AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನಿ ಯುವತಿಯನ್ನು ಮದುವೆಯಾಗಿದ್ದ ಕೇರಳ ಮೂಲದ ಉಗ್ರ; ವಿವಾಹದ ದಿನವೇ ಬಾಂಬ್ ದಾಳಿಯಲ್ಲಿ ಹತ

ಅಫ್ಘಾನಿಸ್ತಾನದಲ್ಲಿ ಕೇರಳ ಮೂಲದ ಉಗ್ರನೊಬ್ಬ ಹತ್ಯೆಯಾಗಿದ್ದಾನೆ. ಆತನನ್ನು ನಜೀಬ್ ಅಲ್ ಹಿಂದಿ ಎಂದು ಹೇಳಲಾಗಿದೆ. ಈ ಕುರಿತು ಇಸ್ಲಾಮಿಕ್ ಸ್ಟೇಟ್ಸ್ ಶಾಖೆಯಾದ ಐಸ್​ಕೆಪಿ ತನ್ನ ನಿಯತಕಾಲಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನಿ ಯುವತಿಯನ್ನು ಮದುವೆಯಾಗಿದ್ದ ಕೇರಳ ಮೂಲದ ಉಗ್ರ; ವಿವಾಹದ ದಿನವೇ ಬಾಂಬ್ ದಾಳಿಯಲ್ಲಿ ಹತ
ಅಫ್ಘಾನಿಸ್ತಾನದಲ್ಲಿ ಮೃತಪಟ್ಟ ಭಾರತೀಯ ಮೂಲದ ಉಗ್ರ ನಜೀಬ್
TV9 Web
| Edited By: |

Updated on: Mar 11, 2022 | 1:52 PM

Share

ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ನ ಅಫ್ಘಾನಿಸ್ತಾನ ಮೂಲದ ಶಾಖೆ ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾವಿನೆನ್ಸ್ (ಐಎಸ್‌ಕೆಪಿ- ISKP) ಸಂಘಟನೆಗೆ ಸೇರಿದ ಭಾರತೀಯ ಪ್ರಜೆಯೊಬ್ಬ ಅಫ್ಘಾನಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ. ಆತ್ಮಹತ್ಯಾ ದಾಳಿಯಲ್ಲಿ ಆತ ಮರಣವನ್ನಪ್ಪಿದ್ದಾನೆ ಎಂದು ಇತ್ತೀಚೆಗೆ ಬಿಡುಗಡೆಯಾದ ಉಗ್ರಗಾಮಿ ಸಂಘಟನೆಯ ನಿಯತಕಾಲಿಕೆಯಲ್ಲಿ ಮಾಹಿತಿ ನೀಡಲಾಗಿದೆ. ಐಸ್​ಕೆಪಿಯ ನಿಯತಕಾಲಿಕೆ ‘ವಾಯ್ಸ್ ಆಫ್ ಖೊರಾಸನ್’ ಈ ಭಾರತೀಯ ಯುವಕನನ್ನು ‘ನಜೀಬ್ ಅಲ್ ಹಿಂದಿ’ (Najeeb Al Hindi) ಎಂದು ಗುರುತಿಸಿದೆ. ಆತ 23 ವರ್ಷದವನಾಗಿದ್ದು, ಕೇರಳ ಮೂಲದ ಇಂಜಿನಿಯರಿಂಗ್ (ಎಂ ಟೆಕ್) ವಿದ್ಯಾರ್ಥಿ ಎಂದು ಮಾಹಿತಿ ನೀಡಲಾಗಿದೆ. ನಿಯತಕಾಲಿಕೆಯ ಲೇಖನದಲ್ಲಿ ನಜೀಬ್ ಬಗ್ಗೆ, ಆತನ ಸಾವಿನ ಬಗ್ಗೆ ಅಥವಾ ಸಾವಿನ ನಿಖರ ಸಮಯದ ಬಗ್ಗೆ ಬರೆಯಲಾಗಿಲ್ಲ. ಆದರೆ, ನಜೀಬ್​ನನ್ನು ಪ್ರವಾದಿ ಮುಹಮ್ಮದ್ ಅವರ ಸಹಚರರಲ್ಲಿ ಒಬ್ಬರಾಗಿದ್ದ ಹಂಜಾಲಾ ಇಬ್ನ್ ಅಬಿ ಅಮೀರ್ ಅವರಿಗೆ ಹೋಲಿಸಲಾಗಿದೆ. ಕಾರಣ, ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾದ ಕೆಲವೇ ಗಂಟೆಗಳಲ್ಲಿ ನಜೀಬ್ ಸಾವನ್ನಪ್ಪಿದ್ದಾನೆ. ಹಂಜಾಲಾ ಕೂಡ 24ನೇ ವಯಸ್ಸಿನಲ್ಲಿ ಮದುವೆಯ ರಾತ್ರಿಯೇ ಯುದ್ಧಕ್ಕೆ ಹೊರಟು ಮಡಿದಿದ್ದರು.

ಇಸ್ಲಾಮಿಕ್ ಸ್ಟೇಟ್ ತನ್ನ ಲೇಖನದಲ್ಲಿ ನಜೀಬ್ ಭಾರತದಿಂದ ಐಸ್​ಕೆಪಿ ಅಸ್ತಿತ್ವದಲ್ಲಿರುವ ಅಫ್ಘಾನಿಸ್ತಾನದ ಖೊರಾಸನ್ ಪ್ರದೇಶಕ್ಕೆ ಬಂದಿದ್ದನೆಂದು ಹೇಳಿದೆ. ‘ನಜೀಬ್ ಸ್ವಯಂಪ್ರೇರಿತನಾಗಿ ಬಂದಿದ್ದ. ಇತರ ಉಗ್ರರನ್ನು ಭೇಟಿ ಮಾಡಿ, ಅಲ್ಲೇ ಉಳಿದಿದ್ದ. ಆತ ಶಾಂತನಾಗಿರುತ್ತಿದ್ದ, ಅಗತ್ಯವಿದ್ದಾಗ ಮಾತ್ರ ಮಾತನಾಡುತ್ತಿದ್ದ. ಪರ್ವತ ಪ್ರದೇಶಗಳಲ್ಲಿ ವಾಸಿಸುವುದನ್ನು ಆತ ಕಷ್ಟ ಎನ್ನಲಿಲ್ಲ. ಹುತಾತ್ಮನಾಗುವುದರ ಬಗ್ಗೆಯೇ ಯೋಚಿಸುತ್ತಿದ್ದ’ ಎಂದೆಲ್ಲಾ ನಿಯತಕಾಲಿಕೆಯಲ್ಲಿ ನಜೀಬ್​ ಕುರಿತು ಬರೆಯಲಾಗಿದೆ.

ಪಾಕಿಸ್ತಾನಿ ಯುವತಿಯನ್ನು ಮದುವೆಯಾಗಿದ್ದ ನಜೀಬ್:

ನಜೀಬ್​ಗೆ ಮದುವೆಯಾಗುವಂತೆ ಆತನ ಸ್ನೇಹಿತರು ಒತ್ತಡ ಹೇರುತ್ತಿದ್ದರು. ಪಾಕಿಸ್ತಾನಿ ಕುಟುಂಬದ ಯುವತಿಯಿಂದ ಪ್ರಸ್ತಾಪವಿತ್ತು. ಅವರೂ ಕೂಡ ಐಸ್​ಕೆಪಿಯೊಂದಿಗೆ ಸಂಬಂಧ ಹೊಂದಿದ್ದರು. ನಜೀಬ್ ಹಾಗೂ ಆ ಯುವತಿಯ ಮದುವೆಯ ದಿನವೇ ಶತ್ರುಗಳು ಅವರ ಪ್ರದೇಶದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಆತ್ಮಹತ್ಯಾ ದಾಳಿಯ ಬಗ್ಗೆ ನಜೀಬ್ ಮಾತನಾಡಿದ್ದ. ಅದಾಗ್ಯೂ ಯುವತಿಯ ತಂದೆಯ ಒತ್ತಾಯದ ಮೇರೆಗೆ ಮದುವೆಯಾದ. ನಂತರ ಶತ್ರುಗಳೊಂದಿಗೆ ಹೋರಾಡಲು ತೆರಳಿ, ಅಲ್ಲಿ ಮೃತಪಟ್ಟ ಎಂದು ನಿಯತಕಾಲಿಕೆಯಲ್ಲಿ ತಿಳಿಸಲಾಗಿದೆ.

ಆದರೆ ಈ ವಿವರಗಳಲ್ಲಿ ಶತ್ರು ಯಾರು, ಬಾಂಬ್ ದಾಳಿಯ ಕಾರಣ, ಸಮಯ ಮೊದಲಾದ ವಿವರಗಳನ್ನು ನೀಡಲಾಗಿಲ್ಲ. ದೇವರಲ್ಲಿ ನಂಬಿಕೆ ಇಲ್ಲದವರು ದಾಳಿ ಮಾಡಿದರು ಎಂದಷ್ಟೇ ಬರೆಯಲಾಗಿದೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅದರೊಂದಿಗೆ ಹಲವು ಬಾರಿ ಹೋರಾಡಿದೆ. ಆತ್ಮಹತ್ಯಾ ದಾಳಿಗಳನ್ನೂ ಸಂಘಟನೆ ನಡೆಸಿದ್ದು, ಭಯೋತ್ಪಾದಕ ಸಂಘಟನೆಯಾಗಿ ಗುರುತಿಸಿಕೊಂಡಿದೆ.

ಇತ್ತೀಚಿನ ವರ್ಷಗಳಲ್ಲಿ ಕೇರಳದಿಂದ ಹಲವರು ಐಸ್​ಕೆಪಿ ಸಂಘಟನೆಗೆ ಸೇರಿದ್ದಾರೆ ಎನ್ನಲಾಗಿದೆ. ಈ ಹಿಂದೆ ಅಮೇರಿಕಾ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಹಲವರು ಮೃತಪಟ್ಟಿದ್ದರು. 2019ರಲ್ಲಿ ಅಫ್ಘನ್ ಪಡೆಗಳು ನಂಗರ್​ಹಾರ್ ಪ್ರಾಂತ್ಯದಲ್ಲಿ ನಡೆಸಿದ್ದ ದಾಳಿಯ ವೇಳೆ ಕನಿಷ್ಠ 25 ಭಾರತೀಯರು ಸೆರೆ ಸಿಕ್ಕಿದ್ದರು ಎನ್ನಲಾಗಿತ್ತು. ಅದರಲ್ಲಿ 15 ಉಗ್ರರಾಗಿದ್ದು, ಉಳಿದವರು ಮಕ್ಕಳು ಹಾಗೂ ಮಹಿಳೆಯರಾಗಿದ್ದರು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಪಡೆಯುವ ಹೋರಾಟದ ವೇಳೆ ಐಸ್​ಕೆಪಿ ಹಲವು ಉಗ್ರರನ್ನು ಜೈಲುಗಳಿಂದ ಬಿಡಿಸಿತ್ತು. ಅವರೀಗ ಉಗ್ರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. 180ಕ್ಕೂ ಹೆಚ್ಚು ಜನರು ಮೃತಪಟ್ಟ ಕಾಬೂಲ್ ವಿಮಾನ ನಿಲ್ದಾಣದಲ್ಲಿನ ಆತ್ಮಹತ್ಯಾ ದಾಳಿ ಸೇರಿದಂತೆ ಹಲವು ದಾಳಿಗಳ ಹೊಣೆಯನ್ನು ಐಸ್​ಕೆಪಿ ಹೊತ್ತುಕೊಂಡಿದೆ.

ಇದನ್ನೂ ಓದಿ:

ವಿಜಯನಗರದಲ್ಲಿ ವಕೀಲರ ಮೇಲೆ ಚಾಕುವಿನಿಂದ ಹಲ್ಲೆ, ಬೆಂಗಳೂರಿನಲ್ಲಿ ಖಾಸಗಿ ಫೈನಾನ್ಸ್​​ನ 7 ಕಾರ್​ಗಳಿಗೆ ಬೆಂಕಿ

ವಿವಾದದಲ್ಲಿ ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ; ಆ ಒಂದು ದೃಶ್ಯ ತೋರಿಸದಿರಲು ಕೋರ್ಟ್ ಸೂಚನೆ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್