ಮಂದಿರಕ್ಕಾಗಿ ಶಬರಿಯಂತೆ ಕಾದಿದ್ದ ವಿದೇಶಿ ಕನ್ನಡಿಗರು ಸಂಭ್ರಮ ಹಂಚಿಕೊಂಡಿದ್ದು ಹೀಗೆ
ವರ್ಷಾನುಗಟ್ಟಲೆಯಿಂದ ಜಗತ್ತಿನಾದ್ಯಂತ ಶಬರಿಯಂತೆ ಕಾದುಕುಳಿತಿದ್ದ ಕೋಟ್ಯಂತರ ರಾಮ ಭಕ್ತರಿಗೆ ಇಂದು ನಿಜಕ್ಕೂ ಸುದಿನ. ರಾಮ ನಾಮ ಜಪದಲ್ಲಿದ್ದವರಿಗೆ ಪಾಯಸ ಸವಿದಂತಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮ ಸ್ಥಳದಲ್ಲಿ ರಾಮ ಮಂದಿರ ಪುನರ್ನಿರ್ಮಾಣಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುತ್ತಿದ್ದಂತೆ ಜಗತ್ತಿನಾದ್ಯಂತ ರಾಮ ಭಕ್ತರು ಸಂತಸದಲ್ಲಿ ಮಿಂದೆದ್ದಿದ್ದಾರೆ. ವಾಷಿಂಗ್ಟನ್ನ ಸಿಯಾಟಲ್ನಲ್ಲಿರುವ ಅಪರ್ಣಾ, ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿರುವ ಜ್ಯೋತಿ ಸೇರಿದಂತೆ ಅನೇಕರು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಭಾರತೀಯ ಪರಂಪರೆಯಂತೆ ಲಕ್ಷಣವಾಗಿ ಅಲಂಕಾರ ಮಾಡಿಕೊಂಡು ರಾಮ ಜಪ […]
ವರ್ಷಾನುಗಟ್ಟಲೆಯಿಂದ ಜಗತ್ತಿನಾದ್ಯಂತ ಶಬರಿಯಂತೆ ಕಾದುಕುಳಿತಿದ್ದ ಕೋಟ್ಯಂತರ ರಾಮ ಭಕ್ತರಿಗೆ ಇಂದು ನಿಜಕ್ಕೂ ಸುದಿನ. ರಾಮ ನಾಮ ಜಪದಲ್ಲಿದ್ದವರಿಗೆ ಪಾಯಸ ಸವಿದಂತಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮ ಸ್ಥಳದಲ್ಲಿ ರಾಮ ಮಂದಿರ ಪುನರ್ನಿರ್ಮಾಣಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುತ್ತಿದ್ದಂತೆ ಜಗತ್ತಿನಾದ್ಯಂತ ರಾಮ ಭಕ್ತರು ಸಂತಸದಲ್ಲಿ ಮಿಂದೆದ್ದಿದ್ದಾರೆ.
ವಾಷಿಂಗ್ಟನ್ನ ಸಿಯಾಟಲ್ನಲ್ಲಿರುವ ಅಪರ್ಣಾ, ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿರುವ ಜ್ಯೋತಿ ಸೇರಿದಂತೆ ಅನೇಕರು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಭಾರತೀಯ ಪರಂಪರೆಯಂತೆ ಲಕ್ಷಣವಾಗಿ ಅಲಂಕಾರ ಮಾಡಿಕೊಂಡು ರಾಮ ಜಪ ಮಾಡುತ್ತಾ ತಮ್ಮ ಸಂತಸ ಹೊರಹಾಕಿದ್ದಾರೆ. ಇವರೆಲ್ಲ ನಮ್ಮ ಕನ್ನಡಿಗರು ಎಂಬುದು ಹೆಮ್ಮೆಯ, ಸಂತಸದ ವಿಚಾರ.
ಇನ್ನು ಅನೇಕರು ಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾವು ಉತ್ಸುಕರಾಗಿದ್ದೆವು. ಆದ್ರೆ ಮಹಾಮಾರಿ ಕೊರೊನಾದಿಂದಾಗಿ ಅದು ಸಾಧ್ಯವಾಗದೇ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಮಂದಿರ ನಿರ್ಮಾಣವಾಗಬೇಕೆನ್ನುವ ತಮ್ಮ ಕನಸು ನನಸಾಗಿದ್ದಕ್ಕೆ ಹೆಮ್ಮೆಯಿಂದ ಬೀಗಿದ್ದಾರೆ. ತಾವಿರುವ ಕಡೆಗಳಲ್ಲೇ ಭಗವಾನ್ ರಾಮನಿಗೆ ಪೂಜೆ ಮಾಡಿದ್ದಾರೆ. ಜೈಶ್ರೀರಾಮ್ ಎಂದು ಉದ್ಗಾರ ತೆಗೆದಿದ್ದಾರೆ.
ಇನ್ನು ಹಿರಿಯರಂತೂ ಆರತಿ ತಟ್ಟೆ ಹಿಡಿದು ರಾಮನ ಫೋಟೋ, ವಿಗ್ರಹಕ್ಕೆ ಪೂಜೆ ಮಾಡುತ್ತಾ ಆರತಿ ಎತ್ತಿದ್ದಾರೆ. ಮರ್ಯಾದಾ ಪುರುಷೋತ್ತಮ ಸರ್ವರಿಗೂ ಒಳಿತನ್ನುಂಟು ಮಾಡಲಿ ಎಂದು ಕೋರಿದ್ದಾರೆ.
Published On - 5:05 pm, Wed, 5 August 20