ಚೀನಾ ಪ್ರಜೆಗಳಿಗೆ ಭಾರತದ ಇ-ವೀಸಾ ನಿಷೇಧ, ಕೇರಳದಲ್ಲಿ 120ಕ್ಕೂ ಹೆಚ್ಚು ಜನರಿಗೆ ಗೃಹ ಬಂಧನ

ಬೀಜಿಂಗ್: ಕೊರೊನಾ ವೈರಸ್​.. ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಮಹಾಮಾರಿಗೆ 350ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. 14 ಸಾವಿರಕ್ಕೂ ಹೆಚ್ಚು ಜನರು ಸೋಂಕಿನಿಂದ ನರಳುತ್ತಿದ್ದಾರೆ. ಭಾರತ, ಅಮೆರಿಕ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಚೀನಾ ಪ್ರಜೆಗಳಿಗೆ ಭಾರತದ ಇ-ವೀಸಾ ನಿಷೇಧ: ಯೆಸ್, ಕೇರಳದಲ್ಲಿ ನಿನ್ನೆ ಮತ್ತೊಂದು ಕೊರೊನಾ ಕೇಸ್​ ಪತ್ತೆಯಾಗುತ್ತಿದ್ದಂತೇ ಕೇಂದ್ರ ಸರ್ಕಾರ ಫುಲ್ ಅಲರ್ಟ್ ಆಗಿದೆ. ಭಾರತಕ್ಕೂ ಮಾರಣಾಂತಿಕ ವೈರಸ್ ಹರಡುವ ಭೀತಿ ಹಿನ್ನೆಲೆ ಚೀನಾ ಪ್ರಜೆಗಳು ಹಾಗೂ ಅಲ್ಲಿ ನೆಲೆಸಿರೋ […]

ಚೀನಾ ಪ್ರಜೆಗಳಿಗೆ ಭಾರತದ ಇ-ವೀಸಾ ನಿಷೇಧ, ಕೇರಳದಲ್ಲಿ 120ಕ್ಕೂ ಹೆಚ್ಚು ಜನರಿಗೆ ಗೃಹ ಬಂಧನ
Follow us
ಸಾಧು ಶ್ರೀನಾಥ್​
|

Updated on:Feb 03, 2020 | 7:17 AM

ಬೀಜಿಂಗ್: ಕೊರೊನಾ ವೈರಸ್​.. ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಮಹಾಮಾರಿಗೆ 350ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. 14 ಸಾವಿರಕ್ಕೂ ಹೆಚ್ಚು ಜನರು ಸೋಂಕಿನಿಂದ ನರಳುತ್ತಿದ್ದಾರೆ. ಭಾರತ, ಅಮೆರಿಕ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ.

ಚೀನಾ ಪ್ರಜೆಗಳಿಗೆ ಭಾರತದ ಇ-ವೀಸಾ ನಿಷೇಧ: ಯೆಸ್, ಕೇರಳದಲ್ಲಿ ನಿನ್ನೆ ಮತ್ತೊಂದು ಕೊರೊನಾ ಕೇಸ್​ ಪತ್ತೆಯಾಗುತ್ತಿದ್ದಂತೇ ಕೇಂದ್ರ ಸರ್ಕಾರ ಫುಲ್ ಅಲರ್ಟ್ ಆಗಿದೆ. ಭಾರತಕ್ಕೂ ಮಾರಣಾಂತಿಕ ವೈರಸ್ ಹರಡುವ ಭೀತಿ ಹಿನ್ನೆಲೆ ಚೀನಾ ಪ್ರಜೆಗಳು ಹಾಗೂ ಅಲ್ಲಿ ನೆಲೆಸಿರೋ ವಿದೇಶಿಗರ ಇ-ವೀಸಾವನ್ನ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಮೂಲಕ ಅವರೆಲ್ಲಾ ಭಾರತಕ್ಕೆ ಪ್ರಯಾಣ ಬೆಳೆಸೋದನ್ನ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಈಗಾಗಲೇ ಹೊಂದಿರೋ ಇ-ವೀಸಾಗಳನ್ನ ಅಸಿಂಧುಗೊಳಿಸಲಾಗಿದೆ ಅಂತ ಬೀಜಿಂಗ್​ನಲ್ಲಿರೋ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಕೇರಳದಲ್ಲಿ 120ಕ್ಕೂ ಹೆಚ್ಚು ಜನರಿಗೆ ಗೃಹ ಬಂಧನ! ಭಾರತದ ಪೈಕಿ ದೇವರನಾಡು ಕೇರಳದಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಇಬ್ಬರಿಗೆ ಕೊರೊನಾ ವೈರಸ್ ತಗುಲಿದ್ರೆ. ಕೇರಳದ ಅಲಪ್ಪುಜಾದಲ್ಲಿ 120ಜನರನ್ನ ಗೃಹ ಬಂಧನದಲ್ಲಿ ಇರಿಸಲಾಗಿದೆ. ಜೊತೆಗ ಅವ್ರ ಮನೆಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನ ನಿಷೇಧಿಸಲಾಗಿದೆ ಅಂತ ಸರ್ಕಾರ ಹೇಳಿದೆ.

ಕೊರೊನಾ ಬಗ್ಗೆ ಸುಳ್ಳು ಮಾಹಿತಿ.. ಮತ್ತಿಬ್ಬರು ಅರೆಸ್ಟ್: ಇನ್ನು ಕೇರಳದ ಶ್ರಿಶೂರ್​ನಲ್ಲಿ ಕೊರೊನಾ ವೈರಸ್ ಬಗ್ಗೆ ಸುಳ್ಳು ಮಾಹಿತಿ ಹರಡಿದ ಇಬ್ಬರು ಮಹಿಳೆಯರು ಅರೆಸ್ಟ್ ಆಗಿದ್ದಾರೆ. ಈ ಮೂಲಕ ಫೇಕ್ ಇನ್ಫಾರ್ಮೇಷನ್ ಸ್ಪ್ರೆಡ್​ ಮಾಡಿ ಲಾಕ್ ಆದವರ ಸಂಖ್ಯೆ 5ಕ್ಕೆ ರೈಸ್ ಆಗಿದೆ.

ಇವೆಲ್ಲದರ ನಡುವೆ ಚೀನಾದ ವುಹಾನ್​ನಿಂದ ವಿಶೇಷ ವಿಮಾನದಲ್ಲಿ ಬಂದಿರುವ ಭಾರತೀಯರನ್ನ ಹರಿಯಾಣದ ಮಾನೇಸರ್​ನ ಐಸಸೋಲೇಷನ್ ಕ್ಯಾಂಪ್​ನಲ್ಲಿ ಇಡಲಾಗಿದೆ. ಸೇನಾ ಶಿಬಿರದಲ್ಲಿ ತಂಗಿರುವ ವಿದ್ಯಾರ್ಥಿಗಳು ಭರ್ಜರಿ ಡ್ಯಾನ್ಸ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.

ಇನ್ನು ಡೆಡ್ಲಿ ಕೊರೊನಾ ವೈರಸ್​ಗೆ ಚಿಕಿತ್ಸೆ ಕಂಡುಹಿಡಿಯುವಲ್ಲಿ ಥಾಯ್​ಲ್ಯಾಂಡ್ ವೈದ್ಯರು ಆರಂಭಿಕ ಯಶಸ್ಸು ಕಂಡಿದ್ದಾರೆ ಎನ್ನಲಾಗ್ತಿದೆ. ಈ ಔಷಧಿಯು ಲೋಪಿನಾವಿರ್ ಹಾಗೂ ರಿಟೊನಾವಿರ್ ಎಂಬುದರ ಮಿಶ್ರಣ ಅಂತ ವೈದ್ಯರು ಹೇಳಿದ್ದಾರೆ. ಒಟ್ನಲ್ಲಿ, ಕೊರೊನಾ ಆರ್ಭಟಕ್ಕೆ ಚೀನಾ ತತ್ತರಿಸಿ ಹೋಗಿದ್ದು, ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಒಂದೊಂದೇ ಪ್ರಕರಣ ಬೆಳಕಿಗೆ ಬರುತ್ತಿರೋದು ಆತಂಕ ಹೆಚ್ಚಾಗುವಂತೆ ಮಾಡಿದೆ.

Published On - 7:16 am, Mon, 3 February 20

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ