ಇದು ಟಾಪ್ ಸೀಕ್ರೆಟ್… ಆಪರೇಷನ್ ಸಿಂದೂರದಿಂದ ಹಲವರ ಬಣ್ಣ ಬಯಲು; ಅಮೆರಿಕ ನಡುಗಲು ನಿಜ ಕಾರಣ ಏನು ಗೊತ್ತಾ?

India's Operation Sindoor: How It Rattled Pakistan & America: ಭಾರತದ ಆಪರೇಷನ್ ಸಿಂದೂರದ ಬಗ್ಗೆ ಕೆಲ ಭಾರತೀಯರು ಅಪಹಾಸ್ಯ ಮಾಡುತ್ತಿರುವುದುಂಟು. ಅಮೆರಿಕಕ್ಕೆ ಹೆದರಿ ಭಾರತ ಕದನ ವಿರಾಮಕ್ಕೆ ಒಪ್ಪಿತು ಎಂದು ಹಂಗಿಸುವವರಿದ್ದಾರೆ. ಆದರೆ, ವಾಸ್ತವವಾಗಿ ಅಲ್ಲಿ ನಡೆದಿರುವ ಬೆಳವಣಿಗೆ ಇತಿಹಾಸ ಪುಟಗಳಲ್ಲಿ ದಾಖಲಾಗುವಂಥವು. ಅಮೆರಿಕದಂಥ ಅಮೆರಿಕವೇ ಬೆಚ್ಚಿಬೀಳುವ ರೀತಿಯಲ್ಲಿ ಭಾರತ ಮರ್ಮಾಘಾತ ಕೊಟ್ಟಿತ್ತು... ಇದರ ಸ್ವಾರಸ್ಯಕರ ಕಥೆ ಇಲ್ಲಿದೆ...

ಇದು ಟಾಪ್ ಸೀಕ್ರೆಟ್... ಆಪರೇಷನ್ ಸಿಂದೂರದಿಂದ ಹಲವರ ಬಣ್ಣ ಬಯಲು; ಅಮೆರಿಕ ನಡುಗಲು ನಿಜ ಕಾರಣ ಏನು ಗೊತ್ತಾ?
ಆಪರೇಷನ್ ಸಿಂದೂರ್

Updated on: May 14, 2025 | 1:07 PM

ನವದೆಹಲಿ, ಮೇ 14: ಭಾರತದ ಆಪರೇಷನ್ ಸಿಂದೂರ (Operation Sindoor) ಇಡೀ ವಿಶ್ವದ ಗಮನ ಸೆಳೆದಿರುವುದು ಹೌದು. ಮೂರ್ಖರು ಹೇಗಾದರೂ ಹೊಡೆದಾಡಿಕೊಂಡು ಸಾಯಲಿ ಎಂದು ನಿರುಮ್ಮಳನಾಗಿ ಇದ್ದ ಅಮೆರಿಕ ರಾತ್ರೋರಾತ್ರಿ ಕದನ ವಿರಾಮಕ್ಕೆ ಕಾಲು ಕೆದರಿ ಬಂದಿದ್ದು ಯಾರಿಗಾದರೂ ಅಚ್ಚರಿಯಾಗದೇ ಇರದು. ಇನ್ನೊಂದೆಡೆ, ಕದನ ವಿರಾಮಕ್ಕೆ (ceasefire) ಯಾಕೆ ಒಪ್ಪಿಕೊಂಡೆ ಎಂದು ಪಾಕಿಸ್ತಾನವನ್ನು ಚೀನಾ ತರಾಟೆಗೆ ತೆಗೆದುಕೊಂಡಿತು. ಭಾರತದ ದಿಢೀರ್ ಭೀಕರ ದಾಳಿಗೆ ಪತರುಗುಟ್ಟಿಹೋಗಿದ್ದ ಪಾಕಿಸ್ತಾನಕ್ಕೆ ಏನು ಮಾಡಬೇಕು ಎಂದು ಗೊತ್ತಾಗದೆ ದಿಕ್ಕೇತೋಚದ ಸ್ಥಿತಿಯಲ್ಲಿ ಇತ್ತು ಎಂದು ಪರಿಣಿತರು ಹೇಳುತ್ತಾರೆ.

ಅಮೆರಿಕ ಬೆಚ್ಚಿಬಿದ್ದ ಕಥೆ… ಇದು ಟಾಪ್ ಸೀಕ್ರೆಟ್ ಅಂತೆ

ಇಲ್ಲಿ ಬರೆಯಲಾಗಿರುವ ಕೆಲ ಅಂಶಗಳು ಅಂತೆ ಕಂತೆ ಎನಿಸಬಹುದು. ಟಾಪ್ ಸೀಕ್ರೆಟ್ ಆಗಿ ಕಡತಗಳಲ್ಲಿ ಹುದುಗಿಹೋಗುವ ಈ ವಿಚಾರಗಳು ಮುಂಬರುವ ದಶಕಗಳಲ್ಲಿ ವಿಕಿಲೀಕ್ಸ್ ಮಾದರಿಯಲ್ಲಿ ಯಾವುದಾದರೂ ರೂಪದಲ್ಲಿ ಹೊರಬರಬಹುದು. ಈ ವಿಷಯ ಏನೆಂದರೆ, ಮೇ 9-10ರಂದು ಭಾರತದ ಇಡೀ ಪಾಕಿಸ್ತಾನವೇ ಬೆಚ್ಚಿಬೀಳುವ ರೀತಿಯಲ್ಲಿ ಪೆಟ್ಟು ಕೊಟ್ಟಿತ್ತು.

ಪಾಕಿಸ್ತಾನದ ವಾಯುನೆಲೆಗಳಿರುವ 10-11 ಸ್ಥಳಗಳ ಮೇಲೆ ಭಾರತ ಬಹಳ ಅಲ್ಪ ಅವಧಿಯಲ್ಲಿ ದಾಳಿ ಮಾಡಿ ಚಿಂದಿ ಉಡಾಯಿಸಿತ್ತು. ಒಂದು ಪರಮಾಣು ಶಕ್ತ ದೇಶದ 11 ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿದ್ದು ಇತಿಹಾಸದಲ್ಲಿ ಭಾರತವೇ ಮೊದಲು. ತಾನು ಯಾವುದಕ್ಕೂ ಜಗ್ಗುವುದಿಲ್ಲ ಎನ್ನುವ ಭಾರತದ ಕೆಚ್ಚು ಇಡೀ ಜಗತ್ತಿಗೆ ಸಾಬೀತಾಗಿತ್ತು.

ಇದನ್ನೂ ಓದಿ: ಭಾರತೀಯ ಸೇನೆ, ಮೇಕ್​ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಶ್ಲಾಘಿಸಿದ ಅಮೆರಿಕ ರಕ್ಷಣಾ ತಜ್ಞ ಜಾನ್ ಸ್ಪೆನ್ಸರ್

ಇಷ್ಟೇ ಆಗಿದ್ದರೆ ಅಮೆರಿಕ ಕಣ್ಣು ಕಿರಿದು ಮಾಡಿಕೊಂಡು ಸುಮ್ಮನಾಗುತ್ತಿತ್ತು. ಆದರೆ, ಪಾಕಿಸ್ತಾನದ ಜೇಕೋಬಾಬಾದ್ (Jacobabad) ಮತ್ತು ಕಿರಾನಾ ಹಿಲ್ಸ್ (Kirana Hills) ಮೇಲೆ ದಾಳಿಗಳಾಗಿದ್ದು ಅಮೆರಿಕ ಬೆಚ್ಚಿಬೀಳುವಂತಾಯಿತು. ಭಾರತದ ಡಿಜಿಎಂಒ ಅವರು ಕಿರಾನ ಹಿಲ್ಸ್ ಮೇಲೆ ದಾಳಿ ಮಾಡಿಲ್ಲ ಎಂದರಾದರೂ ಅಲ್ಲಿ ಭಾರೀ ಸ್ಫೋಟವಾದ ಸಂಗತಿ ಇಡೀ ಪಾಕಿಸ್ತಾನೀಯರಿಗೆ ಗೊತ್ತಾಗಿದ್ದು ಹೌದು.

ಜೇಕಬಾಬಾದ್ ಮತ್ತು ಸರ್ಗೋದಾ ನೆಲೆಗಳಿಗಿದೆ ಅಮೆರಿಕದ ನಂಟು…

ಪಾಕಿಸ್ತಾನದ ಈ ಎರಡು ಏರ್​​ಬೇಸ್ ಮೇಲೆ ಭಾರತ ದಾಳಿ ಮಾಡಿದರೆ ಅಮೆರಿಕಕ್ಕೆ ಆಗುವಂಥದ್ದೇನು? ಜೇಕಬಾಬಾದ್ ವಾಯುನೆಲೆಯು ಅಮೆರಿಕ ಮತ್ತು ನ್ಯಾಟೋ ಕಾರ್ಯಾಚರಣೆಯ ಪ್ರಮುಖ ಕೇಂದ್ರಗಳಲ್ಲಿ ಒಂದು. ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆ ಮಾಡಲು ಈ ನೆಲೆಯನ್ನು ಅಮೆರಿಕ ಉಪಯೋಗಿಸುತ್ತಿತ್ತು.

ಕಿರಾನ ಹಿಲ್ಸ್​​​ನಲ್ಲಿ ಅಡಗಿದೆ ಅಮೆರಿಕದ ಗುಟ್ಟು

ಇದಕ್ಕಿಂತಲೂ ಮಹತ್ವದ್ದು ಕಿರಾನ ಹಿಲ್ಸ್​​ನದ್ದು. ಇಲ್ಲಿಯೇ ಸರ್ಗೋಧಾ ವಾಯುನೆಲೆ ಇದೆ. ಅಮೆರಿಕದ ಎಫ್-16 ಯುದ್ಧವಿಮಾನಗಳನ್ನು ಇಲ್ಲಿಯೇ ಇಡಲಾಗಿದೆ. ಭಾರತದ ಕ್ಷಿಪಣಿಗಳ ಹೊಡೆತಕ್ಕೆ ಹಲವು ಎಫ್-16 ವಿಮಾನಗಳು ನಾಶಗೊಂಡಿವೆ ಎನ್ನಲಾಗಿದೆ.

ಇದನ್ನೂ ಓದಿ: ಭಾರತೀಯ ಸೇನೆಯ ಹೊಸ ಕಾರ್ಯಾಚರಣೆ ‘ಆಪರೇಷನ್ ಕೆಲ್ಲರ್’ ಏನಿದು?

ಎಫ್​-16 ವಿಮಾನ ಹೋಗಿದ್ದು ಅಮೆರಿಕಕ್ಕೆ ಹೆಚ್ಚಿನ ಚಿಂತೆಯ ವಿಷಯ ಆಗುತ್ತಿರಲಿಲ್ಲ. ರಾತ್ರೋರಾತ್ರಿ ತಲೆಕೆಡಿಸಿಕೊಳ್ಳುವಂತೆ ಮಾಡಿದ್ದು ಕಿರಾನ ಹಿಲ್ಸ್​​ನಲ್ಲಿ ನಡೆದ ಘಟನೆ. ಇಲ್ಲಿದೆ ಅಮೆರಿಕದ ಟಾಪ್ ಸೀಕ್ರೆಟ್ ವಿಚಾರ. ಅಮೆರಿಕ ಮತ್ತು ಪಾಕಿಸ್ತಾನಕ್ಕೆ ಮಾತ್ರವೇ ಗೊತ್ತಿರುವ ರಹಸ್ಯ ಇಲ್ಲಿದೆ. ಇಲ್ಲಿ ಅಮೆರಿಕ ಬಹಳ ರಹಸ್ಯವಾಗಿ ಅಣ್ವಸ್ತ್ರಗಳನ್ನು ಸಂಗ್ರಹಿಸಿ ಇಟ್ಟಿದೆಯಂತೆ. ಚೀನಾ ಮತ್ತು ರಷ್ಯಾ ಮೇಲೆ ಉಪಯೋಗಿಸಲೆಂದು ಇಲ್ಲಿ ಅಮೆರಿಕವು ಪರಮಾಣು ಅಸ್ತ್ರಗಳನ್ನು ಅಡಗಿಸಿಕೊಟ್ಟಿದೆ.

ಎದ್ದುಬಿದ್ದು ಓಡಿ ಬಂದ ದೊಡ್ಡಣ್ಣ

ಪಾಕಿಸ್ತಾನ ತನ್ನ ಪರಮಾಪ್ತ ಮಿತ್ರನಾದ ಚೀನಾಗೂ ಕೂಡ ಈ ವಿಚಾರವನ್ನು ತಿಳಿಸಿಲ್ಲ. ಇಂಥ ಕಿರಾನ ಹಿಲ್ಸ್ ಮೇಲೆ ಭಾರತ ಪ್ರಬಲ ಕ್ಷಿಪಣಿ ದಾಳಿ ಮಾಡಿತ್ತು. ಇಲ್ಲಿರುವ ಪರಮಾಣು ಸಂಗ್ರಹಕ್ಕೆ ಹಾನಿಯಾಗಿದೆಯಂತೆ. ವಿಕಿರಣಗಳು ಸೋರಿಕೆಯಾಗುತ್ತಿವೆ ಎಂದು ವರದಿಗಳು ಹೇಳುತ್ತಿವೆ. ಇದೇ ಕಾರಣಕ್ಕೆ ಅಮೆರಿಕವು ತಜ್ಞರನ್ನು ಇಲ್ಲಿಗೆ ಕಳುಹಿಸಿ ವಿಕಿರಣ ಸೋರಿಕೆಯಾಗದಂತೆ ತಡೆಯಲು ಕ್ರಮ ಕೈಗೊಂಡಿದೆ. ಈ ಯುದ್ಧವನ್ನು ಹೀಗೇ ಮುಂದುವರಿಯಲು ಬಿಟ್ಟರೆ ಜಗತ್ತಿನ ಮುಂದೆ ತಾನು ಇನ್ನಷ್ಟು ಬೆತ್ತಲಾಗಬಹುದು ಎನ್ನುವ ಭಯದಲ್ಲಿ ಅಮೆರಿಕವು ಕದನ ವಿರಾಮ ಮಾಡಿಕೊಳ್ಳುವಂತೆ ಪಾಕಿಸ್ತಾನಕ್ಕೆ ತಿಳಿಸಿತು ಎಂದು ಹೇಳಲಾಗುತ್ತಿದೆ.

ಕಿರಾನ ಹಿಲ್ಸ್ ಮೇಲೆ ಘಾತವಾಗಿರುವುದು ಅಮೆರಿಕಕ್ಕೆ ಎರಡು ಆತಂಕ ತಂದಿದೆ. ಒಂದು, ತನ್ನ ರಹಸ್ಯ ಪರಮಾಣು ನೆಲೆ ಬಹಿರಂಗಗೊಳ್ಳುತ್ತದೆ. ಇನ್ನೊಂದು, ತನ್ನ ಶತ್ರುಗಳಾದ ಚೀನಾ ಮತ್ತು ರಷ್ಯಾ ಮುನ್ನೆಚ್ಚರಿಕೆಯ ಕ್ರಮಕ್ಕೆ ಮುಂದಾಗಬಹುದು.

ಇದನ್ನೂ ಓದಿ: ಅಮೆರಿಕ, ಚೀನಾ ನೆರಳಲ್ಲಿರುವ ದೇಶಗಳಿಂದ ಭಾರತದ ಬ್ರಹ್ಮೋಸ್ ಕ್ಷಿಪಣಿ ಪಡೆಯಲು ಆಸಕ್ತಿ

ಪಾಕಿಸ್ತಾನಕ್ಕೆ ಈಗ ಆಪ್ತಮಿತ್ರನ ಕೋಪಕ್ಕೆ ಗುರಿಯಾಗುವ ಸಂಕಟ

ಅಮೆರಿಕದ ಅಣ್ವಸ್ತ್ರಗಳನ್ನು ಒಡಲಲ್ಲಿ ಇಟ್ಟುಕೊಂಡಿದ್ದರೂ ಪಾಕಿಸ್ತಾನವು ಚೀನಾಗೆ ಒಂದೂ ಮಾತು ಹೇಳಿಲ್ಲ. ಇದರಿಂದ ಚೀನಾ ತನ್ನ ಮೇಲೆ ಮುನಿಸಿಕೊಳ್ಳಬಹುದು ಎನ್ನುವ ಭಯ ಪಾಕಿಸ್ತಾನಕ್ಕೆ ಶುರುವಾಗಿದೆ.

ಯುದ್ಧ ಮುಂದುವರಿಯಲಿ ಎನ್ನುವ ಹಪಾಹಪಿಯಲ್ಲಿದ್ದ ಚೀನಾ, ಟರ್ಕಿ

ಭಾರತ ಮತ್ತು ಪಾಕಿಸ್ತಾನ ಯುದ್ಧದಿಂದ ಅತಿಹೆಚ್ಚು ಖುಷಿಯಾಗಿದ್ದುದು ಚೀನಾ ಮತ್ತು ಟರ್ಕಿ. ಈ ಎರಡೂ ದೇಶಗಳು ಭಾರತ ವಿರೋಧಿಗಳೆಂಬುದು ಒಂದು ಸಂಗತಿ. ಹಾಗೆಯೇ, ಇವೆರಡರ ಮಿಲಿಟರಿ ಆಯುಧಗಳಿಗೆ ಪಾಕಿಸ್ತಾನ ದೊಡ್ಡ ಮಾರುಕಟ್ಟೆ. ಅದರಲ್ಲೂ ಟರ್ಕಿ ನಿರ್ಮಿತ ಡ್ರೋನ್​ಗಳನ್ನು ಪಾಕಿಸ್ತಾನ ಯಥೇಚ್ಛವಾಗಿ ಬಳಸಿತ್ತು. ಇದು ಖಾಲಿಯಾದರೆ ಇನ್ನಷ್ಟು ಡ್ರೋನ್​​ಗಳನ್ನು ಕಳುಹಿಸಬಹುದು ಎಂಬುದು ಟರ್ಕಿಯ ಉಮೇದು.

ಚೀನಾಗೆ ಖುಷಿ ಕೊಟ್ಟಿತ್ತು ಭಾರತ ಪಾಕಿಸ್ತಾನ ಯುದ್ಧ

ಇನ್ನು, ಸರ್ಗೋದಾ ವಾಯುನೆಲೆಯಲ್ಲಿದ್ದ ಕೆಲ ಎಫ್-16 ಯುದ್ಧವಿಮಾನಗಳು ನಾಶವಾಗಿದ್ದು ಚೀನಾಗೆ ಖುಷಿಕೊಟ್ಟಿತು. ಪಾಕಿಸ್ತಾನದಲ್ಲಿ ದಶಕಗಳಿಂದ ಉಳಿದುಕೊಂಡು ಬಂದಿರುವ ಎಫ್-16 ಜೆಟ್ ಇತ್ಯಾದಿ ಅಮೆರಿಕನ್ ಶಸ್ತ್ರಾಸ್ತ್ರಗಳು ಖಾಲಿ ಆಗಲಿ ಎಂಬುದು ಚೀನಾದ ಆಶಯ.

ಇದನ್ನೂ ಓದಿ: ವ್ಯಾಪಾರದ ಚಾಕಲೊಟ್ ತೋರಿಸಿ ಭಾರತ ಪಾಕಿಸ್ತಾನದ ಜಗಳ ನಿಲ್ಲಿಸಿತಾ ಅಮೆರಿಕ?; ಟ್ರಂಪ್ ಹೇಳಿದ್ದು ಸುಳ್ಳೆನ್ನುತ್ತಿದೆ ಸರ್ಕಾರ

ಈಗಾಗಲೇ ಪಾಕಿಸ್ತಾನದ ಶೇ. 80ಕ್ಕಿಂತ ಹೆಚ್ಚು ಶಸ್ತ್ರಾಸ್ತ್ರಗಳು ಚೀನಾದಿಂದ ಬಂದಂಥವೇ. ಪಾಕಿಸ್ತಾನದಲ್ಲಿ ಅಮೆರಿಕದ ಉಪಸ್ಥಿತಿಯೇ ಬೇಡ. ಇಡೀ ಪಾಕಿಸ್ತಾನವೇ ತನ್ನ ಕಪಿಮುಷ್ಠಿಯಲ್ಲಿರಲಿ ಎಂಬುದು ಚೀನಾ ದುರಾಲೋಚನೆ. ಹೀಗಾಗಿ, ಪಾಕಿಸ್ತಾನ ಕದನ ವಿರಾಮ ಘೋಷಿಸಿದ್ದು ಚೀನಾಗೆ ಇಷ್ಟವಿರಲಿಲ್ಲ. ಅಮೆರಿಕದ ಮಾತು ಕೇಳಿ ಸೀಸ್​​ಫೈರ್ ಮಾಡಿಕೊಂಡಿದ್ದು ಯಾಕೆ ಎಂದು ಪಾಕಿಸ್ತಾನವನ್ನು ಚೀನಾ ತರಾಟೆಗೆ ತೆಗೆದುಕೊಂಡಿತಂತೆ.

ಆಪರೇಷನ್ ಸಿಂದೂರ್, ಭಾರತದ ಖದರ್

ಒಟ್ಟಾರೆ, ಭಾರತ ನಡೆಸಿದ ಆಪರೇಷನ್ ಸಿಂದೂರ್ ವಿಶ್ವದ ಮುಂದೆ ಭಾರತದ ಖದರ್ ತೋರಿಸಿದಂತೂ ಸತ್ಯ. ಭಾರತವನ್ನು ಹಣ್ಣುಗಾಯಿ, ನೀರುಗಾಯಿ ಮಾಡಿದ್ದೇವೆ ಎಂದು ಪಾಕಿಸ್ತಾನದಲ್ಲಿ ಏನೇ ನೆರೇಟಿವ್ ಇದ್ದರೂ ಇತಿಹಾಸ ಪುಟದಲ್ಲಿ ಆಪರೇಷನ್ ಸಿಂದೂರ್ ಮತ್ತು ಭಾರತದ ಪರಾಕ್ರಮ ದಾಖಲಾಗುವುದು ನಿಶ್ಚಿತ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ