Miss Universe: ವಿಶ್ವ ಸುಂದರಿ ಸ್ಪರ್ಧೆ 2023ರಿಂದ ವಿವಾಹಿತ ಮಹಿಳೆಯರು ಭಾಗವಹಿಸಲು ಅವಕಾಶ

2023 ರಿಂದ ವೈವಾಹಿಕ ಜೀವನ ನಡೆಸುವವರು ಮತ್ತು ಮಕ್ಕಳಾದವರು ಕೂಡ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ನೀಡಿದೆ.

Miss Universe: ವಿಶ್ವ ಸುಂದರಿ ಸ್ಪರ್ಧೆ 2023ರಿಂದ ವಿವಾಹಿತ ಮಹಿಳೆಯರು ಭಾಗವಹಿಸಲು ಅವಕಾಶ
Miss Universe
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 22, 2022 | 1:26 PM

ಇದು ಐತಿಹಾಸಿಕ ನಿರ್ಧಾರವಾಗಿದೆ,  ಪ್ರತಿಷ್ಠಿತ ವಿಶ್ವ ಸುಂದರಿ ಸ್ಪರ್ಧೆಯು ವಿವಾಹಿತ ಮಹಿಳೆಯರಿಗೆ ಭಾಗವಹಿಸಲು ಅವಕಾಶ ನೀಡಲು ಸಿದ್ಧವಾಗಿದೆ. ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆಗೆ ತಾಯಂದಿರು ಮತ್ತು ವಿವಾಹಿತ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ತನ್ನ ಸ್ಪರ್ಧೆಯ ಅರ್ಹತೆಯನ್ನು ವಿಸ್ತರಿಸಿದೆ. ಇಲ್ಲಿಯವರೆಗೆ ವಿಶ್ವ ಸುಂದರಿ ಸ್ಪರ್ಧೆಯ ನಿಯಮಗಳು ಮಿಸ್ ಯೂನಿವರ್ಸ್ ವಿಜೇತರು ಸಿಂಗಲ್ ಆಗಿರಬೇಕು ಅಂದರೆ ಮದುವೆಯಾಗಿರಬಾರದು, ಯುವ ಸಮೂಹಕ್ಕೆ ಈ ಅವಕಾಶವನ್ನು ನೀಡುತ್ತಿದ್ದರು. ಇದರ ಜೊತೆಗೆ ಮಿಸ್ ಯೂನಿವರ್ಸ್ ಬೇಕಾದ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಎಂದು ಹೇಳಿತ್ತು. ಮೆಕ್ಸಿಕೋವನ್ನು ಪ್ರತಿನಿಧಿಸುವಾಗ ಮಿಸ್ ಯೂನಿವರ್ಸ್ 2020 ಕಿರೀಟವನ್ನು ಪಡೆದ ಆಂಡ್ರಿಯಾ ಮೆಜಾ, ಹೊಸ ನಿಯಮ ಬದಲಾವಣೆಯನ್ನು ಸ್ವಾಗತಿಸಿದ್ದಾರೆ.

ನಮ್ಮ ಸಮಾಜ ಕೂಡ ಬದಲಾವಣೆಯಾಗುತ್ತಿದೆ. ಈ ಹೊತ್ತಿಲ್ಲ ನಮ್ಮ ಮಹಿಳೆಯರು ಒಂದು ಒಳ್ಳೆಯ ಸ್ಥಾನಮಾನವನ್ನು ಪಡೆಯುತ್ತಿದ್ದಾರೆ. ಹಿಂದೆ ಪುರುಷರು ಮಾತ್ರ ಸಾಧ್ಯವಿತ್ತು, ಆದರೆ ಇದೀಗ ಎಲ್ಲವೂ ಬದಲಾವಣೆಯಾಗಿದೆ. ಎಲ್ಲರಲ್ಲೂ ಮಹಿಳೆಯರು ಭಾಗವಹಿಸುತ್ತಿದ್ದಾರೆ. ಮಹಿಳೆಯರಿಗೆ ಇಂತಹ ಅವಕಾಶವನ್ನು ಮಾಡಿಕೊಂಡುವುದರಿಂದ ಕುಟುಂಬಗಳೊಂದಿಗೆ ತಮ್ಮ ಪ್ಯಾಶನ್ ಕೂಡ ಮಾಡಿಕೊಳ್ಳಲು ಇದೊಂದು ಸುವರ್ಣ ಅವಕಾಶ ಎಂದಿದ್ದಾರೆ.

ಭಾರತದ ಹರ್ನಾಜ್ ಸಂಧು 2021 ರ ವಿಶ್ವ ಸುಂದರಿ ಕಿರೀಟವನ್ನು ಪಡೆದರು. ಪಂಜಾಬ್ ಮೂಲದ ಹರ್ನಾಜ್ ಸಂಧು ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ 2021ರಲ್ಲಿ ಭಾರತವನ್ನು ಪ್ರತಿನಿಧಿಸಿದರು. ಹರ್ನಾಜ್ ಸಂಧು ಮೊದಲು ಕೇವಲ ಇಬ್ಬರು ಭಾರತೀಯರು ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ನಟಿರಾದ ಸುಶ್ಮಿತಾ ಸೇನ್ 1994 ಮತ್ತು ಲಾರಾ ದತ್ತಾ 2000ರಲ್ಲಿ ಭಾಗವಹಿಸಿದರು.