ಇಸ್ರೇಲ್ ದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ, ಗಾರ್ಡ್ಸ್ ಕಮಾಂಡರ್ ಸಾವು: ವರದಿ

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ರಕ್ಷಣಾ ಸಚಿವ ಮತ್ತು IRGC ಕಮಾಂಡರ್ ಹತರಾಗಿದ್ದಾರೆ. ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ನಡೆದ ದಾಳಿ ಇದು. ಇರಾನ್ ಪ್ರತೀಕಾರ ತೀರಿಸಿಕೊಳ್ಳುವ ಭೀತಿ ಹೆಚ್ಚಿದ್ದು, ಭಾರತೀಯ ಪ್ರಜೆಗಳಿಗೆ 'ರೆಡ್ ಅಲರ್ಟ್' ಸೂಚನೆ ನೀಡಲಾಗಿದೆ. ಈ ಹತ್ಯೆಗಳು ಇಸ್ರೇಲ್-ಇರಾನ್ ಸಂಘರ್ಷವನ್ನು ತೀವ್ರಗೊಳಿಸಲಿವೆ. ಇರಾನ್ ಸಹ ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಿದೆ.

ಇಸ್ರೇಲ್ ದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ, ಗಾರ್ಡ್ಸ್ ಕಮಾಂಡರ್ ಸಾವು: ವರದಿ
ಇರಾನ್‌ನ ರಕ್ಷಣಾ ಸಚಿವ ಮತ್ತು IRGC ಕಮಾಂಡರ್

Updated on: Feb 28, 2026 | 9:18 PM

ಟೆಹ್ರಾನ್, ಫೆ.28: ಇರಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಸರಣಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಇಬ್ಬರು ಪ್ರಭಾವಿ ನಾಯಕರು ಹತರಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಇರಾನ್‌ನ ರಕ್ಷಣಾ ಸಚಿವ (Defence Minister) ಮತ್ತು ಇರಾನ್‌ನ ಅತ್ಯಂತ ಶಕ್ತಿಶಾಲಿ ಮಿಲಿಟರಿ ಘಟಕವಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್ ಈ ದಾಳಿಗೆ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಎನ್​​​ಎಐ ವರದಿಯನ್ನು ಪ್ರಕಟಿಸಿದೆ. ಇರಾನ್‌ನ ರಾಜಧಾನಿ ಟೆಹ್ರಾನ್ ಮತ್ತು ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಈ ವೇಳೆ ಇರಾನ್‌ನ ಉನ್ನತ ಅಧಿಕಾರಿಗಳು ಸಭೆ ನಡೆಸುತ್ತಿದ್ದ ಕಟ್ಟಡದ ಮೇಲೆಯೇ ದಾಳಿ ನಡೆದಿದೆ ಎನ್ನಲಾಗಿದೆ.

ಇಸ್ರೇಲ್ ಮಾಧ್ಯಮಗಳು ಈ ಹತ್ಯೆಯನ್ನು ದೃಢಪಡಿಸಿವೆಯಾದರೂ, ಇರಾನ್ ಸರ್ಕಾರವು ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ರಕ್ಷಣಾ ಸಚಿವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕೆಲವು ಮೂಲಗಳು ತಿಳಿಸಿವೆ. ಪರಮೋಚ್ಚ ನಾಯಕ ಅಲಿ ಖಮೇನಿ ಅವರ ಸ್ಥಿತಿಯ ಬಗ್ಗೆ ಈಗಾಗಲೇ ಗೊಂದಲವಿರುವ ಬೆನ್ನಲ್ಲೇ, ರಕ್ಷಣಾ ಸಚಿವರ ಹತ್ಯೆಯ ಸುದ್ದಿ ಇರಾನ್ ಸೈನ್ಯಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಈ ಪ್ರಮುಖ ನಾಯಕರ ಹತ್ಯೆಯ ನಂತರ ಇರಾನ್ ದೊಡ್ಡ ಮಟ್ಟದ ಪ್ರತೀಕಾರಕ್ಕೆ ಮುಂದಾಗುವ ಸಾಧ್ಯತೆ ಇದೆ. ಇದರಿಂದಾಗಿ ಅಲ್ಲಿರುವ ಭಾರತೀಯ ಪ್ರಜೆಗಳಿಗೆ ಈಗಾಗಲೇ ನೀಡಿರುವ ‘ರೆಡ್ ಅಲರ್ಟ್’ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಲಾಗಿದೆ. ಟೆಹ್ರಾನ್‌ನಲ್ಲಿರುವ ಇರಾನ್‌ನ ರಾಜಕೀಯ ಮತ್ತು ಭದ್ರತಾ ವಲಯದ ಉನ್ನತ ಅಧಿಕಾರಿಗಳು ಸಭೆ ಸೇರಿದ್ದ ಸ್ಥಳವನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಇಸ್ರೇಲ್ ಇದನ್ನು “ಮುನ್ನೆಚ್ಚರಿಕೆ ದಾಳಿ” ಎಂದು ಕರೆದಿದೆ.

ಇದನ್ನೂ ಓದಿ: ಅಲಿ ಖಮೇನಿ ಕಥೆ ಮುಗಿತಾ?: ಇಸ್ರೇಲ್ ಮಾಧ್ಯಮಗಳ ಸಾವಿನ ವರದಿ ಬೆನ್ನಲ್ಲೇ ಇರಾನ್ ಸಚಿವರು ಹೇಳಿದ್ದೇನು?

ಈ ಹತ್ಯೆಗಳ ಬಗ್ಗೆ ಇರಾನ್ ಸರ್ಕಾರದಿಂದ ಇನ್ನೂ ಅಧಿಕೃತ ದೃಢೀಕರಣ ಬಂದಿಲ್ಲ. ಆದರೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು, “ನಮಗೆ ತಿಳಿದಿರುವ ಮಟ್ಟಿಗೆ ಸುಪ್ರೀಂ ನಾಯಕ ಖಮೇನಿ ಅವರು ಸುರಕ್ಷಿತವಾಗಿದ್ದಾರೆ” ಎಂದು ಹೇಳುವ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಒಪ್ಪಿಕೊಂಡಿದ್ದಾರೆ. ಈ ಘಟನೆಯ ಬೆನ್ನಲ್ಲೇ ಇರಾನ್ ಕೂಡ ಇಸ್ರೇಲ್ ಮತ್ತು ಕತಾರ್, ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ಮಳೆಗರೆದಿದೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us