Inside Story: ಭಾರತದಲ್ಲಿ ಗಣ್ಯರನ್ನು ಗುರಿಯಾಗಿಸಿ ಆತ್ಮಾಹುತಿ ಸ್ಪೋಟಕ್ಕೆ ಸಂಚು :ರಷ್ಯಾದಲ್ಲಿ ಐಸಿಎಸ್ ಉಗ್ರನ ಬಂಧನ, ಏನಿದರ ಹಕೀಕತ್ತು?

2022 ರಲ್ಲಿ, ನಾನು ಭಾರತಕ್ಕೆ ಹೊರಡಬೇಕಾದ ಸ್ಥಳದಿಂದ ನಾನು ರಷ್ಯಾಕ್ಕೆ ಹಾರಿಹೋದೆ, ಭಾರತದಲ್ಲಿ, ಅವರು ನನ್ನನ್ನು ಭೇಟಿಯಾಗಬೇಕು ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ್ದಕ್ಕಾಗಿ ಇಸ್ಲಾಮಿಕ್ ಸ್ಟೇಟ್ ಆದೇಶದ ಮೇರೆಗೆ ಭಯೋತ್ಪಾದಕ ದಾಳಿ ನಡೆಸಲು ನನಗೆ ಬೇಕಾದ ಎಲ್ಲಾ ವಸ್ತುಗಳನ್ನು ನೀಡಲಾಗಿತ್ತು -ಐಸಿಎಸ್‌ ವೀಡಿಯೊ ಸಂದೇಶ

Inside Story: ಭಾರತದಲ್ಲಿ ಗಣ್ಯರನ್ನು ಗುರಿಯಾಗಿಸಿ ಆತ್ಮಾಹುತಿ ಸ್ಪೋಟಕ್ಕೆ ಸಂಚು :ರಷ್ಯಾದಲ್ಲಿ ಐಸಿಎಸ್ ಉಗ್ರನ ಬಂಧನ, ಏನಿದರ ಹಕೀಕತ್ತು?
ಭಾರತದಲ್ಲಿ ಗಣ್ಯರನ್ನು ಗುರಿಯಾಗಿಸಿ ಆತ್ಮಾಹುತಿ ಸ್ಪೋಟಕ್ಕೆ ಸಂಚು -ರಷ್ಯಾದಲ್ಲಿ ಐಸಿಎಸ್ ಉಗ್ರನ ಬಂಧನ, ಏನಿದರ ಹಕೀಕತ್ತು?
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Aug 22, 2022 | 6:09 PM

ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ ಐಸಿಎಸ್ ಉಗ್ರನೊಬ್ಬನನ್ನು ರಷ್ಯಾದಲ್ಲಿ ಬಂಧಿಸಲಾಗಿದೆ. ಭಾರತದಲ್ಲಿ ಪ್ರವಾದಿ ಮೊಹಮ್ಮದ್ ಗೆ ಅಪಮಾನ ಮಾಡಲಾಗಿದೆ. ಇದಕ್ಕೆ ಪ್ರತೀಕಾರವಾಗಿ ತಾನು ಭಾರತದಲ್ಲಿ ಆಡಳಿತರೂಢ ಬಿಜೆಪಿ ನಾಯಕರ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದೆ ಎಂದು ಬಂಧಿತ ಐಸಿಎಸ್ ಉಗ್ರ ರಷ್ಯಾದ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಐಸಿಎಸ್ ಉಗ್ರನ ಬಂಧನದಿಂದಾಗಿ ಭಾರತದಲ್ಲಿ ನಡೆಯಬಹುದಾಗಿದ್ದ ಸಂಭಾವ್ಯ ದಾಳಿಯನ್ನು ತಪ್ಪಿಸಿದಂತೆ ಆಗಿದೆ.

ಭಾರತದಲ್ಲಿ ಗಣ್ಯರನ್ನು ಗುರಿಯಾಗಿಸಿ ಆತ್ಮಾಹುತಿ ಸ್ಪೋಟಕ್ಕೆ ಸಂಚು -ರಷ್ಯಾದಲ್ಲಿ ಓರ್ವ ಐಸಿಎಸ್ ಉಗ್ರನ ಬಂಧನ

ಭಾರತದ ಮೇಲೆ ಒಂದೆಡೆ ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆಗಳು ದಾಳಿಗೆ ಸಂಚು ರೂಪಿಸುತ್ತಲೇ ಇವೆ. ಮತ್ತೊಂದೆಡೆ ಐಎಸ್‌ಐಎಸ್ ಉಗ್ರರು ಭಾರತದಲ್ಲಿ ದಾಳಿಗೆ ಸಂಚು ರೂಪಿಸಿದ್ದಾರೆ. ಭಾರತದಲ್ಲಿ ಪ್ರವಾದಿ ಮೊಹ್ಮದ್‌ಗೆ ಅಪಮಾನ ಮಾಡಲಾಗಿದೆ. ಇದರ ಪ್ರತೀಕಾರ ತೀರಿಸಿಕೊಳ್ಳಲು ಭಾರತದಲ್ಲಿ ಆತ್ಮಾಹುತಿ ಸ್ಪೋಟ ನಡೆಸಲು ಐಸಿಎಸ್ ಸಂಘಟನೆಯ ಉಗ್ರನೊಬ್ಬ ಸಂಚು ರೂಪಿಸಿದ್ದ. ಆತ್ಮಾಹುತಿ ಸ್ಪೋಟಕ್ಕೆ ಸಂಚು ರೂಪಿಸಿದ್ದ ಐಸಿಎಸ್ ಉಗ್ರನನ್ನು ಭಾರತದ ಮಿತ್ರ ರಾಷ್ಟ್ರ ರಷ್ಯಾದಲ್ಲಿ ಬಂಧಿಸಲಾಗಿದೆ. ರಷ್ಯಾದ ಫೆಡರಲ್ ಸೆಕ್ಯೂರಿಟಿ ಸರ್ವೀಸ್‌ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಆತ್ಮಹತ್ಯಾ ಬಾಂಬರ್ ಭಾರತದಲ್ಲಿ ಸೇಡು ತೀರಿಸಿಕೊಳ್ಳಲು ದಾಳಿ ನಡೆಸಲು ಪ್ಲ್ಯಾನ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಬಂಧಿತ ಮಧ್ಯ ಏಷ್ಯಾದ ದೇಶವೊಂದರ ನಿವಾಸಿ. ರಷ್ಯಾ ಪ್ರಕಾರ, ಆರೋಪಿಯು ಈ ವರ್ಷದ ಏಪ್ರಿಲ್ ನಿಂದ ಜೂನ್ ವರೆಗೆ ಟರ್ಕಿಯಲ್ಲಿದ್ದ. ಅಲ್ಲಿ ಅವನನ್ನು ಐಸಿಎಸ್ ನಾಯಕನೊಬ್ಬ, ಐಸಿಎಸ್ ಭಯೋತ್ಪಾದನಾ ಸಂಘಟನೆಗೆ ಆತ್ಮಹತ್ಯಾ ಬಾಂಬರ್ ಆಗಿ ನೇಮಿಸಿಕೊಂಡಿದ್ದ. ಆರೋಪಿಯು ಟೆಲಿಗ್ರಾಮ್ ಮೂಲಕ ಐಸಿಎಸ್ ಸಭೆಗಳಲ್ಲಿ ಭಾಗವಹಿಸುತ್ತಿದ್ದ. ಜೊತೆಗೆ ಟರ್ಕಿ ದೇಶದ ಇಸ್ತಾನ್‌ಬುಲ್ ನಲ್ಲಿ ನಡೆದ ಐಸಿಎಸ್ ಸಭೆಗಳಲ್ಲೂ ಖುದ್ದಾಗಿ ಭಾಗವಹಿಸುತ್ತಿದ್ದ. ಭಾರತದಲ್ಲಿ ಬಿಜೆಪಿ ಪಕ್ಷ ಹಾಗೂ ಸರ್ಕಾರದ ಗಣ್ಯರನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಸ್ಪೋಟ ನಡೆಸಿ ಹತ್ಯೆಗೈಯುವ ಸಂಚು ರೂಪಿಸಿದ್ದ ಎಂದು ಈಗ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

“2022 ರಲ್ಲಿ, ನಾನು ಭಾರತಕ್ಕೆ ಹೊರಡಬೇಕಾದ ಸ್ಥಳದಿಂದ ನಾನು ರಷ್ಯಾಕ್ಕೆ ಹಾರಿಹೋದೆ, ಭಾರತದಲ್ಲಿ, ಅವರು ನನ್ನನ್ನು ಭೇಟಿಯಾಗಬೇಕು ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ್ದಕ್ಕಾಗಿ ಇಸ್ಲಾಮಿಕ್ ಸ್ಟೇಟ್ ಆದೇಶದ ಮೇರೆಗೆ ಭಯೋತ್ಪಾದಕ ದಾಳಿ ನಡೆಸಲು ನನಗೆ ಬೇಕಾದ ಎಲ್ಲಾ ವಸ್ತುಗಳನ್ನು ನೀಡಲಾಗಿತ್ತು. ,” ಎಂದು ಐಸಿಎಸ್‌ ವೀಡಿಯೊದಲ್ಲಿ ಹೇಳಿದ್ದಾರೆ.

ರಷ್ಯಾದ ಭದ್ರತಾ ಸಂಸ್ಥೆಯಾದ ಫೆಡರಲ್ ಸೆಕ್ಯೂರಿಟಿ ಸರ್ವೀಸ್ ಸಂಸ್ಥೆಯು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ. ವಿಚಾರಣೆ ವೇಳೆ ಉಗ್ರನ ಭಾರತದ ದಾಳಿಯ ಸಂಚು ಬಯಲಾಗಿದೆ. ಉಗ್ರ ಟರ್ಕಿಯಿಂದ ರಷ್ಯಾಗೆ ಬಂದಿದ್ದಾನೆ. ಬಳಿಕ ಭಾರತಕ್ಕೆ ಹೋಗಲು ಸೂಚನೆ ನೀಡಲಾಗಿತ್ತು. ಭಾರತದಲ್ಲಿ ಹೈಪ್ರೊಫೈಲ್ ಭಯೋತ್ಪಾದನಾ ದಾಳಿ ನಡೆಸಲು ಉಗ್ರನಿಗೆ ಸೂಚನೆ ನೀಡಲಾಗಿತ್ತು ಎಂಬುದು ಈಗ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಉಗ್ರನ ಐಸಿಎಸ್ ನ ಅಮೀರ್‌ನಿಗೆ ನಿಷ್ಠೆಯಿಂದ ಇರುವುದಾಗಿ ಪ್ರಮಾಣ ಮಾಡಿದ್ದ. ರಷ್ಯಾಕ್ಕೆ ಹೋಗಿ, ಅಲ್ಲಿ, ಪೇಪರ್ ದಾಖಲೆಗಳನ್ನ ಸಿದ್ದಪಡಿಸಿಕೊಂಡು ಭಾರತಕ್ಕೆ ಹೋಗಬೇಕೆಂದು ಸೂಚನೆ ನೀಡಲಾಗಿತ್ತು. ಉಗ್ರ, ಭಾರತಕ್ಕೆ ಹೊರಡುವ ಮೊದಲೇ ರಷ್ಯಾದಲ್ಲಿ ಸಿಕ್ಕಿಬಿದಿದ್ದಾನೆ. ರಷ್ಯಾ, ಭಾರತದ ಮಿತ್ರ ರಾಷ್ಟ್ರ. ಜೊತೆಗೆ ರಷ್ಯಾ ಕೂಡ ಉಗ್ರ ಸಂಘಟನೆಗಳ ಮೇಲೆ ತೀವ್ರ ನಿಗಾ ಇಟ್ಟಿದೆ.

ಭಾರತ ಸರ್ಕಾರವು ಕೂಡ ಸೈಬರ್ ಲೋಕದ ಮೇಲೆ ತೀವ್ರ ನಿಗಾ ಇಟ್ಟಿದೆ. ಸೋಷಿಯಲ್ ಮೀಡಿಯಾ ಮೂಲಕವೂ ಐಸಿಎಸ್ ಸಿದ್ದಾಂತವನ್ನು ಹರಡುವ ಕೆಲಸ ಮಾಡಲಾಗುತ್ತಿದೆ.

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು