿಯ ಒಳಗೆ 8 ಕಿ.ಮೀ. ದೂರದಲ್ಲಿದೆ.
ಮೆಹ್ಮೂನಾ ಕ್ಯಾಂಪ್, ಅಂತಾರಾಷ್ಟ್ರೀಯ ಗಡಿಯ ಒಳಗೆ 15 ಕಿ.ಮೀ. ದೂರದ, ಸಿಯಾಲ್‌ಕೋಟ್ ಬಳಿ, ಹಿಜ್ಬುಲ್ ಮುಜಾಹಿದ್ದೀನ್‌ನ ತರಬೇತಿ ಕೇಂದ್ರ.