ಡೊನಾಲ್ಡ್ ಟ್ರಂಪ್ ವಿರುದ್ಧ ಜಾರಿಯಾಯ್ತು ಅರೆಸ್ಟ್ ವಾರಂಟ್

ಡೊನಾಲ್ಡ್ ಟ್ರಂಪ್ ವಿರುದ್ಧ ಜಾರಿಯಾಯ್ತು ಅರೆಸ್ಟ್ ವಾರಂಟ್
ಡೊನಾಲ್ಡ್​ ಟ್ರಂಪ್ (ಸಂಗ್ರಹ ಚಿತ್ರ)

ನವೆಂಬರ್​ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲುವ ಕನಸು ಕಾಣುತ್ತಿರುವ ಸದ್ಯದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ದಶ ದಿಕ್ಕುಗಳಿಂದಲೂ ಪ್ರಚಾರಕ್ಕೆ ಬದಲು ಅಪಚಾರವೇ ಹೆಚ್ಚಾಗಿ ಸಿಗುತ್ತಿದೆ. ಈ ಮಧ್ಯೆ ಇರಾನ್​ ಸಹ ತನ್ನ ಕೈಲಾದ ಮಟ್ಟಿಗೆ ಟ್ರಂಪ್​ ವಿರುದ್ಧ ಗುಡುಗಿದೆ.

ಇರಾನ್ ಸೇನಾ ಕಮಾಂಡರ್​ ಖ್ವಾಸಿಂ ಸುಲೇಮಾನಿ ಹತ್ಯೆ ಪ್ರಕರಣ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ಇರಾನ್ ಸರ್ಕಾರ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ. ಡೊನಾಲ್ಡ್​ ಟ್ರಂಪ್ ಸೇರಿದಂತೆ ಇತರರನ್ನು ಬಂಧಿಸಲು ಇಂಟರ್​ಪೋಲ್ ನೆರವನ್ನು ಕೇಳಿದೆ.

​ಈ ಹಿಂದೆ ಖ್ವಾಸಿಂ ಸುಲೇಮಾನಿಯನ್ನ ಹತ್ಯೆ ಮಾಡಿಸಿದ್ದು ತಾನೇ ಎಂದು ಡೊನಾಲ್ಡ್​ ಟ್ರಂಪ್ ಹೇಳಿಕೊಂಡಿದ್ದರು. ಹಾಗಾಗಿ ಟ್ರಂಪ್ ವಿರುದ್ಧ ಇರಾನ್ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ.