
ಇಸ್ಲಾಮಾಬಾದ್, ಏಪ್ರಿಲ್ 30: ಮಾಡೋದೆಲ್ಲಾ ಮಾಡಿ ಇದೀಗ ಪಾಕಿಸ್ತಾನ(Pakistan) ಭಾರತಕ್ಕೆ ಹೆದರಿ ಕುಳಿತಿದೆ. 24-36 ಗಂಟೆಯೊಳಗೆ ಭಾರತ ನಮ್ಮ ಮೇಲೆ ದಾಳಿ ನಡೆಸಬಹುದು ಎಂದು ಪಾಕಿಸ್ತಾನ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಭಾರತ ಮಿಲಿಟರಿ ದಾಳಿಯನ್ನು ಯೋಜಿಸುತ್ತಿದೆ ಎಂದು ಸೂಚಿಸುವ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯನ್ನು ನಾವು ಹೊಂದಿದ್ದೇವೆ ಎಂದು ಪಾಕ್ ಸಚಿವ ಅತ್ತಾವುಲ್ಲಾ ತರಾರ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಲಷ್ಕರ್-ಎ-ತೊಯ್ಬಾದ ಟಿಆರ್ಎಫ್ ಈ ದಾಳಿ ಹೊಣೆಯನ್ನು ಹೊತ್ತುಕೊಂಡಿತ್ತು. ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ನಮ್ಮ ಡೆಬ್ಸೈಟ್ ಯಾರೋ ಹ್ಯಾಕ್ ಮಾಡಿದ್ದಾರೆ, ನಾವು ಈ ದಾಳಿ ನಡೆಸಿಲ್ಲ ಎಂದು ಹೇಳಿಕೆ ನೀಡಿತ್ತು.
ಇದೀಗ ಭಾರತ ಏನು ಮಾಡಬಹುದು ಎನ್ನುವ ಭಯದಲ್ಲಿ ಪಾಕಿಸ್ತಾನವಿದ್ದು, ಮುಂದಿನ 36 ಗಂಟೆಯೊಳಗೆ ದಾಳಿ ನಡೆಸಬಹುದು ಎಂದು ಹೆದರಿ ಕುಳಿತಿದೆ. ಭಾರತೀಯ ಸೇನಾ ದಾಳಿಯ ಬೆದರಿಕೆ ಪಾಕಿಸ್ತಾನ ಸೇನೆಯೊಳಗೆ ಅವ್ಯವಸ್ಥೆಯನ್ನು ಹುಟ್ಟುಹಾಕಿದೆ ಎಂದು ವರದಿಯಾಗಿದೆ.
ಮತ್ತಷ್ಟು ಓದಿ: ಉಗ್ರರ ಹುಟ್ಟಡಗಿಸಲು ಸಶಸ್ತ್ರ ಪಡೆಗಳಿಗೆ ಪೂರ್ತಿ ಸ್ವಾತಂತ್ರ್ಯ ನೀಡಿದ ಪ್ರಧಾನಿ ಮೋದಿ
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಬರೆದ ಪತ್ರದಲ್ಲಿ, ಲೆಫ್ಟಿನೆಂಟ್ ಜನರಲ್ ಉಮರ್ ಅಹ್ಮದ್ ಬುಖಾರಿ ಅವರು ಕಳೆದ 72 ಗಂಟೆಗಳಲ್ಲಿ 250 ಅಧಿಕಾರಿಗಳು ಸೇರಿದಂತೆ 1,450 ಸೈನಿಕರು ರಾಜೀನಾಮೆ ನೀಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಪಹಲ್ಗಾಮ್ ದಾಳಿಯ ನಂತರ, ಸುಮಾರು 5,000 ಸೈನಿಕರು ಮತ್ತು ಅಧಿಕಾರಿಗಳು ಪಾಕಿಸ್ತಾನಿ ಸೇನೆಯನ್ನು ತೊರೆದಿದ್ದಾರೆ. ರಾಜೀನಾಮೆಗಳಲ್ಲಿ 12 ನೇ ಕಾರ್ಪ್ಸ್ ಕ್ವೆಟ್ಟಾದಿಂದ 520, ಫೋರ್ಸ್ ಕಮಾಂಡ್ ಉತ್ತರ ಪ್ರದೇಶಗಳಿಂದ 380 ಮತ್ತು ಫಸ್ಟ್ ಕಾರ್ಪ್ಸ್ ಮಂಗ್ಲಾದಿಂದ 550 ಸೇರಿವೆ ಎಂದು ವರದಿಯಾಗಿದೆ.
2019 ರಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿಗಳಲ್ಲಿ ಇದು ಒಂದಾಗಿದೆ. ಆದಾಗ್ಯೂ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವುನೋವುಗಳ ಸಂಖ್ಯೆಯನ್ನು ಸರ್ಕಾರ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಭದ್ರತಾ ಪಡೆಗಳು ಹೊಣೆಗಾರರಾದ ಭಯೋತ್ಪಾದಕರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು.
वैसे सोचने की बात है कि रात को दो बजे प्रेस कॉन्फ़्रेंस क्यों किया पाकिस्तानी सूचना मंत्री ने? https://t.co/OqzkrEv1h4
— Umashankar Singh उमाशंकर सिंह (@umashankarsingh) April 30, 2025
ದಾಳಿಯ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇನ್ನೊಂದೆಡೆ ಪ್ರಧಾನಿ ಶಹಬಾಜ್ ಷರೀಫ್ ಸಹೋದರ ನವಾಜ್ ಷರೀಫ್ ಭಾರತದೊಂದಿಗೆ ಯುದ್ಧ ಮಾಡದಂತೆ ಸಲಹೆ ನೀಡಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಮಂಗಳವಾರ ಪ್ರಧಾನಿ ನರೇಂದ್ರ ನಿವಾಸದಲ್ಲಿ ಮಹತ್ವದ ಸಭೆ ನಡೆಸಿತ್ತು, ಸೇನಾ ಮುಖ್ಯಸ್ಥರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗಿಯಾಗಿದ್ದರು. ಉಗ್ರರನ್ನು ಸದೆಬಡಿಯನು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:07 am, Wed, 30 April 25