China: ಚೀನಾದ ಬೃಹತ್ ಕಟ್ಟಡದಲ್ಲಿ ಭಾರಿ ಬೆಂಕಿ, ರಕ್ಷಣಾ ಕಾರ್ಯ ಪ್ರಾರಂಭಿಸಿದ ಅಗ್ನಿಶಾಮಕ ದಳ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 16, 2022 | 3:29 PM

ಚೀನಾದ ನಗರವಾದ ಚಾಂಗ್‌ಶಾದಲ್ಲಿನ ಗಗನ ಎತ್ತರದ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ರಾಜ್ಯ ಮಾಧ್ಯಮ ಶುಕ್ರವಾರ ವರದಿ ಮಾಡಿದೆ, ಸಾವು-ನೋವುಗಳ ಬಗ್ಗೆ ಯಾವುದೇ ವರದಿ ಪತ್ತೆಯಾಗಿಲ್ಲ. ಸ್ಥಳದಿಂದ ದಟ್ಟವಾದ ಹೊಗೆ ಹೊರ ಬರುತ್ತಿದ್ದು, ಈ ದೊಡ್ಡ ಕಟ್ಟಡದಲ್ಲಿ ಬೃಹತ್ ಆಗಿ ಬೆಂಕಿ ಹತ್ತಿಕೊಂಡಿದೆ.

China: ಚೀನಾದ ಬೃಹತ್ ಕಟ್ಟಡದಲ್ಲಿ ಭಾರಿ ಬೆಂಕಿ, ರಕ್ಷಣಾ ಕಾರ್ಯ ಪ್ರಾರಂಭಿಸಿದ ಅಗ್ನಿಶಾಮಕ ದಳ
Follow us on

ಬೀಜಿಂಗ್: ಮಧ್ಯ ಚೀನಾದ ನಗರವಾದ ಚಾಂಗ್‌ಶಾದಲ್ಲಿನ ಗಗನ ಎತ್ತರದ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ರಾಜ್ಯ ಮಾಧ್ಯಮ ಶುಕ್ರವಾರ ವರದಿ ಮಾಡಿದೆ, ಸಾವು-ನೋವುಗಳ ಬಗ್ಗೆ ಯಾವುದೇ ವರದಿ ಪತ್ತೆಯಾಗಿಲ್ಲ. ಸ್ಥಳದಿಂದ ದಟ್ಟವಾದ ಹೊಗೆ ಹೊರ ಬರುತ್ತಿದ್ದು, ಈ ದೊಡ್ಡ ಕಟ್ಟಡದಲ್ಲಿ ಬೃಹತ್ ಆಗಿ ಬೆಂಕಿ ಹತ್ತಿಕೊಂಡಿದೆ ಎಂದು ರಾಜ್ಯ ಪ್ರಸಾರಕ ಸಿಸಿಟಿವಿ ವರದಿ ಮಾಡಿದೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಮತ್ತು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗಿದೆ.

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಚೀನಾ ಟೆಲಿಕಾಂನ ಕಚೇರಿಯನ್ನು ಹೊಂದಿರುವ ಎತ್ತರದ ಕಟ್ಟಡವನ್ನು ಬೆಂಕಿ ಹೊತ್ತಿಕೊಂಡಿದೆ ಎಂದು ವರದಿ ತಿಳಿಸಿದೆ. ಸಿಸಿಟಿವಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ನಗರದ ನಿರ್ಮಿತ ಪ್ರದೇಶದಲ್ಲಿನ ಕಟ್ಟಡದ ಬೆಂಕಿಯಿಂದ ಆವೃತ್ತವಾಗಿದೆ.

ಸ್ಥಳೀಯ ಸುದ್ದಿವಾಹಿನಿಯು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಕಟ್ಟಡದ ಹೊರಭಾಗದಲ್ಲಿ ಕಪ್ಪು ಹೊಗೆಗಳು ಹೋಗುತ್ತಿರುವುದನ್ನು ಕಾಣಬಹುದು. ಹುನಾನ್ ಪ್ರಾಂತ್ಯದ ರಾಜಧಾನಿಯಾದ ಚಾಂಗ್ಶಾ ಸುಮಾರು 10 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ.

Published On - 3:29 pm, Fri, 16 September 22