UNHRC: ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತ ಮರು ಆಯ್ಕೆ

ಸಮ್ಮಾನ, ಸಂವಾದ ಮತ್ತು ಸಹಯೋಗದ ಮೂಲಕ ಮಾನವ ಹಕ್ಕುಗಳ ರಕ್ಷಣೆಗೆ ತನ್ನ ಬದ್ಧತೆಯನ್ನು ಮುಂದುವರಿಸುವುದಾಗಿ ಭಾರತ ತನ್ನ ನಿಲುವು ಸಾರಿ ಹೇಳಿದೆ.

UNHRC: ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತ ಮರು ಆಯ್ಕೆ
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆ
Edited By:

Updated on: Oct 14, 2021 | 10:49 PM

ನ್ಯೂಯಾರ್ಕ್: 2022-24ರ ಅವಧಿಯ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಗುರುವಾರ ಮರು ಆಯ್ಕೆಯಾಗಿದೆ. ಸಮ್ಮಾನ, ಸಂವಾದ ಮತ್ತು ಸಹಯೋಗದ ಮೂಲಕ ಮಾನವ ಹಕ್ಕುಗಳ ರಕ್ಷಣೆಗೆ ತನ್ನ ಬದ್ಧತೆಯನ್ನು ಮುಂದುವರಿಸುವುದಾಗಿ ಭಾರತ ತನ್ನ ನಿಲುವು ಸಾರಿ ಹೇಳಿದೆ.

‘ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ (2022-24) 6ನೇ ಅವಧಿಗೆ ಭಾರೀ ಬಹುಮತದಿಂದ ಆಯ್ಕೆಯಾಗಿದೆ. ಭಾರತದ ಮೇಲೆ ವಿಶ್ವಾಸವನ್ನು ಮತ್ತೊಮ್ಮೆ ತೋರಿದ್ದಕ್ಕಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಹೃದಯಪೂರ್ವಕ ಕೃತಜ್ಞತೆಗಳು. ವಿಶ್ವದಲ್ಲಿ ಸಮ್ಮಾನ, ಸಂವಾದ ಮತ್ತು ಸಹಯೋಗದ ಮೂಲಕ ಮಾನವ ಹಕ್ಕುಗಳ ರಕ್ಷಣೆಗೆ ಹಾಗೂ ಪ್ರೋತ್ಸಾಹಕ್ಕೆ ಶ್ರಮಿಸುತ್ತೇವೆ’ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ನಿಯೋಗವು ಟ್ವೀಟ್ ಮೂಲಕ ತಿಳಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಗುಪ್ತಮತದಾನದ ಮೂಲಕ ಅರ್ಜಂಟೀನಾ, ಬೆನಿನ್, ಕ್ಯಾಮರೂನ್, ಎರಿಟ್ರಿಯಾ, ಫಿನ್​ಲೆಂಡ್, ಗ್ಯಾಂಬಿಯಾ, ಹೌಂಡರಸ್, ಭಾರತ, ಕಜಕಸ್ತಾನ್, ಲಿಥುನಿಯಾ, ಲಕ್ಸಂಬರ್ಗ್, ಮಲೇಷಿಯಾ, ಮಾಂಟೆನೆಗ್ರೊ, ಪರುಗ್ವೆ, ಕತಾರ್, ಸೊಮಾಲಿಯಾ, ಯುಎಇ ಮತ್ತು ಅಮೆರಿಕ ದೇಶಗಳನ್ನು ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆ ಮಾಡಿದೆ.

ಇದನ್ನೂ ಓದಿ: ಭಾರತ ಅಭಿವೃದ್ಧಿಯಾದರೆ ವಿಶ್ವವೇ ಅಭಿವೃದ್ಧಿಯಾಗುತ್ತದೆ; ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ
ಇದನ್ನೂ ಓದಿ: PM Modi in UNGA Summit: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭ