ಗಾಜಾದಲ್ಲಿ ಇಸ್ರೇಲಿ ಸೇನಾ ಕಾರ್ಯಾಚರಣೆ ಆರಂಭ, ಮತ್ತೆ ವಿನಾಶದ ಭಯ? ನೆತನ್ಯಾಹು ಹೇಳಿದ್ದೇನು?
ಗಾಜಾ ನಗರವನ್ನು ವಶಪಡಿಸಿಕೊಳ್ಳುವ ಯೋಜನೆಯನ್ನು ಇಸ್ರೇಲ್ ರಕ್ಷಣಾ ಸಚಿವರು ಅನುಮೋದಿಸಿದ್ದಾರೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸುಮಾರು 60,000 ಮೀಸಲು ಸೈನಿಕರನ್ನು ಕರೆಸಲಾಗಿದೆ. ಇಸ್ರೇಲಿ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಎಫಿ ಡೆಫ್ರಿನ್ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಗಾಜಾ ನಗರದ ಮೇಲೆ ಆರಂಭಿಕ ಕ್ರಮ ಮತ್ತು ದಾಳಿಯ ಮೊದಲ ಹಂತವನ್ನು ಪ್ರಾರಂಭಿಸಿದ್ದೇವೆ ಮತ್ತು ಈಗ ಐಡಿಎಫ್ ಗಾಜಾ ನಗರದ ಹೊರವಲಯವನ್ನು ವಶಪಡಿಸಿಕೊಂಡಿದೆ.

ಜೆರುಸಲೇಮ್, ಆಗಸ್ಟ್ 21: ಇಸ್ರೇಲಿ ಪಡೆ ಗಾಜಾದ ಮೇಲೆ ದಾಳಿ ಮಾಡಲು ಪ್ರಾರಂಭಿಸಿವೆ. ಗಾಜಾ ನಗರದಲ್ಲಿ ಪರಿಸ್ಥಿತಿ ಮತ್ತೊಮ್ಮೆ ವೇಗವಾಗಿ ಹದಗೆಡುತ್ತಿದೆ. ಇದರರ್ಥ ಮತ್ತೊಮ್ಮೆ ವಿನಾಶ, ಶೋಕ ಮತ್ತು ಸಾವಿನ ದೃಶ್ಯ ಗೋಚರಿಸುವ ಸಾಧ್ಯತೆಯನ್ನು ಒತ್ತಿ ಹೇಳುತ್ತದೆ. ಇಸ್ರೇಲ್(Irsael)ನ ಮಿಲಿಟರಿ ಕಾರ್ಯಾಚರಣೆಯ ಗುರಿ ಗಾಜಾ ನಗರವನ್ನು ವಶಪಡಿಸಿಕೊಳ್ಳುವುದಾಗಿದೆ. ಇದು ಮಾತ್ರವಲ್ಲದೆ, ಇಸ್ರೇಲಿ ಸೈನ್ಯ ಅಂದರೆ ಐಡಿಎಫ್ ಗಾಜಾದ ಹೊರವಲಯದಲ್ಲಿ ನಿಯಂತ್ರಣ ಸಾಧಿಸಿದೆ ಎಂದು ದೃಢಪಡಿಸಿದೆ.
ಇಸ್ರೇಲ್ ಗಾಜಾದ ವಿವಾದಿತ ಪ್ರದೇಶದೆಡೆಗೆ ಮತ್ತಷ್ಟು ನುಸುಳಿದೆ, ಗಾಜಾ ಪಟ್ಟಿಯನ್ನು ವಶಪಡಿಸಿಕೊಳ್ಳುವ ಯೋಜನೆಯೊಂದಿಗೆ ಮುನ್ನುಗ್ಗಿದೆ.ಈ ಕ್ರಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಎಚ್ಚರಿಕೆಯನ್ನು ಹುಟ್ಟುಹಾಕಿದೆ. ಗಾಜಾದಲ್ಲಿ ಕದನ ವಿರಾಮದ ಮಾತುಕತೆಗಳ ಮಧ್ಯೆ, ಇಸ್ರೇಲ್ ಗಾಜಾ ನಗರದಲ್ಲಿ ಹೊಸ ಮಿಲಿಟರಿ ಕಾರ್ಯಾಚರಣೆಗೆ ಸಿದ್ಧತೆಗಳನ್ನು ಹೆಚ್ಚಿಸಿದೆ.
ಬೆಂಜಮಿನ್ ನೆತನ್ಯಾಹು ಸರ್ಕಾರವು 60,000 ಮೀಸಲು ಸೈನಿಕರಿಗೆ ಕರೆ ನೀಡಿದೆ. ಗಾಜಾ ಪಟ್ಟಿಯ ಅತಿದೊಡ್ಡ ನಗರವಾದ ಗಾಜಾ ನಗರದ ಮೇಲಿನ ತನ್ನ ಆಕ್ರಮಣವನ್ನು ಇಸ್ರೇಲ್ ಮುಂದುವರಿಸುವುದಾಗಿ ಘೋಷಿಸಿದೆ. ಏತನ್ಮಧ್ಯೆ, ಇಸ್ರೇಲ್ ಸರ್ಕಾರವು ಪಶ್ಚಿಮ ದಂಡೆಯನ್ನು ವಿಭಜಿಸುವ ಯೋಜನೆಯನ್ನು ಅನುಮೋದಿಸಿದೆ.
ಗಾಜಾದಲ್ಲಿ ಹೊಸ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಯೋಜನೆಯನ್ನು ರಕ್ಷಣಾ ಸಚಿವರು ಅನುಮೋದಿಸಿದ್ದಾರೆ ಎಂದು ಇಸ್ರೇಲಿ ಸೇನೆ ತಿಳಿಸಿದೆ. ಈ ಕಾರ್ಯಾಚರಣೆಯಲ್ಲಿ, ಗಾಜಾದ ಜನನಿಬಿಡ ಪ್ರದೇಶಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಹಮಾಸ್ ಹೋರಾಟಗಾರರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಈ ಪ್ರದೇಶಗಳಲ್ಲಿ ಅಡಗಿಕೊಂಡಿದ್ದಾರೆ ಮತ್ತು ಅವರು ಇಸ್ರೇಲಿ ನಾಗರಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ ಎಂದು ಸೇನೆ ಅಂದಾಜಿಸಿದೆ, ಅವರಲ್ಲಿ 20 ಜನರು ಜೀವಂತವಾಗಿರುವ ಸಾಧ್ಯತೆಯಿದೆ.
ಮತ್ತಷ್ಟು ಓದಿ: ಇಸ್ರೇಲ್-ಇರಾನ್ ಉದ್ವಿಗ್ನತೆ; ಪ್ರಧಾನಿ ಮೋದಿಗೆ ಕರೆ ಮಾಡಿದ ಪಿಎಂ ಬೆಂಜಮಿನ್ ನೆತನ್ಯಾಹು
ಗಾಜಾ ನಗರದ ಜನನಿಬಿಡ ಪ್ರದೇಶಗಳಲ್ಲಿ ಇಸ್ರೇಲಿ ಸೇನೆ ಇನ್ನೂ ಯಾವುದೇ ಕಾರ್ಯಾಚರಣೆಯನ್ನು ಪ್ರಾರಂಭಿಸಿಲ್ಲ. ಈ ನಗರವನ್ನು ಹಮಾಸ್‌ನ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ನಗರದ ಕೆಳಗೆ ಸುರಂಗಗಳ ಜಾಲವಿದ್ದು, ಹೋರಾಟಗಾರರು ಅವುಗಳಲ್ಲಿ ಅಡಗಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಇಲ್ಲಿನ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಜೀವ ಮತ್ತು ಆಸ್ತಿಪಾಸ್ತಿ ನಷ್ಟವಾಗುವ ಸಾಧ್ಯತೆಯಿದೆ.
ಈ ಕ್ರಮವನ್ನು ತೀವ್ರಗೊಳಿಸುವ ಯೋಜನೆಯನ್ನು ಜಾರಿಗೆ ತಂದರೆ ಗಾಜಾದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಮಾನವ ಹಕ್ಕುಗಳ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಗಾಜಾ ಪ್ರಸ್ತುತ ಆಹಾರ, ನೀರು, ಔಷಧಗಳು ಮತ್ತು ಇಂಧನದ ತೀವ್ರ ಕೊರತೆಯನ್ನು ಎದುರಿಸುತ್ತಿದೆ.
ಇಸ್ರೇಲಿ ಸೈನಿಕರು 15 ಕ್ಕೂ ಹೆಚ್ಚು ಹಮಾಸ್ ಉಗ್ರಗಾಮಿಗಳೊಂದಿಗೆ ಘರ್ಷಣೆ ನಡೆಸಿದರು. ಉಗ್ರಗಾಮಿಗಳು ಸುರಂಗಗಳಿಂದ ಹೊರಬಂದು ಖಾನ್ ಯೂನಿಸ್ ಬಳಿ ಗುಂಡು ಹಾರಿಸುವ ಮತ್ತು ಟ್ಯಾಂಕ್ ವಿರೋಧಿ ಕ್ಷಿಪಣಿಗಳಿಂದ ದಾಳಿ ಮಾಡಿದರು. ದಾಳಿಯಲ್ಲಿ ಒಬ್ಬ ಸೈನಿಕ ಗಂಭೀರವಾಗಿ ಗಾಯಗೊಂಡಿದ್ದು, ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಮಾಸ್‌ನ ಅಲ್-ಕಸ್ಸಾಮ್ ಬ್ರಿಗೇಡ್‌ಗಳು ದಾಳಿಯನ್ನು ದೃಢಪಡಿಸಿದವು, ಇದರಲ್ಲಿ ಒಬ್ಬ ಹೋರಾಟಗಾರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ.
60 ದಿನಗಳ ಕದನ ವಿರಾಮಕ್ಕೆ ಹಮಾಸ್ ಒಪ್ಪಿಗೆ ಅಮೆರಿಕದ ಬೆಂಬಲದೊಂದಿಗೆ ಈಜಿಪ್ಟ್ ಮತ್ತು ಕತಾರ್, ಇಸ್ರೇಲ್ ಮತ್ತು ಗಾಜಾ ನಡುವೆ ಶಾಶ್ವತ ಕದನ ವಿರಾಮವನ್ನು ಖಚಿತಪಡಿಸಿಕೊಳ್ಳಲು ಮಧ್ಯಸ್ಥಿಕೆ ವಹಿಸುತ್ತಿವೆ. ಹಮಾಸ್ 60 ದಿನಗಳ ಕದನ ವಿರಾಮ ಪ್ರಸ್ತಾವನೆಯನ್ನು ಅನುಮೋದಿಸಿದೆ, ಇದರಲ್ಲಿ ಇಸ್ರೇಲಿ ಒತ್ತೆಯಾಳುಗಳನ್ನು ಹಂತಹಂತವಾಗಿ ಬಿಡುಗಡೆ ಮಾಡುವುದು, ಕೆಲವು ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡುವುದು ಮತ್ತು ಗಾಜಾಗೆ ಮಾನವೀಯ ನೆರವು ನೀಡಲು ಅವಕಾಶ ನೀಡುವುದು ಸೇರಿವೆ. ಆದಾಗ್ಯೂ, ಇಸ್ರೇಲ್ ಇದಕ್ಕೆ ಇನ್ನೂ ಪ್ರತಿಕ್ರಿಯಿಸಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




