ಕೆನಡಾದಲ್ಲಿ ಭಾರತೀಯ ಮೂಲದ ಕುಟುಂಬ ಅನುಮಾನಾಸ್ಪದ ಸಾವು
ಕೆನಡಾದಲ್ಲಿ ಭಾರತೀಯ ಮೂಲದ ಕುಟುಂಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ನೆಲೆಸಿರುವ ಭಾರತೀಯ ಕುಟುಂಬವು ಮಾರ್ಚ್ ಏಳರಂದು ನಿಗೂಢವಾಗಿ ಸಾವಿನ್ನಪ್ಪಿದ್ದಾರೆ. ಈ ಸಾವನ್ನಪ್ಪಿರುವವರನ್ನು ಭಾರತೀಯರ ಎಂದು ನೆನ್ನೆ (ಮಾ.15) ಕೆನಾಡ ಪೊಲೀಸರು ಪತ್ತೆ ಮಾಡಿದ್ದಾರೆ. ಭಾರತೀಯ ಮೂಲದ ದಂಪತಿಗಳು ಮತ್ತು ಅವರ ಹದಿಹರೆಯದ ಮಗಳು ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ದೆಹಲಿ ಮಾ.16: ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ನೆಲೆಸಿರುವ ಭಾರತೀಯ ಕುಟುಂಬವು ಮಾರ್ಚ್ 7ರಂದು ನಿಗೂಢವಾಗಿ ಸಾವಿನ್ನಪ್ಪಿದ್ದಾರೆ. ಈ ಸಾವನ್ನಪ್ಪಿರುವವರನ್ನು ಭಾರತೀಯರ ಎಂದು ನೆನ್ನೆ (ಮಾ.15) ಕೆನಾಡ ಪೊಲೀಸರು ಪತ್ತೆ ಮಾಡಿದ್ದಾರೆ. ಭಾರತೀಯ ಮೂಲದ ದಂಪತಿಗಳು ಮತ್ತು ಅವರ ಹದಿಹರೆಯದ ಮಗಳು ಮನೆಗೆ ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬೆಂಕಿ ತಗುಲಿರುವುದು ಆಕಸ್ಮಿಕವಲ್ಲ, ಯಾರೋ ಬೆಂಕಿ ಹಾಕಿರುವುದು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಈ ಬೆಂಕಿ ಅವಘಡದಿಂದ ಮೃತದೇಹಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಎಂದು ಹೇಳಿದ್ದಾರೆ.
ಇನ್ನು ಮೃತರನ್ನು 51 ವರ್ಷದ ರಾಜೀವ್ ವಾರಿಕೂ, ಅವರ ಪತ್ನಿ 47 ವರ್ಷದ ಶಿಲ್ಪಾ ಕೋಥಾ ಮತ್ತು ಅವರ 16 ವರ್ಷದ ಮಗಳು ಮಾಹೆಕ್ ವಾರಿಕೂ ಎಂದು ಗುರುತಿಸಲಾಗಿದೆ. ಬಿಗ್ ಸ್ಕೈ ವೇ ಮತ್ತು ವ್ಯಾನ್ ಕಿರ್ಕ್ ಡ್ರೈವ್‌ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮನೆಗೆ ಬೆಂಕಿ ತಗುಲಿರುವುದು ಆಕಸ್ಮಿಕ ಎಂದು ವರದಿ ಹೇಳಿತ್ತು. ಆದರೆ ಇದೀಗ ಈ ಸಾವಿನ ಸುತ್ತ ಅನುಮಾನದ ವಾಸನೆ ಬರುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ ಈ ಬೆಂಕಿ ಆಕಸ್ಮಿಕವಲ್ಲ, ಇದು ಬೆಂಕಿ ಹಾಕಿ ಕೊಂದಿರುವಂತೆ ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಪುರಾವೆಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಈ ಬೆಂಕಿ ಆಕಸ್ಮಿಕವಲ್ಲ ಎಂದು ಒಂಟಾರಿಯೊ ಫೈರ್ ಮಾರ್ಷಲ್ ಹೇಳಿದ್ದಾರೆ.
ಮಾರ್ಚ್ 7 ರಂದು ಬ್ರಾಂಪ್ಟನ್‌ನ ಬಿಗ್ ಸ್ಕೈ ವೇ ಮತ್ತು ವ್ಯಾನ್ ಕಿರ್ಕ್ ಡ್ರೈವ್ ಪ್ರದೇಶದಲ್ಲಿನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರತ್ಯಕ್ಷದರ್ಶಿಗಳು ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ದೊಡ್ಡ ಶಬ್ದ ಕೇಳಿ ಬಂದಿದೆ ಎಂದು ಹೇಳಿದ್ದಾರೆ. ಮೃತ ಕುಟುಂಬದ ನೆರೆಹೊರೆಯವರಾದ ಕೆನ್ನೆತ್ ಯೂಸಫ್ ಅವರು ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವುದನ್ನು ನೋಡಿದ್ದಾರೆ.
ಇದನ್ನೂ ಓದಿ: ಚೀನಾದ ರೆಸ್ಟೋರೆಂಟ್ನಲ್ಲಿ ಸ್ಫೋಟ, ಓರ್ವ ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ
ಯೂಸುಫ್ ಅವರು ಕಳೆದ ವಾರ ಬೆಂಕಿಯ ಬಗ್ಗೆ ತಮ್ಮ ಕುಟುಂಬದ ಸದಸ್ಯರಿಂದ ಎಚ್ಚರಿಕೆ ನೀಡಿದರು. ಬೆಂಕಿ ನಂದಿಸಲು ಅಕ್ಕ-ಪಕ್ಕದ ಜನ ಪ್ರಯತ್ನಿಸಿದ್ದಾರೆ. ಆದರೆ ಬೆಂಕಿ ಜೋರಾಗಿ ಉರಿಯುತ್ತಿದ್ದ ಕಾರಣ ಮನೆ ಸಂಪೂರ್ಣ ಸುಟ್ಟ ಹೋಗಿದೆ. ಹಾಗೂ ಈ ಬಗ್ಗೆ ಪೊಲೀಸರಿಗೆ ತಿಳಿಸಲಾಗಿತ್ತು. ಸ್ಥಳಕ್ಕೆ ಧಾವಿಸಿದ ಅವರು ತನಿಖೆ ನಡೆಸಿದ್ದಾರೆ, ಮನೆಯೊಳಗೆ ಇದ್ದ ಜನರನ್ನು ಪತ್ತೆ ಮಾಡಲಾಗಿದೆ. ಆದರೆ ಅವರು ಯಾರು ಎಂಬ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಮೃತ ರಾಜೀವ್ ವಾರಿಕೂ ಅವರು ಟೊರೊಂಟೊ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 2016 ರಲ್ಲಿ ಅವರು ಸೇವೆ ಯಿಂದ ನಿವೃತ್ತಿಯಾದರು. ಇನ್ನು ಅವರ ಮಗಳು ಮಾಹೆಕ್ ವಾರಿಕೂ ಫುಟ್‌ಬಾಲ್ ಆಸಕ್ತಿಯನ್ನು ಹೊಂದಿದ್ದು, ಅದರಲ್ಲಿಯೇ ಮುಂದುವರಿದರು. ಉತ್ತರ ಅಮೇರಿಕಾದಾದ್ಯಂತ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ