ಅಮೆರಿಕ: ಭಾರತ ಮೂಲದ ಇಪ್ಪತ್ತು ವರ್ಷ ವಯಸ್ಸಿನ ವಿದ್ಯಾರ್ಥಿ ವರುಣ್ ಮನೀಶ್ ಛೇಡಾ ಪರ್ಡ್ಯೂ ವಿಶ್ವವಿದ್ಯಾಲಯದ ವಿದ್ಯಾರ್ಥಿಯು ಯುನೈಟೆಡ್ ಸ್ಟೇಟ್ಸ್‌ನ ಇಂಡಿಯಾನಾ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ಪ್ರಾಥಮಿಕ ಶವಪರೀಕ್ಷೆಯ ವರದಿ ಹೇಳಿರುವಂತೆ ಇದೊಂದು ಕೊಲೆ ಎಂದು ಹೇಳಲಾಗಿದೆ. ವಿದ್ಯಾರ್ಥಿಯ ಸಾವು ಹಲವಾರು ಪ್ರಶ್ನೆಗಳಾಗಿ ಉಳಿದಿದೆ, ಆದರೆ ಅಲ್ಲಿರುವ ಕೆಲವರು ಇದು ಕೊಲೆ ಎಂದು ಹೇಳುತ್ತಿದ್ದಾರೆ.
ವರುಣ್ ಮನೀಶ್ ಛೇಡಾನ ರೂಮ್‌ಮೇಟ್ ಈ ಹತ್ಯೆಯನ್ನು ಮಾಡಿದ್ದು, ಆತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ದೂರದರ್ಶನ ಕೇಂದ್ರವಾದ ಫಾಕ್ಸ್ 59 ಪ್ರಕಾರ ಛೇಡಾ ಪಾರ್ಕ್ ಟ್ಯೂಡರ್‌ನ 2020 ರ ಪದವೀಧರರಾಗಿದ್ದರು.ಛೇಡಾನ ರೂಮ್‌ಮೇಟ್, ಕೊರಿಯಾದ 22 ವರ್ಷದ ಜಿ ಮಿನ್ ಜಿಮ್ಮಿ ಶಾ ಎಂದು ಹೇಳಲಾಗಿದೆ. ಈಗ ಆತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ ಮತ್ತು ಪ್ರಕರಣದ ಪ್ರಮುಖ ಸಾಕ್ಷಿ ಕೂಡ ಹೌದು. ಶಾ ಕೊರಿಯಾದ ಜೂನಿಯರ್ ಸೈಬರ್ ಸೆಕ್ಯುರಿಟಿ ಮೇಜರ್ ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿ.
ಇದನ್ನು ಓದಿ: ಅಪಹರಣವಾಗಿದ್ದ ಭಾರತದ ಮೂಲದ 4 ಮಂದಿಯ ಶವ ಯುಎಸ್‌ನ ಹಣ್ಣಿನ ತೋಟದಲ್ಲಿ ಪತ್ತೆ
ಬುಧವಾರ ಬೆಳಗ್ಗೆ 12:45 ಗಂಟೆಗೆ ಶಾ ಸಾವಿನ ಬಗ್ಗೆ ಪೊಲೀಸರನ್ನು ಎಚ್ಚರಿಸಲು 911ಗೆ ಕರೆ ಮಾಡಿದ್ದಾರೆ ಎಂದು ಪರ್ಡ್ಯೂ ವಿಶ್ವವಿದ್ಯಾಲಯದ ಪೊಲೀಸ್ ಮುಖ್ಯಸ್ಥ ಲೆಸ್ಲಿ ವೈಟೆ ಬುಧವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿದರು ಎಂದು ಈ ಬಗ್ಗೆ ಎನ್‌ಬಿಸಿ ವರದಿ ಮಾಡಿದೆ. ಛೇಡಾನ ಮ್ಯಾಕ್‌ಕಟ್ಚಿಯಾನ್ ಹಾಲ್‌ನ ಮೊದಲ ಮಹಡಿಯಲ್ಲಿರುವ ತನ್ನ ಕೋಣೆಯಲ್ಲಿ ಹೇಗೆ ಸತ್ತರು ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ಪೊಲೀಸರು ಸಾವನ್ನು ಕೊಲೆ ಪ್ರಕರಣ ಎಂದು ಪರಿಗಣಿಸಿದ್ದಾರೆ. ಪೊಲೀಸ್ ಮುಖ್ಯಸ್ಥರ ಪ್ರಕಾರ, ಶಂಕಿತನ ವಿರುದ್ಧ ಇನ್ನೂ ಪ್ರಕರಣ ದಾಖಲಾಗಿಲ್ಲ. 911 ಕರೆ ಸಮಯದಲ್ಲಿ, ಆ ಸಮಯದಲ್ಲಿ ಛೇದಾ ಮತ್ತು ಶಾ ಮಾತ್ರ ಕೋಣೆಯಲ್ಲಿದ್ದರು ಎಂದು ಅವರು ಹೇಳಿದರು.
Published On - 12:01 pm, Thu, 6 October 22