ಇಮ್ರಾನ್ ಹೇಳುತ್ತಾರೆ, ಜುನಾಗಢ್ ಪಾಕಿಸ್ತಾನಕ್ಕೆ ಸೇರಿದ್ದಂತೆ!
ಪಾಕಿಸ್ತಾನದ ಪ್ರಧಾನ ಮಂತ್ರಿ ಇಮಾನ್ ಖಾನ್ ಹೊಸ ಕ್ಯಾತೆ ಶುರು ಮಾಡಿದ್ದಾರೆ. ತಮ್ಮ ದೇಶದ ಹೊಸ ರಾಜಕೀಯ ನಕಾಶೆಯೊಂದನ್ನು ಬಿಡುಗಡೆ ಮಾಡಿರುವ ಖಾನ್ ಸಾಹೇಬರು ಭಾರತದ ವಶದಲ್ಲಿರುವ ಕಾಶ್ಮೀರ ಮತ್ತು ಜುನಾಗಢ್ ಪ್ರದೇಶವನ್ನು ಪಾಕಿಸ್ತಾನಕ್ಕೆ ಸೇರಿಸಿಕೊಂಡಿದ್ದಾರೆ! ಮತ್ತೂ ತಮಾಷೆಯ ಸಂಗತಿಯೆಂದರೆ, ಅವರ ಸಚಿಸ ಸಂಪುಟ ಆ ನಕಾಶೆಯನ್ನು ಅನುಮೋದಿಸಿದೆ!! ತಿಕ್ಕಲುತನ ಮತ್ತು ಮೂರ್ಖತನವೆಂದರೆ ಪ್ರಾಯಶಃ ಇದೇ ಇರಬೇಕು. ಇಮ್ರಾನ್ ಚೆನ್ನಾಗಿ ಓದಿಕೊಂಡಿರುವದರಿಂದ ಇಂಥ ಬಾಲಿಶ ಪ್ರಯತ್ನಕ್ಕೆ ಮುಂದಾಗಬಾರದಿತ್ತು. ಸೇನಾ ನಾಯಕರು ಮತ್ತು ಮೌಲ್ವಿಗಳನ್ನು ಮೆಚ್ಚಿಸಲು ಆ ದೇಶದ […]
ಪಾಕಿಸ್ತಾನದ ಪ್ರಧಾನ ಮಂತ್ರಿ ಇಮಾನ್ ಖಾನ್ ಹೊಸ ಕ್ಯಾತೆ ಶುರು ಮಾಡಿದ್ದಾರೆ. ತಮ್ಮ ದೇಶದ ಹೊಸ ರಾಜಕೀಯ ನಕಾಶೆಯೊಂದನ್ನು ಬಿಡುಗಡೆ ಮಾಡಿರುವ ಖಾನ್ ಸಾಹೇಬರು ಭಾರತದ ವಶದಲ್ಲಿರುವ ಕಾಶ್ಮೀರ ಮತ್ತು ಜುನಾಗಢ್ ಪ್ರದೇಶವನ್ನು ಪಾಕಿಸ್ತಾನಕ್ಕೆ ಸೇರಿಸಿಕೊಂಡಿದ್ದಾರೆ! ಮತ್ತೂ ತಮಾಷೆಯ ಸಂಗತಿಯೆಂದರೆ, ಅವರ ಸಚಿಸ ಸಂಪುಟ ಆ ನಕಾಶೆಯನ್ನು ಅನುಮೋದಿಸಿದೆ!!
ತಿಕ್ಕಲುತನ ಮತ್ತು ಮೂರ್ಖತನವೆಂದರೆ ಪ್ರಾಯಶಃ ಇದೇ ಇರಬೇಕು. ಇಮ್ರಾನ್ ಚೆನ್ನಾಗಿ ಓದಿಕೊಂಡಿರುವದರಿಂದ ಇಂಥ ಬಾಲಿಶ ಪ್ರಯತ್ನಕ್ಕೆ ಮುಂದಾಗಬಾರದಿತ್ತು. ಸೇನಾ ನಾಯಕರು ಮತ್ತು ಮೌಲ್ವಿಗಳನ್ನು ಮೆಚ್ಚಿಸಲು ಆ ದೇಶದ ಪ್ರಧಾನ ಮಂತ್ರಿಗಳು, ಅಧ್ಯಕ್ಷರು ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ, ಇದಕ್ಕೆ ಇಮ್ರಾನ್ ಖಾನ್ ಕೂಡ ಹೊರತಾದಂತಿಲ್ಲ.
ದೇಶ ಇಬ್ಭಾಗವಾದಲೂ ಪಾಕಿಸ್ತಾನಿ ನಾಯಕರು ವಿಶ್ವಸಂಸ್ಥೆಗೆ ಮನವಿಯೊಂದನ್ನು ಸಲ್ಲಿಸಿ ಜುನಾಗಢ್ ತಮಗೆ ಸೇರಿದ್ದೆಂದು ಅರುಹಿದ್ದರು. ವಿಶ್ವಸಂಸ್ಥೆಯು, ಕಾಶ್ಮೀರದಲ್ಲಿದ್ದ ತನ್ನ ಕಮೀಷನ್ಗೆ ಪಾಕಿಸ್ತಾನದ ಮನವಿಯನ್ನು ಪರಿಶೀಲಿಸುವಂತೆ ಹೇಳಿತ್ತು. ಆ ವಿಷಯ ಅಷ್ಟಕ್ಕೇ ನಿಂತುಹೋಗಿದ್ದು ಬೇರೆ ವಿಚಾರ.
ಸೌರಾಷ್ಟ್ರ ಪ್ರಾಂತ್ಯದ ಭಾಗವಾಗಿರುವ ಜುನಾಗಢ್ ಒಂದು ಸುಂದರ ಬಂದರು ನಗರ. ಚಂದ್ರಗುಪ್ತ ಮೌರ್ಯ ಕ್ರಿ. ಪೂ 319ರಲ್ಲಿ ಕಟ್ಟಿದ ಇಲ್ಲಿನ ಕೋಟೆ, ಸಂಸ್ಕೃತಿ, ನೃತ್ಯ-ಹಾಡುಗಳ ಪರಂಪರೆ, ಮಸಾಲೆ ಪದಾರ್ಥಗಳು, ಮತ್ತು ಉಪ್ಪಿನಕಾಯಿ ಜನಜನಿತವಾಗಿವೆ.
ಇದುವರೆಗೆ ಜುನಾಗಢ್ ಬಗ್ಗೆ ಚಕಾರವೆತ್ತದ ಪಾಕಿಸ್ತಾನ ಈಗ ಮತ್ತೆ ಕಾಲು ಕೆದರಿ ಜಗಳಕ್ಕೆ ಬರುವ ಹುನ್ನಾರ ಮಾಡಿದಂತಿದೆ. ಭಾರತ ರಫೇಲ್ ಯುದ್ಧ ವಿಮಾನಗಳನ್ನು ತರಿಸಿಕೊಂಡರೂ ತಾನು ಹೆದರಿಲ್ಲ ಎಂದು ಸಾರುವ ಪ್ರಯತ್ನವೇನಾದರೂ ಇಮ್ರಾನ್ ಖಾನ್ ಮಾಡುತ್ತಿದ್ದರೆ ಅವರು ತಮ್ಮ ಯೋಚನಾಧಾಟಿಯನ್ನು ಬದಲಾಯಿಸಿಕೊಳ್ಳುವುದು ಅವರಿಗೂ ಮತ್ತು ಅವರ ದೇಶಕ್ಕೂ ಒಳ್ಳೆಯದೆಂದು ಭಾರತೀಯರು ಅಂದುಕೊಳ್ಳುತ್ತಿದ್ದಾರೆ. ಯಾಕೆಂದರೆ ರಫೇಲ್ ಇಲ್ಲದಾಗಲೂ ಭಾರತ, ಪಾಕಿಸ್ತಾನವನ್ನು ಮೂರ್ನಾಲ್ಕು ಬಾರಿ ಬಗ್ಗುಬಡಿದಿರುವುದು ವಿಶ್ವಕ್ಕೇ ಗೊತ್ತಿದೆ. ವಿಷಯ ಅಷ್ಟೇ.