Danish Siddiqui: ಅಫ್ಘಾನ್ ಸೇನೆ- ತಾಲಿಬಾನ್ ಉಗ್ರರ ಸಂಘರ್ಷದಲ್ಲಿ ಭಾರತದ ಫೋಟೋ ಜರ್ನಲಿಸ್ಟ್​ ಡ್ಯಾನಿಶ್​ ಸಿದ್ಧಿಕಿ ಹತ್ಯೆ

| Updated By: ಸುಷ್ಮಾ ಚಕ್ರೆ

Updated on: Jul 16, 2021 | 2:23 PM

ಅಫ್ಘಾನಿಸ್ತಾನ ಸೇನೆ ಮತ್ತು ತಾಲಿಬಾನ್ ಉಗ್ರರ ನಡುವೆ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತದ ಫೋಟೋಜರ್ನಲಿಸ್ಟ್ ಡ್ಯಾನಿಶ್​ ಸಿದ್ಧಿಕಿ ಹತ್ಯೆಗೀಡಾಗಿದ್ದಾರೆ.

Danish Siddiqui: ಅಫ್ಘಾನ್ ಸೇನೆ- ತಾಲಿಬಾನ್ ಉಗ್ರರ ಸಂಘರ್ಷದಲ್ಲಿ ಭಾರತದ ಫೋಟೋ ಜರ್ನಲಿಸ್ಟ್​ ಡ್ಯಾನಿಶ್​ ಸಿದ್ಧಿಕಿ ಹತ್ಯೆ
ಡ್ಯಾನಿಶ್ ಸಿದ್ಧಿಕಿ
Follow us on

ನವದೆಹಲಿ: ಅಫ್ಘಾನಿಸ್ತಾನದಲ್ಲಿ ನಡೆದ ಸಂಘರ್ಷದಲ್ಲಿ ಭಾರತದ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್​ ಡ್ಯಾನಿಶ್ ಸಿದ್ಧಿಕಿ ಅವರನ್ನು ಹತ್ಯೆ ಮಾಡಲಾಗಿದೆ. ಅಫ್ಘಾನ್​ನ ಕಂದಹಾರ್ ನಗರದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ವರದಿ ಮಾಡಲು ತೆರಳಿದ್ದರು. ಅಫ್ಘಾನಿಸ್ತಾನ ಸೇನೆಯ ವಿಶೇಷ ದಳ ಮತ್ತು ತಾಲಿಬಾನ್ ಉಗ್ರರ ನಡುವೆ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ಡ್ಯಾನಿಶ್​ ಸಿದ್ಧಿಕಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಡ್ಯಾನಿಶ್ ಸಿದ್ಧಿಕಿ ಸಾವಿಗೆ ಅಫ್ಘಾನಿಸ್ತಾನದ ಭಾರತೀಯ ರಾಯಭಾರಿ ಫರೀದ್ ಮಮುಂಡ್ಜೆ ಸಂತಾಪ ಸೂಚಿಸಿದ್ದಾರೆ. ನನ್ನ ಸ್ನೇಹಿತನಂತಿದ್ದ ಡ್ಯಾನಿಶ್​ ಸಿದ್ಧಿಕಿಯನ್ನು ನಿನ್ನೆ ಹತ್ಯೆ ಮಾಡಲಾಗಿದೆ. ಭಾರತೀಯ ಪತ್ರಕರ್ತನಾಗಿದ್ದ ಈತ ಪುಲಿಟ್ಜೆರ್ ಪ್ರಶಸ್ತಿಯನ್ನು ಪಡೆದಿದ್ದರು. ಅಫ್ಘಾನ್ ಸೇನಾಪಡೆಯ ಜೊತೆಗೆ ವರದಿಗೆ ಹೋಗಿದ್ದಾಗ ತಾಲಿಬಾನ್ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಆತ ಕಬೂಲ್​ಗೆ ತೆರಳುವ 2 ವಾರಗಳಿಗೂ ಮೊದಲು ನಾನು ಆತನನ್ನು ಭೇಟಿಯಾಗಿದ್ದೆ. ಆತನ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

Reuter ಸುದ್ದಿ ಮಾಧ್ಯಮದಲ್ಲಿ ಫೋಟೋ ಜರ್ನಲಿಸ್ಟ್ ಆಗಿದ್ದ ಡ್ಯಾನಿಶ್​ ಸಿದ್ಧಿಕಿ ಅಫ್ಘಾನಿಸ್ತಾನದ ಸೇನಾ ಪಡೆ ಮತ್ತು ತಾಲಿಬಾನ್ ನಡುವೆ ನಡೆಯುತ್ತಿದ್ದ ದಾಳಿಯ ವೇಳೆ ಅಲ್ಲಿದ್ದರು. 2018ರಲ್ಲಿ ಡ್ಯಾನಿಶ್​ ರೋಹಿಂಗ್ಯ ನಿರಾಶ್ರಿತರ ಬಿಕ್ಕಟ್ಟಿನ ಬಗ್ಗೆ ತೆಗೆದ ಫೋಟೋ ಮತ್ತು ಡಾಕ್ಯುಮೆಂಟರಿಗೆ ಪ್ರತಿಷ್ಠಿತ ಪುಲಿಟ್ಜೆರ್ ಪ್ರಶಸ್ತಿಯನ್ನು ಪಡೆದಿದ್ದರು.

ಅಫ್ಘಾನ್ ಸೇನಾಪಡೆ ಮತ್ತು ತಾಲಿಬಾನ್ ಉಗ್ರರ ನಡುವಿನ ಸಂಘರ್ಷದ ಬಗ್ಗೆ ವಿಶೇಷ ವರದಿ ಮಾಡಲು ತೆರಳಿದ್ದಾಗ ನಿನ್ನೆ ರಾತ್ರಿ ಡ್ಯಾನಿಶ್ ಸಿದ್ಧಿಕಿ ಹತ್ಯೆಗೀಡಾಗಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ಪೌರತ್ವ ನಿಷೇಧ ಕಾಯ್ದೆಯ ವೇಳೆ ನಡೆದ ಗಲಭೆ ಸಂದರ್ಭದಲ್ಲೂ ಡ್ಯಾನಿಶ್ ಸಿದ್ಧಿಕಿ ಸೆರೆಹಿಡಿದಿದ್ದ ಫೋಟೋಗಳು ಮೆಚ್ಚುಗೆಗೆ ಪಾತ್ರವಾಗಿದ್ದವು.

(Indian photojournalist Danish Siddiqui killed in Afghanistan’s Kandahar Clashes)

Published On - 2:21 pm, Fri, 16 July 21