Mrs World 2022: 21 ವರ್ಷಗಳ ಬಳಿಕ ಭಾರತೀಯ ಮಹಿಳೆಗೆ ಒಲಿದ ಮಿಸೆಸ್ ವರ್ಲ್ಡ್ ಪಟ್ಟ

ಮಿಸೆಸ್​ ವರ್ಲ್ಡ್​ 2022 ಸ್ಪರ್ಧೆಯಲ್ಲಿ ಭಾರತದ ಮಹಿಳೆ ವಿಜೇತರಾಗಿದ್ದು, ಇದರೊಂದಿಗೆ 21 ವರ್ಷಗಳ ಬಳಿಕ ಭಾರತಕ್ಕೆ ಮತ್ತೆ ಮಿಸೆಸ್ ವರ್ಲ್ಡ್ ಪಟ್ಟ ಒಲಿದುಬಂದಿದೆ.

Mrs World 2022: 21 ವರ್ಷಗಳ ಬಳಿಕ ಭಾರತೀಯ ಮಹಿಳೆಗೆ ಒಲಿದ ಮಿಸೆಸ್ ವರ್ಲ್ಡ್ ಪಟ್ಟ
ಮಿಸೆಸ್​ ವರ್ಲ್ಡ್​ 2022 ಆಗಿ ಭಾರತದ ಸರ್ಗಂ ಕೌಶಲ್ ಆಯ್ಕೆ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 18, 2022 | 11:55 PM

ನವದೆಹಲಿ: ಮಿಸೆಸ್​ ವರ್ಲ್ಡ್​ 2022 (Mrs World 2022) ಆಗಿ ಭಾರತದ ಸರ್ಗಮ್ ಕೌಶಲ್ ಆಯ್ಕೆ ಆಗಿದ್ದು, 21 ವರ್ಷಗಳ ಬಳಿಕ ಭಾರತಕ್ಕೆ ಮತ್ತೆ ಮಿಸೆಸ್ ವರ್ಲ್ಡ್ ಪಟ್ಟ ಒಲಿದುಬಂದಂತಾಗಿದೆ. ಅಮೆರಿಕದ (United States of America) ಲಾಸ್ ವೇಗಾಸ್‌ನಲ್ಲಿ (Las Vegas) ನಡೆದ ಗಾಲಾ ಸಮಾರಂಭದಲ್ಲಿ 63 ದೇಶಗಳನ್ನು ಹಿಂದಿಕ್ಕಿ ಜಮ್ಮು-ಕಾಶ್ಮೀರದ ಸರ್ಗಮ್ ಕೌಶಲ್ ವಿಜೇತರಾಗಿದ್ದಾರೆ.

ಇದನ್ನೂ ಓದಿ: ಮಿಸ್ ಯೂನಿವರ್ಸ್​ ಮತ್ತು ಮಿಸ್ ವರ್ಲ್ಡ್​ ಏನು ವ್ಯತ್ಯಾಸ? ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ?

ಮಿಸೆಸ್​ ವರ್ಲ್ಡ್ 2021 ಆಗಿದ್ದ ಶಾಯ್ಲಿನ್ ಫೋರ್ಡ್ ಅವರು ಸರ್ಗಂ ಕೌಶಲ್​ಗೆ ಮಿಸ್ ವರ್ಲ್ಡ್ ಕಿರೀಟವನ್ನು ತೊಡಿಸಿದರು. ಮಿಸೆಸ್ ಪಾಲಿನೇಷ್ಯಾ ಮತ್ತು ಮಿಸೆಸ್ ಕೆನಡಾ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್​ ಆದರು. ಇನ್ನು 21 ವರ್ಷಗಳ ಬಳಿಕ ಮಿಸೆಸ್​ ವರ್ಲ್ಡ್ ಕಿರೀಟ ಮರಳಿ ನಮಗೆ ಸಿಕ್ಕಿದೆ ಎಂದು ಸರ್ಗಂ ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

2001ರಲ್ಲಿ ನಟಿ-ರೂಪದರ್ಶಿ ಅದಿತಿ ಗೋವಿತ್ರಿಕರ್ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸಿ ಮಿಸೆಸ್ ವರ್ಲ್ಡ್ ಗರಿ ಗಳಿಸಿದ್ದರು. ಅದಾಗ ಬಳಿಕ ಈಗಲೇ ಮಿಸೆಸ್ ವರ್ಲ್ಡ್ ಭಾರತಕ್ಕೆ ಸಿಕ್ಕಿರುವುದು. ಜಮ್ಮು-ಕಾಶ್ಮೀರದ ಸರ್ಗಂ ಈ ತಿಂಗಳ ಜೂನ್​ನಲ್ಲಿ ಮಿಸೆಸ್ ಇಂಡಿಯಾ ವರ್ಲ್ಡ್​ 2022-23 ಆಗಿ ಆಯ್ಕೆ ಆಗಿದ್ದರು. ಈ ಮೂಲಕ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಮಿಸೆಸ್ ವರ್ಲ್ಡ್ 2022 ಆಗಿ ಹೊರಹೊಮ್ಮಿದ್ದಾರೆ.

ಶ್ರೀಮತಿ ಸರ್ಗಮ್ ಕೌಶಲ್ ಅವರ ಇನ್ಸ್ಟಾಗ್ರಾಮ್‌ ಪೋಸ್ಟ್‌ಗಳ ಪ್ರಕಾರ, ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಅವರು ಈ ಹಿಂದೆ ವಿಶಾಖಪಟ್ಟಣದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ ಮತ್ತು ಅವರ ಪತಿ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಹ ಹಂಚಿಕೊಂಡಿದ್ದಾರೆ.

ವಿವಾಹಿತೆಯರಿಗೆಂದೇ ಆಯೋಜಿಸಲಾಗುವ ಈ ಮಿಸೆಸ್ ವರ್ಲ್ಡ್ ಸ್ಪರ್ಧೆ 1984ರಲ್ಲಿ ಆರಂಭಗೊಂಡಿತ್ತು. ಆರಂಭದಲ್ಲಿ ಇದನ್ನು ಮಿಸೆಸ್​ ವುಮನ್ ಆಫ್​ ದ ವರ್ಲ್ಡ್ ಎಂದು ಕರೆಯಲಾಗುತ್ತಿತ್ತು. ಬಳಿಕ 1988ರಲ್ಲಿ ಇದನ್ನು ಮಿಸೆಸ್ ವರ್ಲ್ಡ್ ಎಂದು ಮರು ನಾಮಕರಣ ಮಾಡಲಾಯಿತು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು