ಹಿಜಾಬ್ ವಿಷಯ ಇದೀಗ ಭಾರತದಲ್ಲಿ ಮಾತ್ರವಲ್ಲ ವಿವಿಧ ದೇಶಗಳಲ್ಲೂ ಸುದ್ದಿಯಲ್ಲಿದೆ. ಹಿಜಾಬ್ ಹಾಕಿಕೊಳ್ಳಲು ಅಮೆರಿಕದ ಸುದ್ದಿವಾಹಿನಿ ನಿರೂಪಕಿಯೊಬ್ಬರು ನಿರಾಕರಿಸಿದ ಕಾರಣ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಇಂಟರ್ವ್ಯೂ ರದ್ದುಪಡಿಸಿರುವ ಘಟನೆ ವರದಿಯಾಗಿದೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅಮೆರಿಕದ ಪತ್ರಕರ್ತೆ ಜೊತೆ ಸಂದರ್ಶನದಲ್ಲಿ ಭಾಗಿಯಾಗಬೇಕಾಗಿತ್ತು. ಆದರೆ, ಪತ್ರಕರ್ತೆ ಹಿಜಾಬ್ ಹಾಕಿಲ್ಲ ಎಂಬ ಕಾರಣಕ್ಕಾಗಿ ಸಂದರ್ಶನ ರದ್ದುಗೊಳಿಸಿದ್ದಾರೆ. ಅಂತಾರಾಷ್ಟ್ರೀಯ ಸುದ್ದಿವಾಹಿನಿ ನಿರೂಪಕಿ ಕ್ರಿಸ್ಟಿಯಾನೆ ಅಮನ್‌ಪೋರ್ ಜೊತೆ ಇಬ್ರಾಹಿಂ ರೈಸಿ ದಿಢೀರ್ ಆಗಿ ಸಂದರ್ಶನ ರದ್ದುಗೊಳಿಸಿದ್ದು, ಇದಕ್ಕೆ ಅವರು ಹಿಜಾಬ್ ಧರಿಸದಿರುವುದೇ ಕಾರಣ ಎನ್ನಲಾಗಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನ ನಡೆಯುತ್ತಿದ್ದು, ಅದರಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಭಾಗಿಯಾಗಿದ್ದರು. ಇದರ ಬೆನ್ನಲ್ಲೇ ಅವರು ಸಂದರ್ಶನವೊಂದಕ್ಕೆ ಅವರನ್ನು ಆಹ್ವಾನಿಸಲಾಗಿತ್ತು.
ಇರಾನ್ ಅಧ್ಯಕ್ಷ ಇಬ್ರಾಹಿಂಗಾಗಿ ಸುಮಾರು 40 ನಿಮಿಷಗಳ ಕಾಲ ಕಾಯಲಾಗಿತ್ತು, ಬಳಿಕ ಹಿಜಾಬ್ ಧರಿಸುವಂತೆ ಸಹಾಯಕರ ಬಳಿ ಹೇಳಿ ಕಳುಹಿಸಿದ್ದರು, ಆದರೆ ನಾನು ನಿರಾಕರಿಸಿದೆ, ಹಾಗಾಗಿ ಅವರು ಇಂಟರ್ವ್ಯೂ ನೀಡದೆ ಹೋಗಿದ್ದಾರೆ. ನ್ಯೂಯಾರ್ಕ್ನಲ್ಲಿ ಹಿಜಾಬ್ಗೆ ಸಂಬಂಧಿಸಿದಂತೆ ಯಾವುದೇ ನಿಯಮವಿಲ್ಲ ಎಂದು ನಿರೂಪಕಿ ಹೇಳಿದ್ದಾರೆ.
ಇರಾನ್ನಲ್ಲಿ ಹಿಜಾಬ್ ಕಾನೂನು ತುಂಬಾ ಕಠಿಣವಾಗಿದ್ದು, ಅದೇ ಕಾರಣಕ್ಕಾಗಿ ಕಳೆದ ಕೆಲ ದಿನಗಳ ಹಿಂದೆ ಮಹಿಳೆಯೋರ್ವಳು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಹಿಜಾಬ್ ಚಳವಳಿಯ ಬೆಂಕಿಯಲ್ಲಿ ಇರಾನ್ ಹೊತ್ತಿ ಉರಿಯುತ್ತಿದೆ.
ಇಡೀ ವಿಶ್ವವೇ ಅವರ ಅಮಾನವೀಯ ಮುಖವನ್ನು ನೋಡುತ್ತಿದೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಪಂಚದ ಮುಂದೆ ತಮ್ಮ ದೇಶದ ಉತ್ತಮ ಚಿತ್ರಣವನ್ನು ಇಟ್ಟುಕೊಳ್ಳುವ ಬದಲು ಸಂಪ್ರದಾಯವಾದಿ ಚಿಂತನೆಗೆ ಬದ್ಧರಾಗಿದ್ದಾರೆ ಎಂದು ನಿರೂಪಕಿ ಟ್ವೀಟ್ ಮಾಡಿದ್ದಾರೆ.
ಕ್ರಿಶ್ಚಿಯನ್ ಅಮನ್‌ಪೋರ್ ಎಂಬ ಸುದ್ದಿ ನಿರೂಪಕ ಸಿಎನ್‌ಎನ್ ಅಂತರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಅತ್ಯಂತ ಹಿರಿಯ ಪತ್ರಕರ್ತರು. ಅಮನ್‌ಪೋರ್ ಬ್ರಿಟನ್‌ನಲ್ಲಿ ಜನಿಸಿದರು, ಆಕೆಯ ತಂದೆ ಇರಾನ್ನವರು, ಅವರು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಸೈಡ್‌ಲೈನ್‌ನಲ್ಲಿ ಯುಎಸ್‌ನಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರೊಂದಿಗೆ ಸಂದರ್ಶನ ಆಯೋಜನೆಗೊಂಡಿತ್ತು.
ವಿವಿಧ ದೇಶಗಳ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ