1 ಕೋಟಿ 1 ಲಕ್ಷ ಹಣ ದರೋಡೆ: ಅರ್ಧಗಂಟೆಯಲ್ಲೇ ಖದೀಮರು ಲಾಕ್, ಇದು ಪೊಲೀಸ್ ಖದರ್
ಒಂದು ಕೋಟಿ ಒಂದು ಲಕ್ಷ ರೂ ದೋಚಿದ್ದ ಗ್ಯಾಂಗ್ ಅನ್ನು ಕೃತ್ಯ ನಡೆದ ಕೆಲವೇ ಕ್ಷಣದಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯ ನಡೆದ ಕೆಲವೇ ಕ್ಷಣದಲ್ಲಿ ಬೆಂಗಳೂರಿನ ಹುಳಿಮಾವು ಪೊಲೀಸರು, ಖದೀಮರನ್ನು ಹಿಡಿದು ಒಂದು ಕೋಟಿ ಒಂದು ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ. ಹೇಮಂತ್ ಎಂಬಾತ ಅಡಿಕೆ ಮಂಡಿಗೆ ನೀಡಬೇಕಿದ್ದ ಒಂದು ಕೋಟಿ ಒಂದು ಲಕ್ಷ ನಗದು ಹಣ ಪಡೆಯಲು ಹುಳಿಮಾವು ಬಳಿ ಅಕ್ಷಯ ನಗರಕ್ಕೆ ಬಂದಿದ್ದ. ಈ ವೇಳೆ ನರಸಿಂಹ ಮತ್ತು ಜೀವನ್ ಗ್ಯಾಂಗ್ ಅಡ್ಡಗಟ್ಟಿದ್ದರು. ನಂತರ ಬೆದರಿಸಿ ಹಲ್ಲೆ ಮಾಡಿ ಹಣ ದೋಚಿಕೊಂಡು ಪರಾರಿಯಾಗಿತ್ತು.
ಬೆಂಗಳೂರು, ಸೆಪ್ಟೆಂಬರ್ 28): ಒಂದು ಕೋಟಿ ಒಂದು ಲಕ್ಷ ರೂ ದೋಚಿದ್ದ ಗ್ಯಾಂಗ್ ಅನ್ನು ಕೃತ್ಯ ನಡೆದ ಕೆಲವೇ ಕ್ಷಣದಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯ ನಡೆದ ಕೆಲವೇ ಕ್ಷಣದಲ್ಲಿ ಬೆಂಗಳೂರಿನ ಹುಳಿಮಾವು ಪೊಲೀಸರು, ಖದೀಮರನ್ನು ಹಿಡಿದು ಒಂದು ಕೋಟಿ ಒಂದು ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ. ಹೇಮಂತ್ ಎಂಬಾತ ಅಡಿಕೆ ಮಂಡಿಗೆ ನೀಡಬೇಕಿದ್ದ ಒಂದು ಕೋಟಿ ಒಂದು ಲಕ್ಷ ನಗದು ಹಣ ಪಡೆಯಲು ಹುಳಿಮಾವು ಬಳಿ ಅಕ್ಷಯ ನಗರಕ್ಕೆ ಬಂದಿದ್ದ. ಈ ವೇಳೆ ನರಸಿಂಹ ಮತ್ತು ಜೀವನ್ ಗ್ಯಾಂಗ್ ಅಡ್ಡಗಟ್ಟಿದ್ದರು. ನಂತರ ಬೆದರಿಸಿ ಹಲ್ಲೆ ಮಾಡಿ ಹಣ ದೋಚಿಕೊಂಡು ಪರಾರಿಯಾಗಿತ್ತು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಹುಳಿಮಾವು ಇನ್ಸ್ ಪೆಕ್ಟರ್ ಕುಮಾರಸ್ವಾಮಿ ತಂಡ ಕಾರ್ಯಚರಣೆ ನಡೆಸಿ ಕೃತ್ಯ ನಡೆದ ಅರ್ಧ ಗಂಟೆಯಲ್ಲೇ ಗ್ಯಾಂಗ್ ನನ್ನು ಎಡೆಮುರಿಕಟ್ಟಿದೆ.
Latest Videos

